|ಕೀರ್ತಿನಾರಾಯಣ ಸಿ.ಬೆಂಗಳೂರು
ದೇಶದ ಎಲ್ಲ ರಾಜ್ಯಗಳ ಅಪರಾಧ ಪ್ರಕರಣ, ಆರೋಪಿಗಳ ಬಂಧನ, ಕೈದಿಗಳ ಪೂರ್ವಾಪರ, ಕೋರ್ಟ್ ವಿಚಾರಣೆ ವಿವರ, ಶಿಕ್ಷೆ ಪ್ರಮಾಣ ಸೇರಿ ಕ್ರಿಮಿನಲ್ ಪ್ರಕರಣಗಳ ಸಮಗ್ರ ಮಾಹಿತಿ ಇನ್ಮುಂದೆ ಒಂದೇ ವೇದಿಕೆಯಲ್ಲಿ ಸಿಗಲಿದೆ! ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯ ಐದು ವಿಭಾಗಗಳ ಸಂಯೋಜನೆ ಮುಖಾಂತರ ಪರಿಣಾಮಕಾರಿ ಹಾಗೂ ಆಧುನಿಕ ಪೊಲೀಸಿಂಗ್ ವ್ಯವಸ್ಥೆ ಸೃಷ್ಟಿಸುವ ನಿಟ್ಟಿನಲ್ಲಿ ಜಾರಿಗೊಳಿಸುತ್ತಿರುವ ‘ಒನ್ ಡೇಟಾ ಒನ್ ಎಂಟ್ರಿ’ ಯೋಜನೆ ಅನುಷ್ಠಾನ ಪ್ರಕ್ರಿಯೆ ಇದೇ ಏಪ್ರಿಲ್​ನಲ್ಲಿ ಶುರುವಾಗಲಿದೆ.
ಪೊಲೀಸ್ (ಅಪರಾಧ, ಕ್ರಿಮಿನಲ್ ನಿಗಾ ಮತ್ತು ಸಂಪರ್ಕ ಜಾಲ), ಇ-ಫೋರೆನ್ಸಿಕ್ (ವಿಧಿವಿಜ್ಞಾನ ಪ್ರಯೋಗಾಲಯಗಳು), ಇ-ಕೋರ್ಟ್ (ನ್ಯಾಯಾಲಯಗಳು), ಇ-ಪ್ರಾಸಿಕ್ಯೂಷನ್ ಮತ್ತು ಇ- ಜೈಲು (ಕಾರಾಗೃಹಗಳು) ಐಟಿ ವ್ಯವಸ್ಥೆಯನ್ನು ಇಂಟರ್ ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಂ ಯೋಜನೆಯಡಿ ಏಕೀಕರಣಗೊಳಿಸಲಾಗುತ್ತಿದೆ. ಡಿಜಿಟಲೀಕರಣದ ವ್ಯವಸ್ಥೆಯಡಿ ಬೆರಳ ತುದಿಯಲ್ಲೇ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸಮಗ್ರ ಮಾಹಿತಿ ದೊರೆಯಲಿದೆ. ಈ ಐದೂ ವಿಭಾಗಗಳ ದಂತ್ತಾಂಶ ಒಂದೆಡೆ ಸಂಯೋಜಿಸುವುದರಿಂದ ಯಾವುದೇ ರಾಜ್ಯದ ಅಪರಾಧ ಪ್ರಕರಣಗಳ ಎಲ್ಲ ಮಾಹಿತಿ ಒಂದೇ ಕಡೆ ಲಭ್ಯವಾಗಲಿದೆ. ಇದರಿಂದ ಶೀಘ್ರವಾಗಿ ಕೇಸಿನ ಮಾಹಿತಿ ವಿನಿಮಯವಾಗುವುದರಿಂದ ನ್ಯಾಯದಾನದ ಪ್ರಕ್ರಿಯೆ ವಿಳಂಬವಾಗುವುದಿಲ್ಲ. ಹೈಟೆಕ್ ಪೊಲೀಸ್ ವ್ಯವಸ್ಥೆ ಜಾರಿಯಾಗುವುದರ ಜತೆಗೆ ಪೊಲೀಸರ ತನಿಖಾ ಸಾಮರ್ಥ್ಯವೂ ಬಲಗೊಳ್ಳಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರತ್ಯೇಕ ದಾಖಲು ಅಗತ್ಯವಿಲ್ಲ:ಪ್ರಸ್ತುತ ಪೊಲೀಸ್, ಜೈಲು, ಎಫ್​ಎಸ್​ಎಲ್, ಅಭಿಯೋಜನೆ ಹಾಗೂ ನ್ಯಾಯಾಲಯ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಸಂಗ್ರಹಿಸುವ ದತ್ತಾಂಶವನ್ನು ಪ್ರತ್ಯೇಕವಾಗಿ ದಾಖಲಿಸುವ ವ್ಯವಸ್ಥೆ ಇದೆ. ಒನ್ ಡೇಟಾ ಒನ್ ಎಂಟ್ರಿ ತತ್ವದ ಮೇಲೆ ಜಾರಿಯಾಗುತ್ತಿರುವ ಐಸಿಜೆಎಸ್ ಯೋಜನೆಯಡಿ ಒಂದು ವಿಭಾಗದಲ್ಲಿ ಡೇಟಾ ನಮೂದು ಮಾಡಿದರೆ ಸಾಕು ಎಲ್ಲ ಕಡೆಗಳಲ್ಲೂ ಸಿಗಲಿದೆ.
ಲಾಭಗಳೇನು?:ಮೊದಲ ಹಂತದಲ್ಲಿ ಜಾರಿಯಾಗಿರುವ ಸಿಸಿಟಿಎನ್​ಎಸ್ (ಕ್ರೖೆಂ ಆಂಡ್ ಕ್ರಿಮಿನಲ್ ಟ್ರಾ್ಯಕಿಂಗ್ ನೆಟ್​ವರ್ಕ್ ಸಿಸ್ಟಂ) ಯೋಜನೆಯಡಿ ಆಯಾ ರಾಜ್ಯಗಳು ಪ್ರತ್ಯೇಕ ಐಟಿ ವ್ಯವಸ್ಥೆ ಹೊಂದಲು ಅವಕಾಶ ಕಲ್ಪಿಸಲಾಗಿತ್ತು. ದೇಶದ ಎಲ್ಲ ಪೊಲೀಸ್ ಠಾಣೆಗಳು ಇದರ ವ್ಯಾಪ್ತಿಗೆ ಒಳಪಟ್ಟಿವೆ. ಕ್ರಿಮಿನಲ್ ಪ್ರಕರಣದ ಎಫ್​ಐಆರ್​ನಿಂದ ನ್ಯಾಯಾಲಯದ ತೀರ್ಪಿನವರೆಗೆ ಇದರಲ್ಲಿ ಸಿಗುತ್ತಿವೆ. ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ದಾಖಲಿಸಲಾಗಿದೆ. ಯಾವುದೇ ರಾಜ್ಯದಲ್ಲಿ ಆರೋಪಿ ಅಪರಾಧ ಕೃತ್ಯವೆಸಗಿದ್ದರೆ ಆತನ ಪತ್ತೆಹಚ್ಚಲು ಸಾಧ್ಯವಾಗುತ್ತಿದೆ.
ಎಷ್ಟು ವೆಚ್ಚ, ಯಾವಾಗ ಪೂರ್ಣ?:ಸಿಸಿಟಿಎನ್​ಎಸ್ (ಕ್ರೖೆಂ ಆಂಡ್ ಕ್ರಿಮಿನಲ್ ಟ್ರಾ್ಯಕಿಂಗ್ ನೆಟ್​ವರ್ಕ್ ಸಿಸ್ಟಂ) ಯೋಜನೆಯ 2ನೇ ಹಂತವಾಗಿ 3375 ಕೋಟಿ ರೂ. ವೆಚ್ಚದಲ್ಲಿ ಐಸಿಜೆಎಸ್ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ಹೊಸ ಯೋಜನೆ ಜಾರಿಗೆ ರಾಜ್ಯಗಳಿಗೆ ಪ್ರತ್ಯೇಕವಾಗಿ ಕೇಂದ್ರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಬದಲಾಗಿ ಸಿಸಿಟಿಎನ್​ಎಸ್ ನಿಧಿಯನ್ನೇ ಬಳಸಿಕೊಳ್ಳಲು ಸೂಚಿಸಲಾಗಿದೆ. 2022ರ ಏಪ್ರಿಲ್​ನಿಂದ ಏಕೀಕರಣಗೊಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು, 2025-26ರ ವೇಳೆಗೆ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆ ತಲುಪಿಸುವ ಪಕ್ರಿಯೆ ಪೂರ್ಣಪ್ರಮಾಣದಲ್ಲಿ ಯೋಜನೆ ವ್ಯಾಪ್ತಿಗೆ ಒಳಪಡಲಿದೆ.
ಹೊಣೆಗಾರಿಕೆ ಯಾರಿಗೆ?:ಆಯಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ಯೋಜನೆಯನ್ನು ಜಾರಿಗೊಳಿಸುವ ಜವಾಬ್ದಾರಿ ನಿರ್ವಹಿಸಲಿದೆ. ಯೋಜನೆ ಅನುಷ್ಠಾನಗೊಳಿಸಲು ರಾಷ್ಟ್ರೀಯ ಮಾಹಿತಿ ಕೇಂದ್ರ, (ಎನ್​ಐಸಿ) ಎನ್​ಸಿಆರ್​ಬಿಗೆ ನೆರವು ಕೊಡಲಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − two =
Remember me
