ಮುಂಬೈ:ಒಬೆರಾಯ್ ಗ್ರೂಪ್‌ನ ಪ್ರಮುಖ ಕಂಪನಿಯಾದ ಇಐಎಚ್​ (EIH) ಅಸೋಸಿಯೇಟೆಡ್ ಹೋಟೆಲ್ಸ್​ ಷೇರುಗಳ ಬೆಲೆ ಶುಕ್ರವಾರ ಶೇಕಡಾ 9.5 ಕ್ಕಿಂತ ಹೆಚ್ಚು ಏರಿಕೆ ಕಂಡಿವೆ. ಈ ಕಂಪನಿಯ ಷೇರುಗಳ ಈ ಹಠಾತ್ ಏರಿಕೆಯ ಹಿಂದಿನ ಕಾರಣವೆಂದರೆ ಬೋನಸ್ ಷೇರುಗಳಿಗೆ ದಾಖಲೆಯ ದಿನಾಂಕವನ್ನು ಘೋಷಿಸಿರುವುದು. ಕಂಪನಿಯು ಮೊದಲ ಬಾರಿಗೆ ಉಚಿತವಾಗಿ ಬೋನಸ್ ಷೇರುಗಳನ್ನು ನೀಡಲು ಹೊರಟಿದೆ.
ಜುಲೈ 29, 2024 ಅನ್ನು ಬೋನಸ್ ಷೇರುಗಳಿಗೆ ದಾಖಲೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ ಎಂದು ಕಂಪನಿಯು ಶುಕ್ರವಾರ ಷೇರು ಮಾರುಕಟ್ಟೆಗಳಿಗೆ ತಿಳಿಸಿದೆ. 10 ಮುಖಬೆಲೆಯ ಒಂದು ಷೇರನ್ನು ಬೋನಸ್ ಆಗಿ ನೀಡಲಾಗುವುದು ಎಂದು ಕಂಪನಿ ಈ ಹಿಂದೆ ಹೇಳಿತ್ತು. ಹೂಡಿಕೆದಾರರು ಈ ಬೋನಸ್ ಷೇರಿನ ಲಾಭವನ್ನು ಪಡೆಯಲು ಬಯಸಿದರೆ ಅವರು ದಾಖಲೆ ದಿನಾಂಕದ ಒಂದು ದಿನ ಮೊದಲು ಷೇರುಗಳನ್ನು ಖರೀದಿಸಬೇಕಾಗುತ್ತದೆ.
ಇಐಎಚ್ ಅಸೋಸಿಯೇಟೆಡ್ ಹೋಟೆಲ್ಸ್​ ಷೇರುಗಳ ಬೆಲೆ ಶುಕ್ರವಾರ 848.40 ರೂ. ಮುಟ್ಟಿದೆ. ಕಂಪನಿಯ ಷೇರುಗಳ ಬೆಲೆ 9.50 ಪ್ರತಿಶತದಷ್ಟು ಏರಿಕೆಯಾಗಿದ್ದು, ಇಂಟ್ರಾ-ಡೇ ವಹಿವಾಟಿನಲ್ಲಿ 925.50 ರೂ.ಗೆ ತಲುಪಿದ್ದವು. ಇದು ಈ ಷೇರಿನ 52 ವಾರಗಳ ಗರಿಷ್ಠ ಬೆಲೆಯಾಗಿದೆ. ಈ ಷೇರಿನ 52 ವಾರಗಳ ಕನಿಷ್ಠ ಬೆಲೆ ರೂ. 418.55 ಆಗಿದೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ, ಈ ಷೇರುಗಳ ಬೆಲೆಗಳಲ್ಲಿ 19 ಪ್ರತಿಶತ ಹೆಚ್ಚಳವಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ಶೇ. 91ರಷ್ಟು ಲಾಭ ಹೂಡಿಕೆದಾರರಿಗೆ ಸಿಕ್ಕಿದೆ. ಒಂದು ವರ್ಷದಲ್ಲಿ 73 ಪ್ರತಿಶತದಷ್ಟು ಹೆಚ್ಚಾಗಿದೆ.
ಚೀನಾ ಸ್ಮಾರ್ಟ್‌ಫೋನ್ ಕಂಪನಿಯಲ್ಲಿ ಪಾಲು ಖರೀದಿಸಲು ಟಾಟಾ ಗ್ರೂಪ್​ ಆಸಕ್ತಿ

ಅದಾನಿ ಎಂಟರ್‌ಪ್ರೈಸಸ್‌ನಲ್ಲಿ ಷೇರು ಖರೀದಿಸಿ ಪಾಲು ಹೆಚ್ಚಿಸಿಕೊಂಡ ಗೌತಮ್​ ಅದಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + ten =
Remember me
