ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿದ್ದ ಮಹತ್ವದ ಚಂದ್ರಯಾನ-3ಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿ, ಟ್ರೋಲಿಗೆ ಒಳಗಾಗಿರುವ ನಟ ಪ್ರಕಾಶ್ ರಾಜ್​, ಈಗ ಒಂದೆರಡು ದಿನಗಳಿಂದ ಹಿಂದೂಗಳನ್ನು ಗುರಿಯಾಗಿಸಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ.
ಹಿಂದೂಗಳು ತನಾತನಿಗಳು ಅಲ್ಲ, ತನಾತನಿಗಳು ಮಾನವವಿರೋಧಿಗಳು. ನೀವು ಇದನ್ನು ಒಪ್ಪಿದರೆ ರಿಟ್ವೀಟ್ ಮಾಡಿ, ಎಲ್ಲರಿಗೂ ಹ್ಯಾಪಿ ಸಂಡೇ ಎಂದು ಪ್ರಕಾಶ್ ರಾಜ್ ನಿನ್ನೆಯಷ್ಟೇ​ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದರಿಂದ ಬಹಳಷ್ಟು ಮಂದಿ ತೀವ್ರ ಬೇಸರಗೊಂಡಿದ್ದು, ಪ್ರಕಾಶ್​ ರಾಜ್ ಭಾರಿ ಟ್ರೋಲ್​ಗೆ ಒಳಗಾಗಿದ್ದರು.
ಇದನ್ನೂ ಓದಿ:ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್ ರಾಜ್, ನೆಟ್ಟಿಗರಿಂದ ಫುಲ್ ಟ್ರೋಲ್
ಅದಾಗ್ಯೂ ಇಂದು ಕೂಡ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿರುವ ಅವರು, ಸಾಧು-ಸಂತರನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದಾರೆ. ಹೊಸ ಸಂಸತ್ ಭವನ ಉದ್ಘಾಟನೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಜತೆ ಸಾಧು-ಸಂತರು ತೆಗೆಸಿಕೊಂಡಿದ್ದ ಫೋಟೋ ಹಂಚಿಕೊಂಡಿರುವ ಪ್ರಕಾಶ್ ರಾಜ್, ‘ಪ್ರೀತಿಯ ಪ್ರಜೆಗಳೆ.. ಇದು ಭವಿಷ್ಯದ ಸಾಧ್ಯತೆ.. #ತನಾತನಿ ಸಂಸತ್ತು.. ನಿಮಗಿದು ಒಪ್ಪಿಗೆಯೆ?’ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ, ಮುಂದೊಂದು ದಿನ ಸಂಸತ್ತಿನಲ್ಲಿ ಸಾಧು-ಸಂತರು ತುಂಬಿಹೋಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಉದ್ಯಮಿ ಮನೆ ಮೇಲೆ ಗುಂಡಿನ ದಾಳಿ, ಪುತ್ರ ಕೂದಲೆಳೆಯ ಅಂತರದಲ್ಲಿ ಪಾರು; ನಾಯಿಗಳಿಗೆ ಗುಂಡು ತಾಗಿ 1 ಶ್ವಾನ ಸಾವು

ಅಬ್ಬಬ್ಬಾ.. ಇದೇನಿದು ‘ಸರ್ಪ’ರೈಸ್!: ದೇವರಕೋಣೆಯಲ್ಲಿ ಕಾಳಿಂಗ ಸರ್ಪ, ಸ್ಕೂಲ್​ಬ್ಯಾಗ್​ನಲ್ಲಿ ನಾಗರಹಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 14 =
Remember me
