ಬೆಂಗಳೂರು:ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ತೆಗೆದಿರುವ ತಗಾದೆ ವಿರುದ್ಧ ರಾಜ್ಯ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಲಿದೆ.
ಸುಪ್ರೀಂ ಕೋರ್ಟ್​ಗೆ ತಮಿಳುನಾಡು ಸರ್ಕಾರ ಸಲ್ಲಿಸಿರುವ ಮನವಿಯ ಸಾಧಕ-ಬಾಧಕ, ರಾಜ್ಯದ ಮನವಿ ಸ್ವರೂಪದ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಚಿವ ಸಂಪುಟ ಸಭೆ ಸುದೀರ್ಘವಾಗಿ ರ್ಚಚಿಸಿತು. ಅಡ್ವೋಕೇಟ್ ಜನರಲ್ ಅವರನ್ನು ಸಚಿವ ಸಂಪುಟ ಸಭೆಗೆ ಕರೆಸಿಕೊಂಡು ಮುಂದಿನ ಕಾನೂನು ಹೋರಾಟ, ರಾಜ್ಯ ಸರ್ಕಾರದ ನಡೆ ಹೇಗಿರಬೇಕೆಂದು ಸಮಾಲೋಚಿಸಿತು. ನಂತರ ತಮಿಳುನಾಡು ಕೋರಿಕೆ ವಿರೋಧಿಸಿ ಸುಪ್ರೀಂ ಕೋರ್ಟ್​ಗೆ ವಿಸõತ ಮನವಿ ಸಲ್ಲಿಸಲು ಸಭೆ ತೀರ್ವನಿಸಿತು. ತಕರಾರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿರುವ ಕಾರಣ ಹೆಚ್ಚಿನ ವಿವರ ಬಹಿರಂಗವಾಗಿಲ್ಲ.
ಸಮಚಿತ್ತದ ನಿಲುವು:ಕಾವೇರಿ ನೀರು ಹಂಚಿಕೆ, ಪೂರೈಕೆ ಹಾಗೂ ಬಳಕೆ ವಿಚಾರವನ್ನು ಭಾವನಾತ್ಮಕತೆಗಿಂತ ವಾಸ್ತವಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ, ಪರಿಹಾರ ಕಂಡುಕೊಳ್ಳಬೇಕು ಎಂಬ ಸಮಚಿತ್ತದ ನಿಲುವನ್ನು ರಾಜ್ಯ ಸರ್ಕಾರ ತಳೆದಿದೆ. ಮುಂಗಾರು ರಾಜ್ಯಕ್ಕೆ ತಡವಾಗಿ ಪ್ರವೇಶಿಸಿತು. ನಂತರವೂ ಸಮರ್ಪವಾಗಿ ಮಳೆ ಸುರಿಯದ ಕಾರಣ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ನೀರಿನ ಕೊರತೆಯಾಗಿದೆ. ರೈತರ ವಿಷಯದಲ್ಲಿ ಕರ್ನಾಟಕ ಅಥವಾ ತಮಿಳು ನಾಡು ಎಂಬ ತಾರತಮ್ಯವಿಲ್ಲ. ಭರಪೂರ ಮಳೆ ಸುರಿದಿದ್ದರೆ ಜಲಾಶಯಗಳು ಭರ್ತಿಯಾಗಿ ನದಿಪಾತ್ರಕ್ಕೆ ನೀರು ಹರಿಯುತ್ತಿತ್ತು. ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ರಾಜ್ಯದ ರೈತರಿಗೆ ನೀರು ಪೂರೈಕೆಯೇ ಕಷ್ಟಕರವಾಗಿದ್ದು, ತಮಿಳುನಾಡಿಗೆ ಪೂರೈಸ ಲಾಗುತ್ತಿಲ್ಲ. ಹಂಚಿಕೆ ಮತ್ತು ಸಂಕಷ್ಟವನ್ನು ಸಮನಾಗಿ ಹಂಚಿಕೊಳ್ಳಲು ರಾಜ್ಯ ಬಯಸುತ್ತದೆ. ನಿರೀಕ್ಷೆಯಂತೆ ನೀರಿನ ಲಭ್ಯತೆಯಿದ್ದಿದ್ದರೆ ನೀರು ಹಂಚಿಕೆ ಸೂತ್ರ ಪಾಲನೆಗೆ ಕಷ್ಟವೇ ಆಗುತ್ತಿದ್ದಿಲ್ಲ ಎಂದು ಸುಪ್ರೀಂಗೆ ರಾಜ್ಯ ಸರ್ಕಾರ ನಿವೇದಿಸಿಕೊಳ್ಳಲಿದೆ.
ಅಲ್ಲದೆ, ಜೂನ್​ನಿಂದ ಈವರೆಗೆ ಸುರಿದ ಮಳೆ, ಜಲಾಶಯದ ಒಳ-ಹೊರಹರಿವು, ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ದಾಖಲಾದ ಪ್ರಮಾಣ, ಮೆಟ್ಟೂರು ಜಲಾಶಯದ ಸಂಗ್ರಹದ ಅಂಕಿ-ಅಂಶಗಳು ಈ ಮನವಿಯಲ್ಲಿ ಅಡಕವಾಗಿರಲಿವೆ ಎಂದು ಮೂಲಗಳು ತಿಳಿಸಿವೆ.
ಹೋರಾಟ ಬೇಡ:ಸುಪ್ರೀಂ ಕೋರ್ಟ್​ಗೆ ರಾಜ್ಯ ಸರ್ಕಾರದ ಪರವಾಗಿ ಅಡ್ವೋಕೇಟ್ ಜನರಲ್ ಸೋಮವಾರ ಮನವಿ ಸಲ್ಲಿಸಲಿದ್ದಾರೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಈ ವಿಷಯ ಖಚಿತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಸರ್ವಪಕ್ಷಗಳ ಸಭೆ ಕರೆಯುವ ಇಂಗಿತ ವ್ಯಕ್ತಪಡಿಸಿದ್ದು, ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗಳು ಪ್ರತಿಭಟನೆ ಮಾಡುವುದು ಬೇಡವೆಂದು ವಿನಂತಿಸಿದರು. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಸೋಮವಾರ ಮಂಡ್ಯ ಜಿಲ್ಲೆ ಬಂದ್​ಗೆ ಕರೆ ಕೊಟ್ಟಿದ್ದರತ್ತ ಗಮನಸೆಳೆದಾಗ ಉತ್ತರಿಸಿದ ಅವರು, ಸರ್ವಪಕ್ಷ ಸಭೆಯನ್ನು ಸಿಎಂ ಆದಷ್ಟು ಬೇಗನೆ ಕರೆಯಲಿದ್ದು, ಬಂದ್ ಕೈಬಿಡಬೇಕೆಂಬ ಕೋರಿದರು.
ಕಾವೇರಿ ನದಿಪಾತ್ರದಲ್ಲಿ ನೀರಿಲ್ಲವೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಿದ್ದು, ನಂತರ ತಮಿಳುನಾಡಿಗೆ ನೀರು ಹರಿಸಿರುವುದು ದ್ವಂದ್ವ ನಿಲುವು ಅಲ್ಲವೆ ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಎಚ್.ಕೆ.ಪಾಟೀಲ್ ನಿರಾಕರಿಸಿ, ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಲಿರುವ ಮುನ್ನ ಯಾವುದೇ ಟಿಪ್ಪಣಿ ನೀಡುವುದು ಸರಿಯಲ್ಲವೆಂಬ ಸಮಜಾಯಿಷಿ ನೀಡಿದರು.
ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!

‘ಅಯ್ಯೋ ಪಾಪ..’ ಎಂದು ಹಣ ಹಾಕುವ ಮುನ್ನ ಹುಷಾರು: ಹೀಗೂ ವಂಚಿಸುತ್ತಾರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nineteen =
Remember me
