ಇಂದೋರ್:ಇನ್ನೇನು ಮಾವಿನಹಣ್ಣಿನ ಸೀಸನ್ ಮುಗಿದೇ ಹೋಗುತ್ತೆ ಎನ್ನುವ ಈ ಸಮಯದಲ್ಲಿ ಮಧ್ಯಪ್ರದೇಶದಲ್ಲಿ ಒಂದು ವಿಶಿಷ್ಟ ತಳಿಯ ಮಾವಿನಮರ ಈಗ ಫಸಲು ನೀಡಲು ಆರಂಭಿಸಿದೆ. ಅದೆಂದರೆ ಗುಜರಾತ್​ ಗಡಿಯಲ್ಲಿರುವ ಅಲಿರಜ್​ಪುರ ಜಿಲ್ಲೆಯ ಕಥ್ಥಿವಾಡ ಪ್ರದೇಶದಲ್ಲಿ ಮಾತ್ರ ಬೆಳೆಯುವ ನೂರ್​ಜಹಾನ್ ಮಾವಿನಹಣ್ಣು !
ಬೇರೆ ಹಣ್ಣುಗಳು ಡಜನ್​ಗಟ್ಟಲೆ ಸಿಗುವ ಹಣದಲ್ಲಿ ಒಂದೇ ನೂರ್​ಜಹಾನ್​ ಹಣ್ಣು ಮಾರಾಟವಾಗುತ್ತದೆ ಎಂಬುದು ವಿಶೇಷ. ಒಂದು ಹಣ್ಣಿಗೆ 500 ರಿಂದ 1,000 ರೂ.ಗಳವರೆಗೆ ಹಣ ತೆತ್ತು ಖರೀದಿಸಲು ಗ್ರಾಹಕರು ಸಿದ್ಧವಾಗಿರುತ್ತಾರಂತೆ ! ಇನ್ನು ಈ ಹಣ್ಣಿನ ಗಾತ್ರವೂ ತುಂಬಾ ದೊಡ್ಡದು. ಒಂದು ಅಡಿಗೂ ಹೆಚ್ಚು ಉದ್ದ ಬೆಳೆಯುವ ಈ ಮಾವಿನ ಹಣ್ಣು 2 ರಿಂದ 3.5 ಕೆಜಿಗಳಷ್ಟು ತೂಕ ಹೊಂದಿರುತ್ತವೆ.
ಇದನ್ನೂ ಓದಿ:ಮಂದಹಾಸ ಮೂಡಿಸಿದ ಮುಂಗಾರು; ನಾಲ್ಕಾರು ದಿನ ಮೊದಲೇ ಆಗಮನ..
“ನನ್ನ ತೋಟದಲ್ಲಿರುವ ಮೂರು ನೂರ್​ಜಹಾನ್ ಮಾವಿನಮರಗಳಲ್ಲಿ 250 ಹಣ್ಣುಗಳು ಬೆಳೆದಿವೆ. ಸಾಮಾನ್ಯವಾಗಿ ಜನವರಿ-ಫೆಬ್ರವರಿಯಲ್ಲಿ ಹೂವು ಬಿಡಲು ಆರಂಭಿಸಿ, ಜೂನ್ ತಿಂಗಳು ಶುರುವಾದಂತೆ ಹಣ್ಣು ನೀಡುತ್ತವೆ. ಈ ಹಣ್ಣುಗಳ ಅಡ್ವಾನ್ಸ್​ ಬುಕಿಂಗ್ ಆಗಲೇ ಆರಂಭವಾಗಿದೆ” ಎಂದು ಕತ್ಥಿವಾಡದ ರೈತ ಶಿವರಾಜ್​ ಸಿಂಗ್​ ಜಾಧವ್​ ಹೇಳಿದ್ದಾರೆ. ಮಧ್ಯಪ್ರದೇಶ ಮತ್ತು ಗುಜರಾತ್​ನ ಜನರೇ ಈ ಹಣ್ಣಿಗೆ ಮುಖ್ಯ ಗ್ರಾಹಕರು ಎನ್ನಲಾಗಿದೆ.
ಕಳೆದ ಬಾರಿಗಿಂತ ಈ ವರ್ಷ ಫಸಲು ಚೆನ್ನಾಗಿ ಬಂದಿದ್ದರೂ, ಕರೊನಾದಿಂಗಾಗಿ ವ್ಯಾಪಾರಕ್ಕೆ ಹೊಡೆತ ಬೀಳಬಹುದೆಂದು ಮತ್ತೊಬ್ಬ ಬೆಳೆಗಾರ ಇಶಖ್​ ಮನ್ಸೂರಿ ಹೇಳಿದ್ದಾರೆ. 2019 ರಲ್ಲಿ ತಮ್ಮ ತೋಟದಲ್ಲಿ ಒಂದೊಂದು ನೂರ್​ಜಹಾನ್ ಹಣ್ಣು ಸುಮಾರು 2.75 ಕೆಜಿ ತೂಕ ಹೊಂದಿದ್ದು, ಒಂದಕ್ಕೆ 1,200 ರೂ. ಬೆಲೆಯಲ್ಲಿ ಮಾರಾಟವಾಗಿದ್ದವು ಎಂದಿದ್ದಾರೆ.(ಏಜೆನ್ಸೀಸ್)
ಮಹಿಳೆ ದೇಹದಲ್ಲಿ 216 ದಿನಗಳಿಂದ ಬೀಡುಬಿಟ್ಟು, 32 ಬಾರಿ ರೂಪಾಂತರ ಹೊಂದಿದ ಕರೊನಾ!
ನೂತನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅಧಿಕಾರ ಹಸ್ತಾಂತರಕ್ಕೂ ಬಾರದ ರೋಹಿಣಿ ಸಿಂಧೂರಿ
ಅನ್​​ಲಾಕ್​ ಬಸ್​ ಸಂಚಾರಕ್ಕೆ ಸಿದ್ಧತೆ : ಸಾರಿಗೆ ನೌಕರರಿಗೆ ಕರ್ತವ್ಯದ ಕರೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 5 =
Remember me
