ಅಮರಾವತಿ:ನಿನ್ನೆ ಪ್ರೇಮಿಗಳ ದಿನವನ್ನು ವಿಶ್ವದಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗಿದೆ. ಆದರೆ ಮಹಾರಾಷ್ಟ್ರದ ಅಮರಾವತಿಯಲ್ಲಿರುವ ಮಹಿಳಾ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರೆಲ್ಲರು ತಾವು ಪ್ರೀತಿಸಿ ಮದುವೆಯಾಗುವುದಿಲ್ಲ, ಯಾವುದೇ ಕಾರಣಕ್ಕೂ ಪ್ರೀತಿಯ ಬಲೆಯಲ್ಲಿ ಬೀಳುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಅಮರಾವತಿಯ ಚಂದೂರ್​ನಲ್ಲಿರುವ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೆಲ್ಲರೂ ನಿನ್ನೆ ಪ್ರತಿಜ್ಞೆ ಮಾಡಿದ್ದಾರೆ. “ನಾನು ಯಾವುದೇ ಕಾರಣಕ್ಕೂ ಪ್ರೀತಿಯಲ್ಲಿ ಬೀಳುವುದಿಲ್ಲ. ಪ್ರೇಮ ವಿವಾಹವಾಗುವುದಿಲ್ಲ.” ಎಂದು ಮರಾಠಿ ಭಾಷೆಯಲ್ಲಿ ಪ್ರತಿಜ್ಞೆಯನ್ನು ಸ್ವೀಕರಿಸಿದ್ದಾರೆ.
ಈ ವಿಶೇಷ ಪ್ರತಿಜ್ಞೆಯ ಕುರಿತಾಗಿ ಮಾತನಾಡಿರುವ ವಿದ್ಯಾರ್ಥಿಗಳು, “ನಮಗೆ ನಮ್ಮ ತಂದೆ ತಾಯಿಯಲ್ಲಿ ಅಪಾರ ನಂಬಿಕೆಯಿದೆ. ಅವರು ನಮಗೆ ಯಾವ ರೀತಿಯ ಜೀವನ ಸಂಗಾತಿ ಬೇಕು ಎನ್ನುವುದನ್ನು ಆಯ್ಕೆ ಮಾಡುತ್ತಾರೆ. ಪ್ರೇಮ ವಿವಾಹದ ಅವಶ್ಯಕತೆ ನಮಗಿಲ್ಲ” ಎಂದು ತಿಳಿಸಿದ್ದಾರೆ.
ಕಾಲೇಜು ಪ್ರಾಂಶುಪಾಲರು ಮತ್ತು ಅಧ್ಯಾಪಕರ ಸಮ್ಮುಖದಲ್ಲೇ ವಿದ್ಯಾರ್ಥಿನಿಯರು ಈ ಪ್ರತಿಜ್ಞೆ ಮಾಡಿದ್ದು ಇದರ ಹಿಂದೆ ಬಲವಾದ ಕಾರಣವೊಂದಿದೆ ಎನ್ನಲಾಗಿದೆ. ಇತ್ತೀಚೆಗೆ ವಾರ್ಧಾ ಜಿಲ್ಲೆಯ ಹಿಂಗಾಂಘಾಟ್​ನಲ್ಲಿ 24 ವರ್ಷದ ಪ್ರಾಧ್ಯಾಪಕಿಯೊಬ್ಬರಿಗೆ ಬೆಂಕಿ ಹಚ್ಚಿ ಸಾಯಿಸಲಾಗಿತ್ತು. ಆಕೆಯ ಪ್ರಿಯತಮನೇ ಆಕೆಯನ್ನು ಕೊಂದಿರುವುದಾಗಿ ವರದಿಯಾಗಿತ್ತು. ಇದರಿಂದ ಮನನೊಂದ ಕಾಲೇಜು ಆಡಳಿತ ಮತ್ತು ವಿದ್ಯಾರ್ಥಿನಿಯರು ಈ ರೀತಿಯ ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
