ಬೆಂಗಳೂರು:‘ಚಂದ್ರನಿಂದ ಬಂದ ಮೊದಲ ಚಿತ್ರ’ ಎಂದು ಕೆಲವು ದಿನಗಳ ಹಿಂದೆ ವಿರೂಪಗೊಳಿಸಿದ ಚಾಯ್​ವಾಲ್ ಫೋಟೋ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದ ನಟ ಪ್ರಕಾಶ್​ ರಾಜ್​, ತಮ್ಮನ್ನು ಟ್ರೋಲ್ ಮಾಡುತ್ತಿರುವ ಮೋದಿ ಬೆಂಬಲಿಗರ ಕಾಲೆಳೆಯವುದು ಮುಂದುವರಿದಿದೆ.
ವಿರೂಪಗೊಳಿಸಿದ ಚಾಯ್​ವಾಲಾ ಫೋಟೋ ಹಾಕಿದ್ದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುವ ಮೂಲಕ ಪ್ರಕಾಶ್​ ರಾಜ್ ಮೇಲೆ ಮುಗಿಬಿದ್ದಿದ್ದಾರೆ. ನಟ ಪ್ರಕಾಶ್ ರಾಜ್ ಕೂಡ ಅದಕ್ಕೆ ಕ್ಯಾರೇ ಎನ್ನದೆ ಪ್ರತಿಯಾಗಿ ಪೋಸ್ಟ್ ಮಾಡಿ ಕಾಲೆಳೆಯುವುದು ಕೂಡ ನಡೆಯುತ್ತಿದೆ.
ಇದನ್ನೂ ಓದಿ:ಚಂದ್ರಯಾನ-3: ಲ್ಯಾಂಡಿಂಗ್​ ಮುಗಿದರೂ ನಿಂತಿಲ್ಲ ಪ್ರಕಾಶ್ ರಾಜ್ ಟ್ರೋಲೂ.. ಪೋಸ್ಟೂ..!
ಈ ಮಧ್ಯೆ ಅವರು ಇನ್ನೊಂದು ವಿಚಾರವನ್ನು ಎತ್ತಿಕೊಂಡು ಮೋದಿ ಬೆಂಬಲಿಗರನ್ನು ಕೆಣಕಿದ್ದಾರೆ. ಎಐಐಎಂಎಸ್​ ದರ್ಭಾಂಗ ಆರಂಭಗೊಂಡಿದ್ದು ಕಾರ್ಯನಿರ್ವಹಿಸುತ್ತಿದೆ ಎಂದು ಇತ್ತೀಚೆಗೆ ಪ್ರಧಾನಿ ಮೋದಿ ಹೇಳಿದ್ದರು. ಆದರೆ ಪ್ರಧಾನಿ ಹೇಳಿದಂತೆ ಆಗಿಲ್ಲ. ಅಷ್ಟಕ್ಕೂ ಅದಕ್ಕಾಗಿ ಮೀಸಲಿಟ್ಟ ನಿವೇಶನ ಕೂಡ ಅಂತಿಮಗೊಂಡಿಲ್ಲ ಎಂದು ಖಾಸಗಿ ಮಾಧ್ಯಮವೊಂದರ ಫ್ಯಾಕ್ಟ್​ ಚೆಕ್​ನಲ್ಲಿ ಪ್ರಕಟಗೊಂಡಿದೆ.
ಇದನ್ನೂ ಓದಿ:ಚಂದ್ರಯಾನ-3 ಲ್ಯಾಂಡಿಂಗ್​ ಆದ ದಿನವನ್ನು ‘ಇಸ್ರೋ ದಿನ’ ಎಂದು ಘೋಷಿಸಿ: ಸರ್ಕಾರಕ್ಕೆ ಒತ್ತಾಯ
ಈ ವರದಿಯನ್ನು ಉಲ್ಲೇಖಿಸಿರುವ ಪ್ರಕಾಶ್ ರಾಜ್ ಮೋದಿ ಬೆಂಬಲಿಗರನ್ನು ಉದ್ದೇಶಿಸಿ ಇನ್ನೊಂದು ಎಕ್ಸ್ ಮಾಡಿದ್ದಾರೆ. ‘ನನ್ನ ದೇಶ ಧ್ವನಿ ಎತ್ತುವುದು ನಾಯಕನಾಡುವ ಸುಳ್ಳಿಗಾ.. ಇಲ್ಲ ಒಬ್ಬ ಪ್ರಜೆಯ ಹಾಸ್ಯದ ಮಾತಿಗಾ? ಎಂದು ಅವರು ಪ್ರಶ್ನಿಸಿದ್ದಾರೆ.
Will my Country Raise its VOICE.. against a LEADER s Lies or a Citizen Humour ..ನನ್ನ ದೇಶ ಧ್ವನಿ ಎತ್ತುವುದು ನಾಯಕನಾಡುವ ಸುಳ್ಳಿಗಾ.. ಇಲ್ಲ ಒಬ್ಬ ಪ್ರಜೆಯ ಹಾಸ್ಯದ ಮಾತಿಗಾ.#justaskinghttps://t.co/XHpiLFbBMM
— Prakash Raj (@prakashraaj)August 25, 2023

ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!

100 ಕೋಟಿ ರೂ. ಚೆಕ್​ ದೇಣಿಗೆಯಾಗಿ ಕೊಟ್ಟ ಭಕ್ತ; ಆಮೇಲಿನ ಸಂಗತಿ ಮೂಡಿಸಿತು ಅಚ್ಚರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
