ಹೈದರಾಬಾದ್​:ಕರೊನಾ ಲಸಿಕೆ ಪಡೆದ ಬಳಿಕದ ಅವಾಂತರಗಳು ಮುಂದುವರಿದಿದ್ದು, ಇದೀಗ ಲಸಿಕೆ ಪಡೆದ ನಂತರ ಆರೋಗ್ಯ ಕಾರ್ಯಕರ್ತೆಯೊಬ್ಬರು ಮೃತಪಟ್ಟಿರುವ ಪ್ರಕರಣ ವರದಿಯಾಗಿದೆ. ಇದರೊಂದಿಗೆ ಕರೊನಾ ಲಸಿಕೆ ಹಾಕಿಸಿಕೊಂಡು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಇಲ್ಲಿ ಮೂರಕ್ಕೇರಿದೆ.
ತೆಲಂಗಾಣದ ಮಂಚೇರಿಯಲ್​ ಜಿಲ್ಲೆಯ ಕಾಸಿಪೇಟೆ ಗ್ರಾಮದ 55 ವರ್ಷದ ಆರೋಗ್ಯ ಕಾರ್ಯಕರ್ತೆ ಕಾಸಿಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನವರಿ 19ರಂದು ಕರೊನಾ ಲಸಿಕೆ ಪಡೆದಿದ್ದರು. ಆ ಬಳಿಕ ಉಸಿರಾಟದ ಸಮಸ್ಯೆ, ತಲೆಸುತ್ತು ಮುಂತಾದ ಅನಾರೋಗ್ಯಕ್ಕೆ ಒಳಗಾದ ಅವರನ್ನು ಜ. 29ರಂದು ಮಂಚೇರಿಯಲ್​ನ ಮೆಡ್​ಲೈಫ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್​ನ ನಿಜಾಮ್ಸ್ ಇನ್​ಸ್ಟಿಟ್ಯೂಟ್​ ಆಫ್​ ಮೆಡಿಕಲ್ ಸೈನ್ಸಸ್ (ನಿಮ್ಸ್​) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಜ. 30ರಂದು ಕೊನೆಯುಸಿರೆಳೆದರು. ಆದರೆ ಈ ಸಾವಿಗೆ ಬೇರೆ ಅಸ್ವಸ್ಥತೆ ಕಾರಣ, ಲಸಿಕೆಯಿಂದಾಗಿ ಸಾವು ಸಂಭವಿಸಿಲ್ಲ ಎಂದು ತೆಲಂಗಾಣದ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ನೀರಲ್ಲಿ ಮುಳುಗುತ್ತಿದ್ದ ನಾಯಿಮರಿಯನ್ನು ರಕ್ಷಿಸಲು ಹೋದ ಅಪ್ಪ-ಮಗನಿಗೇ ಚೂರಿಯಿಂದ ಇರಿದರು..!!!
ಇನ್ನು ಇದಕ್ಕೂ ಮುಂಚೆ ಲಸಿಕೆ ಪಡೆದಿದ್ದ ಇಬ್ಬರು ಆರೋಗ್ಯ ಕಾರ್ಯಕರ್ತರು ಸಾವಿಗೀಡಾಗಿದ್ದರು. ಆ ಪೈಕಿ ಒಬ್ಬರು ನಿರ್ಮಲ್​ನಲ್ಲಿ, ಇನ್ನೊಬ್ಬರು ವಾರಂಗಲ್​ನಲ್ಲಿ ಮೃತಪಟ್ಟಿದ್ದರು. ಹೀಗೆ ತೆಲಂಗಾಣದಲ್ಲಿ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರ ಪೈಕಿ ಮೂವರು ಮೃತಪಟ್ಟಂತಾಗಿದೆ. (ಏಜೆನ್ಸೀಸ್​)
ಲಸಿಕೆ ಹಾಕಿಸಿಕೊಂಡಿದ್ದ ವೈದ್ಯರಿಗೂ ಕೋವಿಡ್​​-19 ಪಾಸಿಟಿವ್​; ಏಳು ವೈದ್ಯರಲ್ಲಿ ಸೋಂಕು ಪತ್ತೆ!

ಆ ಪ್ರೀತಿ ಇವತ್ತಿಗೂ ಕಮ್ಮಿ ಆಗಿಲ್ಲ…; ಕಿಚ್ಚನ ಸಿನಿಪಯಣಕ್ಕೆ 25ರ ಹರೆಯ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 6 =
Remember me
