ಬೆಂಗಳೂರು:ಡ್ರಗ್ಸ್​ ಮಾರಾಟ ಜಾಲದಲ್ಲಿ ಈಗಾಗಲೇ ಹಲವಾರು ನಟಿಯರು ಹೆಸರು ಕೇಳಿಬಂದಿದ್ದು, ಸ್ಯಾಂಡಲ್​ವುಡ್​ನಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾಣಿ ಮುಂತಾದವರೆಲ್ಲ ಬಂಧನಕ್ಕೆ ಒಳಗಾಗಿದ್ದೆಲ್ಲ ಜನರು ಮರೆತು ಹೋಗಿರಬಹುದು ಎಂಬಷ್ಟರಲ್ಲಿ ಈಗ ಮತ್ತೊಬ್ಬ ನಟಿ ಬಂಧನಕ್ಕೆ ಒಳಗಾಗಿದ್ದಾರೆ.
ಮುಂಬೈನ ಮಾದಕ ವಸ್ತು ನಿಯಂತ್ರಣ (ಎನ್​ಸಿಬಿ) ವಿಭಾಗದ ಪೊಲೀಸರ ಕಾರ್ಯಾಚರಣೆ ವೇಳೆ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಅರ್ಥಾತ್ 400 ಗ್ರಾಮ್​ನಷ್ಟು ಮಾದಕ ವಸ್ತು ಸಿಕ್ಕಿದ್ದು, ಪೊಲೀಸರು ಹೈದರಾಬಾದ್​ನಲ್ಲಿ ನಟಿಯೊಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಕೆಲವು ಸಮಯದಿಂದ ಸಿನಿಮಾ ಚಟುವಟಿಕೆಯಿಂದ ದೂರವಿದ್ದು ಸುದ್ದಿಯಲ್ಲಿರದ ಈ ನಟಿಯ ಹೆಸರು ಈಗ ಡ್ರಗ್ಸ್​ ಪ್ರಕರಣದಿಂದಾಗಿ ಮುನ್ನೆಲೆಗೆ ಬರುವಂತಾಗಿದೆ.
ಅಂದಹಾಗೆ ಈಕೆ ತೆಲುಗು ಚಿತ್ರರಂಗದ ನಟಿ ಶ್ವೇತಾ ಕುಮಾರಿ. ತೆಲುಗಿನ ನಾಲ್ಕು ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸಿದ್ದ ಇವರ ಹೆಸರು ಮುಂಬೈ ಡ್ರಗ್ಸ್ ಜಾಲ ಪ್ರಕರಣದಲ್ಲಿ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ಈಕೆ ಕನ್ನಡದಲ್ಲೂ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ ಎನ್ನಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಈ ನಟಿಯನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಿದ್ದು, ಆ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. (ಏಜೆನ್ಸೀಸ್)



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + seven =
Remember me
