ನವದೆಹಲಿ:ಕರೊನಾ ವೈರಸ್​ ಭೀತಿ ಹಿನ್ನೆಲೆಯಲ್ಲಿ ಶಾಲೆಗಳು ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಇನ್ನೂ ನಿಶ್ಚಿತತೆ ಇಲ್ಲ.ಜುಲೈ,ಆಗಸ್ಟ್​ ಎಂದೆಲ್ಲಾ ಹೇಳಲಾಗುತ್ತಿದ್ದರೂ ಪರಿಸ್ಥಿತಿ ಅಲ್ಲಿಯವರೆಗೆ ನಿಯಂತ್ರಣಕ್ಕೆ ಬರುತ್ತದೆಯೋ ಇಲ್ಲವೋ ಎಂಬ ಬಗ್ಗೆಯೂ ಹಲವಾರು ರಾಜ್ಯಗಳಲ್ಲಿ ಹೇಳಲೂ ಸಾಧ್ಯವಿಲ್ಲ.
ಅನೇಕ ತಿಂಗಳವರೆಗೆ ಮಕ್ಕಳು ಮನೆಯಲ್ಲಿಯೇ ಇದ್ದು,ಅವರ ಪಾಠಕ್ಕೆ ಎಲ್ಲಿ ಧಕ್ಕೆಯಾಗಿಬಿಡುತ್ತದೆಯೋ ಎಂಬ ಆತಂಕದಲ್ಲಿ ಹಲವಾರು ಪಾಲಕರು ಇದ್ದಾರೆ.ಕೆಲವು ಶಾಲೆಗಳು ಆನ್​ಲೈನ್​ ಕೋರ್ಸ್​ ಆರಂಭಿಸಿವೆಯಾದರೂ,ಇನ್ನೂ ಹಲವೆಡೆ ಇದು ಕಷ್ಟಸಾಧ್ಯವಾದ ಮಾತು.
ಇದನ್ನೂ ಓದಿ:ಅಮೆರಿಕದ ಶ್ವೇತಭವನದಲ್ಲಿ ಮೊಳಗಿತು ವೇದ ಮಂತ್ರ ಘೋಷ- ಪುರೋಹಿತರ ಆಹ್ವಾನಿಸಿದ ಟ್ರಂಪ್​
ಇವೆಲ್ಲವುಗಳನ್ನು ಗಮನದಲ್ಲಿ ಇಟ್ಟುಕೊಂಡು ಮಕ್ಕಳು ಮನೆಯಲ್ಲಿಯೇ ಒಂದರಿಂದ12ನೇ ತರಗತಿವರೆಗಿನ ಪಠ್ಯಕ್ರಮವನ್ನು ಸುಲಭದಲ್ಲಿ ಅಧ್ಯಯನ ನಡೆಸಲು ಅನುಕೂಲ ಆಗುವ ನಿಟ್ಟಿನಲ್ಲಿ ದೂರದರ್ಶನ ಯೋಜನೆ ರೂಪಿಸುತ್ತಿದೆ.
ಮಾನವ ಸಂಪನ್ಮೂಲ ಸಚಿವಾಲಯವು ಸಚಿವಾಲಯವು ದೂರದರ್ಶನದಲ್ಲಿ12ಡೈರೆಕ್ಟ್ ಟು ಹೋಮ್(ಡಿಟಿಎಚ್)ಚಾನೆಲ್‌ಗಳನ್ನು ಆರಂಭಿಸಲು ಚಿಂತನೆ ನಡೆಸಿದ್ದು,ಈಗಾಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವೂ ಆಗಿದೆ.
ಒನ್​ ಕ್ಲಾಸ್​,ಒನ್​ ಚಾನೆಲ್​(ಒಂದು ವರ್ಗ,ಒಂದು ಚಾನೆಲ್​)ಯೋಜನೆಯ ಹೆಸರಿನಲ್ಲಿ ಇದನ್ನು ಆರಂಭಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ:ಟಿಕ್​ಟಾಕ್​ನಲ್ಲಿ ಕಣ್ಸನ್ನೆ ಸುಂದರಿಯ ಝಲಕ್​ ನೋಡಿ
“ಬಹಳಷ್ಟು ಶಾಲೆಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೂ,ಪ್ರತಿಯೊಬ್ಬರೂ ಡಿಜಿಟಲ್ ಜಗತ್ತಿಗೆ ಸರಿಯಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಇದು ಸದಾ ಸರ್ಕಾರವನ್ನು ಕಾಡುತ್ತಿದೆ.ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂಥದ್ದೊಂದು ಕಾರ್ಯ ರೂಪಿಸಲಾಗಿದೆ.ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ.ಇದರ ಜತೆಗೆ ಮಕ್ಕಳು ಮನೆಯಲ್ಲಿ ಅಧ್ಯಯನ ನಡೆಸುವ ಬದಲು ಆನ್‌ಲೈನ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಉಂಟಾಗುವ ಪರಿಣಾಮ ಕೂಡ ಭೀಕರವಾಗಿದ್ದು,ಅವರನ್ನುಅಧ್ಯಯನದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅವಶ್ಯಕತೆ ಇದೆ.ಆದ್ದರಿಂದಲೇ ಈ ಯೋಚನೆ ಎಂದಿದೆ ಕೇಂದ್ರ ಸರ್ಕಾರ.
ಇಂಟರ್​ನೆಟ್​ ಬಳಕೆ ಇಲ್ಲದ ಕಡೆಗಳಲ್ಲಿಯೂ ಮಕ್ಕಳಿಗೆ ಇದರ ಅನುಕೂಲ ತಲುಪಬೇಕೆಂದರೆ ಅದಕ್ಕಿರುವ ಒಂದೇ ಮಾರ್ಗ ದೂರದರ್ಶನ.ಆದ್ದರಿಂದ ಇದನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಇದು ಉಚಿತವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ:ಮದ್ಯಕ್ಕೆ ಇನ್ಮುಂದೆ ಆಧಾರ್​ ಕಡ್ಡಾಯ, ವಾರಕ್ಕೆರಡೇ ದಿನ ಖರೀದಿ- ಇದು ಹೈಕೋರ್ಟ್​ ತೀರ್ಪು
ಪ್ರತಿಯೊಂದು ಚಾನೆಲ್‌ನಲ್ಲಿ ಏನೇನು ವಿಷಯ ಇರ ಬೇಕೆಂದು ಶಿಕ್ಷಣ ಇಲಾಖೆ ನಿರ್ಧರಿಸಲಿದೆ.ಜತೆಗೆ ವಿಷಯ ಅಭಿವೃದ್ಧಿಪಡಿಸಲು ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸಂಸ್ಥೆಗಳ ತಜ್ಞರ ನೆರವು ಪಡೆಯಲು ಇಲಾಖೆ ಚಿಂತನೆ ನಡೆಸಿದೆ. 1ರಿಂದ12ನೇ ತರಗತಿಗೆ ಮೀಸಲಾಗಿರುವ ಈ ಚಾನೆಲ್‌ಗ‌ಳು ಉಚಿತವಾಗಿರಲಿದ್ದು,ಇವು ಆರಂಭವಾದ ಬಳಿಕ ಕೇಬಲ್‌ ಆಪರೇಟರ್‌ಗೆ ತಿಳಿಸಿ ಸಂಪರ್ಕ ಪಡೆಯಬಹುದಾಗಿದೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 3 =
Remember me
