ಬೆಂಗಳೂರು:ಮೆಸೇಜಿಂಗ್ ಆ್ಯಪ್​ಗಳ ಪೈಕಿ ಮುಂಚೂಣಿಯಲ್ಲಿರುವ ವಾಟ್ಸ್​ಆ್ಯಪ್ ಹೊಸದಾಗಿ ಬಿಟ್ಟಿರುವ ಚಾನೆಲ್ ಫೀಚರ್​ ಇದೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಕಳೆದ ಎರಡು ಮೂರು ದಿನಗಳಿಂದ ಇದನ್ನು ಬಳಕೆದಾರರಿಗೆ ಈ ಫೀಚರ್​ ನೀಡಲಾಗಿದ್ದು, ಜನರು ಇದರ ಬಗ್ಗೆ ಮಾತನಾಡಲಾರಂಭಿಸಿದ್ದಾರೆ.
ವಿಶೇಷವೆಂದರೆ ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್ ಚಾನೆಲ್ ಕ್ರಿಯೇಟ್ ಆಗಿದ್ದು, ಒಂದು ದಿನ ಕಳೆಯುವಷ್ಟರಲ್ಲಿ ಅದಕ್ಕೆ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಆಗಿದ್ದಾರೆ. ಸದ್ಯ ಮೋದಿಗೆ ವಾಟ್ಸ್​ಆ್ಯಪ್ ಚಾನೆಲ್​ನಲ್ಲಿ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಹೀಗೆ ಪ್ರಧಾನಿ ಮೋದಿ ವಾಟ್ಸ್​ಆ್ಯಪ್ ಚಾನೆಲ್​ನಲ್ಲಿ ಮೋಡಿ ಮಾಡಿದ್ದಾರೆ.
ಇತ್ತ ಸಿದ್ದರಾಮಯ್ಯ ವಾಟ್ಸ್​ಆ್ಯಪ್ ಚಾನೆಲ್ ಹೊಂದಿದ ಮುಖ್ಯಮಂತ್ರಿಗಳ ಪೈಕಿ ಮೊದಲಿಗರು ಎನಿಸಿಕೊಂಡಿದ್ದಾರೆ. ಸದ್ಯ ದೆಹಲಿ, ಉತ್ತರಪ್ರದೇಶ, ಗುಜರಾತ್, ಪಂಜಾಬ್​ ಮುಖ್ಯಮಂತ್ರಿಗಳು ವಾಟ್ಸ್​ಆ್ಯಪ್​ನಲ್ಲಿ ಚಾನೆಲ್ ಹೊಂದಿದ್ದಾರೆ. ಆದರೆ ಇವರೆಲ್ಲರಿಗಂತಲೂ ಮೊದಲು ವಾಟ್ಸ್ಆ್ಯಪ್ ಚಾನೆಲ್ ಹೊಂದಿರುವ ಮುಖ್ಯಮಂತ್ರಿ ಎಂದರೆ ಕರ್ನಾಟಕದ ಸಿದ್ದರಾಮಯ್ಯ. ಸದ್ಯ ನರೇಂದ್ರ ಮೋದಿ ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್​ ಚಾನೆಲ್ ಇದ್ದರೂ ಪ್ರಧಾನಮಂತ್ರಿಯ ಅಧಿಕೃತ ವಾಟ್ಸ್​ಆ್ಯಪ್ ಚಾನೆಲ್ ಇನ್ನೂ ಕ್ರಿಯೇಟ್ ಆಗಿಲ್ಲ.
ಪ್ರಧಾನಿ ನರೇಂದ್ರ ಮೋದಿ ವಾಟ್ಸ್​ಆ್ಯಪ್ ಚಾನೆಲ್​ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ:https://whatsapp.com/channel/0029Va8IaebCMY0C8oOkQT1F
ಕರ್ನಾಟಕದ ಮುಖ್ಯಮಂತ್ರಿ ವಾಟ್ಸ್​ಆ್ಯಪ್ ಚಾನೆಲ್​ಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ:https://whatsapp.com/channel/0029Va71PkqBKfi3ZmSit71u
ಸಿದ್ದರಾಮಯ್ಯಗೆ ಅಡುಗೆ ಮಾಡಲು ಬರುತ್ತಾ? ಹೆಂಡ್ತಿ ಹತ್ರ ಸಿಎಂ ಯಾವತ್ತಾದ್ರೂ ಬೈಸಿಕೊಂಡಿದ್ರಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
