ಮುಂಬೈ:ನಟಿ ಕಂಗನಾ ರಣಾವತ್​ ಮಾತುಗಳೆಲ್ಲ ಇತ್ತೀಚೆಗೆ ವಿವಾದಕ್ಕೀಡಾಗುತ್ತಿದ್ದು, ಅವರ ಮೇಲೆ ಹಲವೆಡೆ ದೂರುಗಳು ದಾಖಲವಾಗಿವೆ. ಇದೀಗ ಅವರ ವಿರುದ್ಧ ಕ್ರಿಮಿನಲ್ ದೂರೊಂದು ದಾಖಲಾಗಿದೆ.
ವಕೀಲ ಅಲಿ ಕಾಶಿಫ್​ ಖಾನ್​ ದೇಶ್​ಮುಖ್ ಎಂಬುವವರು ಮುಂಬೈನ ಅಂಧೇರಿಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರಿಗೆ ದೂರು ನೀಡಿದ್ದು, ಕಂಗನಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕೋರಿದ್ದಾರೆ.
ಕಂಗನಾ ಮತ್ತೆ ದುರುದ್ದೇಶಪೂರಿತವಾಗಿ ಟ್ವೀಟ್ ಮಾಡಿದ್ದು, ವಿವಿಧ ಧರ್ಮಗಳ ಜನರ ನಡುವೆ ದ್ವೇಷ ಕೆರಳಿಸುವಂತೆ ಮಾತನಾಡಿದ್ದಾರೆ. ಕಂಗನಾ ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಟ್ವಿಟರ್​ನಲ್ಲಿ ಬೇಕಾಬಿಟ್ಟಿ ಕಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ ನ್ಯಾಯಾಂಗವನ್ನು ಪಪ್ಪುಸೇನಾ ಎಂದಿರುವ ಅವರು ನ್ಯಾಯಾಂಗ ನಿಂದನೆಯನ್ನೂ ಮಾಡಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಹಗೆತನದ ಮಾತನಾಡುವ ಸ್ವಾತಂತ್ರ್ಯವಲ್ಲ ಎಂದು ದೂರುದಾರರು ಹೇಳಿದ್ದಾರೆ.ಕಂಗನಾ ವಿರುದ್ಧ ಈಗಾಗಲೇ ಮುಂಬೈನ ಬಾಂದ್ರಾ ಮೆಟ್ರೊಪಾಲಿಟನ್​ ಕೋರ್ಟ್​ನಲ್ಲಿ ಹಾಗೂ ತುಮಕೂರಿನ ಕೋರ್ಟ್​ನಲ್ಲೂ ದೂರುಗಳು ದಾಖಲಾಗಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 13 =
Remember me
