ನವದೆಹಲಿ:ವಿಶ್ವಕಪ್​ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ಇಂದು ಅಫ್ಘಾನಿಸ್ತಾನ ತಂಡವನ್ನು 8 ವಿಕೆಟ್​ಗಳಿಂದ ಮಣಿಸುವ ಮೂಲಕ ಭರ್ಜರಿ ಎರಡನೇ ಜಯಭೇರಿ ಬಾರಿಸಿದೆ. ಕಪ್ತಾನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭರ್ಜರಿ ಜೊತೆಯಾಟದ ಮೂಲಕ ಭಾರತ ಈ ಜಯವನ್ನು ಕಂಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಇಂದು ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ 50 ಓವರ್​ಗಳಲ್ಲಿ 8 ವಿಕೆಟ್​ಗಳನ್ನು ಕಳೆದುಕೊಂಡು 272 ರನ್ ಗಳಿಸಿತ್ತು. ಆದರೆ ಭಾರತ ತಂಡ 35 ಓವರ್​ಗಳಲ್ಲಿ 2 ವಿಕೆಟ್​ಗಳ ನಷ್ಟದಲ್ಲಿ 273 ರನ್ ಗಳಿಸುವ ಮೂಲಕ ಜಯ ಗಳಿಸಿದೆ.
ಕಪ್ತಾನ ರೋಹಿತ್ ಶರ್ಮಾ ಅವರ ದಾಖಲೆಯ ಭರ್ಜರಿ ಶತಕ ಹಾಗೂ ವಿರಾಟ್ ಕೊಹ್ಲಿಯ ಅರ್ಧ ಶತಕ ಈ ಮ್ಯಾಚ್​ನ ಹೈಲೈಟ್ ಆಗಿದ್ದು, ಇಬ್ಬರ ಜೊತೆಯಾಟಕ್ಕೆ ಕ್ರಿಕೆಟ್​ ಪ್ರೇಮಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರೋಹಿತ್ ಶರ್ಮಾ 84 ಬಾಲ್​ಗಳಲ್ಲಿ 134 ರನ್​ ಬಾರಿಸುವ ಮೂಲಕ ಪ್ಲೇಯರ್ ಆಫ್ ದ ಮ್ಯಾಚ್ ಎನಿಸಿಕೊಂಡಿದ್ದಾರೆ. ಭಾರತ ತಂಡದ ಇಂದಿನ ಜಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಭಿನಂದನೆಗಳನ್ನು ತಿಳಿಸಿದ್ದಾರೆ.
Captain Rohit Sharma is adjudged the Player of the Match for his scintillating record-breaking century in the chase 🔝#TeamIndiaregister a compelling 8⃣-wicket victory over Afghanistan 👏👏
Scorecard ▶️https://t.co/f29c30au8u#CWC23|#INDvAFG|#MeninBluepic.twitter.com/tlTLOk2xrF
— BCCI (@BCCI)October 11, 2023

ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?

ಪೊದೆಯಲ್ಲಿ ಯುವ ಜೋಡಿ, ಫೋಟೋ ವೈರಲ್​: ಅಷ್ಟಕ್ಕೂ ಅಲ್ಲಿ ಆಗಿದ್ದೇನು?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 4 =
Remember me
