ಅಮರಾವತಿ:ದೊಡ್ಡ ಮಗಳ ಆರೋಗ್ಯ ಹದಗೆಟ್ಟಿದೆ, ಆಕೆಗೆ ಚಿಕಿತ್ಸೆ ಕೊಡಿಸಬೇಕೆಂಬ ಕಾರಣಕ್ಕೆ ತಂದೆ ತಾಯಿ ಇನ್ನೊಬ್ಬ ಮಗಳನ್ನೇ ಮಾರಾಟ ಮಾಡಿರುವ ಘಟನೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ಕೇವಲ 10 ಸಾವಿರ ರೂಪಾಯಿಗೆ ಮಗಳನ್ನು ಮಾರಾಟ ಮಾಡಿರುವುದಾಗಿ ವರದಿಯಾಗಿದೆ.
ನೆಲ್ಲೂರಿನ ಆ ಕುಟುಂಬದಲ್ಲಿ 16 ವರ್ಷದ ಮತ್ತು 12 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು. ಕುಟುಂಬಕ್ಕೆ ಪರಿಚಯವಿದ್ದ ಚಿನ್ನ ಸುಬ್ಬಯ್ಯ ಹೆಸರಿನ ವ್ಯಕ್ತಿಯ ಹೆಂಡತಿ ಜಗಳವಾಡಿಕೊಂಡು ಗಂಡನನ್ನು ಬಿಟ್ಟು ಹೋಗಿದ್ದಳಂತೆ. ಅದಾದ ನಂತರ ಆತ ಈ ಹೆಣ್ಣು ಮಕ್ಕಳ ಕುಟುಂಬಕ್ಕೆ ಗಂಟು ಬಿದ್ದಿದ್ದು, ದೊಡ್ಡ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಕೇಳಿದ್ದ. ಆದರೆ ಆ ಸಮಯಕ್ಕೆ ಆಕೆಯ ತಂದೆ ತಾಯಿ ಒಪ್ಪಿರಲಿಲ್ಲ.
ಇತ್ತೀಚೆಗೆ ದೊಡ್ಡ ಮಗಳಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡಿದೆ. ಆಕೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುವುದಕ್ಕೆ ಹಣವಿಲ್ಲದ ಹಿನ್ನೆಲೆಯಲ್ಲಿ ಕುಟುಂಬ ಬೇರೊಂದು ನಿರ್ಧಾರ ಮಾಡಿದೆ. 12 ವರ್ಷದ ಮಗಳನ್ನು ಚಿನ್ನ ಸುಬ್ಬಯ್ಯನಿಗೆ ಕೇವಲ 10 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆತ ಆಕೆಯನ್ನು ಬುಧವಾರದಂದು ಮದುವೆಯಾಗಿದ್ದು, ದೂರದ ಊರಿನ ಸಂಬಂಧಿಕರ ಮನೆಗೆ ಕರೆದೊಯ್ದಿದ್ದಾನೆ. ಆತ ಕೊಟ್ಟ 10 ಸಾವಿರ ರೂಪಾಯಿಯಲ್ಲಿ ದೊಡ್ಡ ಮಗಳ ಚಿಕಿತ್ಸೆ ಮಾಡಿಸಲಾಗಿದೆ.
ಬಾಲಕಿಯನ್ನು ಚಿನ್ನ ಸುಬ್ಬಯ್ಯ ಕರೆದೊಯ್ದಾಗ ಆಕೆ ಜೋರಾಗಿ ಅಳಲಾರಂಭಿಸಿದ್ದಾಳೆ. ಅದನ್ನು ಕೇಳಿ ಅಕ್ಕ ಪಕ್ಕದ ಮನೆಯವರು ಬಂದು ಆತನನ್ನು ಪ್ರಶ್ನಿಸಿದ್ದಾರೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಗ್ರಾಮದ ಸರ್ಪಂಚ್​ಗೆ ವಿಷಯ ಮುಟ್ಟಿಸಲಾಗಿದೆ. ಸ್ಥಳೀಯ ಪೊಲೀಸರಿಗೂ ಈ ವಿಚಾರವಾಗಿ ಮಾಹಿತಿ ತಲುಪಿದ್ದು, ಮಕ್ಕಳ ಕಲ್ಯಾಣ ಇಲಾಖೆ ಮತ್ತು ಪೊಲೀಸ್​ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಇದೀಗ ಆಕೆಯನ್ನು ಶಿಶುಪಾಲನಾ ಕೇಂದ್ರದಲ್ಲಿ ಇಡಲಾಗಿದೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
60 ದೇಶಗಳಿಗೆ ಕರೊನಾ ಲಸಿಕೆ: ಜಗತ್ತಿನ ಕಣ್ಣು ಭಾರತದತ್ತ- ಪ್ರಧಾನಿಯನ್ನು ಹಾಡಿ ಹೊಗಳಿದ ವಿಶ್ವ ಆರೋಗ್ಯ ಸಂಸ್ಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
