ನವದೆಹಲಿ:ಕರ್ತವ್ಯ ನಿರ್ವಹಿಸುವಾಗ ಕರೊನಾ ಸೋಂಕು ತಗುಲಿ ಸಾವಿಗೀಡಾದ ಇಬ್ಬರು ಮುಂಚೂಣಿ ಕಾರ್ಯಕರ್ತರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿ ಹಣವನ್ನು ದೆಹಲಿ ಸರ್ಕಾರ ನೀಡಿದೆ. ದೆಹಲಿಯ ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರಾಗಿದ್ದ ಓಂಪಾಲ್ ಸಿಂಗ್ ಮತ್ತು ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ರಾಜ್​ಕುಮಾರ್​ ಅವರ ಕುಟುಂಬಕ್ಕೆ ಈ ಪರಿಹಾರ ಧನ ನೀಡಲಾಗಿದೆ.
ಈ ಕುಟುಂಬಗಳನ್ನು ಶುಕ್ರವಾರ (ಫೆಬ್ರವರಿ 19) ಖುದ್ದು ಭೇಟಿ ಮಾಡಿ, ಈ ಭಾರೀ ಮೊತ್ತದ ಹಣವನ್ನು ಚೆಕ್ ಮೂಲಕ ನೀಡಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, “ದೆಹಲಿಯ ಎಲ್ಲ ಕೋವಿಡ್ ವಾರಿಯರ್​ಗಳಿಗೆ ನಾನು ಸಲ್ಯೂಟ್ ಮಾಡುತ್ತೇನೆ” ಎಂದಿದ್ದಾರೆ. “ಕಳೆದ ಒಂದು ವರ್ಷ ಎಲ್ಲರಿಗೂ ಸಂಕಷ್ಟ ತಂದಿತ್ತು. ಆದರೆ ಕರೊನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೋವಿಡ್ ವಾರಿಯರ್​ಗಳು ಮುಂದಾಳತ್ವ ವಹಿಸಿದ್ದಾರೆ. ದೆಹಲಿಯ ನಾಗರಿಕರಿಗಾಗಿ ಸ್ವಾರ್ಥ ಮರೆತು ದುಡಿಯುತ್ತಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ:“ಕರೊನಾ ಲಸಿಕೆ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆ, ಎನ್​ಜಿಒಗಳನ್ನು ಬಳಸಿ”
ಕೋವಿಡ್​ ಡ್ಯೂಟಿಯ ವೇಳೆ ಪ್ರಾಣ ಕಳೆದುಕೊಂಡಿರುವ ಕೋವಿಡ್ ವಾರಿಯರ್​ಗಳ ಕುಟುಂಬಗಳಿಗೆ ಸರ್ಕಾರ ಈಗಾಗಲೇ 1 ಕೋಟಿ ರೂಪಾಯಿ ನೀಡುವುದಾಗಿ ಘೋಷಿಸಿತ್ತು. ಅವರ ನೋವನ್ನು ಕಡಿಮೆ ಮಾಡಲಾಗದಿದ್ದರೂ ಈ ಹಣದಿಂದ ಅವರಿಗೆ ಆರ್ಥಿಕ ಬೆಂಬಲ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದಿವಂಗತ ಓಂ ಪಾಲ್ ಸಿಂಗ್ ಅವರು ದೆಹಲಿಯ ಕಲ್ಯಾಣಪುರಿಯ ಸರ್ಕಾರಿ ಬಾಲಕರ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕೇಂದ್ರ ನಡೆಸುತ್ತಿದ್ದರು. ನಂದ್​ನಗರಿ ನಿವಾಸಿ ದಿವಂಗತ ರಾಜ್​ಕುಮಾರ್, ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಇವರಿಗೆ ಕರ್ತವ್ಯ ಸಮಯದಲ್ಲಿ ಕರೊನಾ ಸೋಂಕು ತಗುಲಿದ್ದು, ತೀವ್ರ ಅಸ್ವಸ್ಥರಾಗಿ ಅಸುನೀಗಿದ್ದರು.(ಏಜೆನ್ಸೀಸ್)
ಮತ್ತೆ ಹಬ್ಬುತ್ತಿದೆ ಕರೊನಾ… ಮತ್ತೊಬ್ಬ ಸಚಿವರಲ್ಲಿ ಕರೊನಾ ಸೋಂಕು ಪತ್ತೆ !
ಮನೆಗಾಗಿ ದುಡ್ಡು ಕಟ್ಟಿ ಕಾಯುತ್ತಿರುವ ಜನರಿಗೆ ಆಶಾಕಿರಣ
ಐಪಿಎಲ್ 2021 : ಪಂಜಾಬ್ ಕಿಂಗ್ಸ್ ತಂಡ ಸೇರಿದ ಶಾರುಖ್ ಖಾನ್ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 5 =
Remember me
