ನವದೆಹಲಿ: ಗ್ರಾಮೀಣ ಭಾರತದಲ್ಲಿ ನಿರುದ್ಯೋಗ ಪ್ರಮಾಣ 24ನೇ ತಾರೀಖಿಗೆ ಕೊನೆಗೊಂಡ ವಾರದಲ್ಲಿ ಶೇಕಡ 25.09 ತಲುಪಿದೆ. ಅದಕ್ಕೂ ಹಿಂದಿನ ವಾರದಲ್ಲಿ ಇದು ಶೇಕಡ 22.79 ಇತ್ತು. ಇದೇ ಅವಧಿಯಲ್ಲಿ ನಗರ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣ ಒಂದು ತಿಂಗಳ ಕೆಳಮಟ್ಟಕ್ಕೆ ಇಳಿಕೆಯಾಗಿದೆ ಎಂದು ಸೆಂಟರ್​ ಫಾರ್ ಮಾನಿಟರಿಂಗ್​ ಆಫ್​ ಇಂಡಿಯನ್ ಎಕಾನಮಿ (ಸಿಎಂಐಇ) ಸೋಮವಾರ ಡೇಟಾ ಹೇಳಿದೆ.
ಇದನ್ನೂ ಓದಿ:ಸೋಂಕಿಗೆ ಸೆನ್ಸ್ ಮಾಸ್ಕ್ ಶಾಕ್
ಗ್ರಾಮೀಣ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುವ ಹಂತದಲ್ಲಿ ಅಲ್ಲಿನ ನಿರುದ್ಯೋಗ ಪ್ರಮಾಣ ಶೇಕಡ 25.09ಕ್ಕೆ ಏರಿಕೆಯಾಗಿದೆ. ಅಂದರೆ, ಗ್ರಾಮೀಣ ಭಾರತದಲ್ಲಿ ನಾಲ್ವರಲ್ಲಿ ಒಬ್ಬರು ಉದ್ಯೋಗ ಕಳೆದುಕೊಂಡು ನಿರುದ್ಯೋಗ ಎದುರಿಸುತ್ತಿದ್ದಾರೆ. ಲಕ್ಷಾಂತರ ಜನ ಈಗ ಪಟ್ಟಣ ತೊರೆದು ಗ್ರಾಮಗಳಿಗೆ ತೆರಳುತ್ತಿರುವುದರಿಂದ ಈ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಉಗ್ರರ ಹತ್ಯೆ
ಭಾರತೀಯ ರೈಲ್ವೆ ಹೇಳಿಕೆ ಪ್ರಕಾರ, ಮೇ 1ರಿಂದೀಚೆಗೆ 35 ಲಕ್ಷ ವಲಸಿಗರನ್ನು ಶ್ರಮಿಕ್ ಸ್ಪೆಷಲ್ ಟ್ರೇನ್​ ಮೂಲಕ ಸಾಗಿಸಿದ್ದು, ಇನ್ನೂ 36 ಲಕ್ಷ ಜನರನ್ನು ಮುಂದಿನ 8-10 ದಿನಗಳ ಅವಧಿಯಲ್ಲಿ ಕರೆದೊಯ್ಯಲಿದೆ. ಈ ಮರುಪ್ರಯಾಣದಿಂದಾಗಿ ಗ್ರಾಮೀಣ ಭಾಗದಲ್ಲಿ ಕಾರ್ಮಿಕ ಶಕ್ತಿ ಹೆಚ್ಚಾಗಲಿದೆ. (ಏಜೆನ್ಸೀಸ್)
ಶೀಘ್ರವೇ ರಸ್ತೆ ತುಂಬಾ ಓಡಾಡಲಿವೆ ಜಿಪಿಎಸ್​, ಜಿಯೋ ಫೆನ್ಸಿಂಗ್ ಅಳವಡಿಸಿದ ಮೊಬೈಲ್ ಪೆಟ್ರೋಲ್ ಪಂಪ್​​ಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 6 =
Remember me
