ನವದೆಹಲಿ:ಕರೊನಾದ ಭೀಕರ ದ್ವಿತೀಯ ಅಲೆಯಿಂದ ಅಯೋಮಯವಾಗಿರುವ ಜನರ ಆರ್ಥಿಕ ಸ್ಥಿತಿಯನ್ನು ಆಧರಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಮತ್ತೊಂದು ಸುತ್ತಿನ ಸಾಲ ಕಂತು ಮರುಪಾವತಿ ಮುಂದೂಡಿಕೆ (ಮಾರಟೋರಿಯಂ) ಯೋಜನೆ ಪ್ರಕಟಿಸಿದೆ.
ರಾಜ್ಯವ್ಯಾಪಿ ಲಾಕ್​ಡೌನ್​ಗಳಿಂದ ಸಮಸ್ಯೆಗೆ ಒಳಗಾಗಿರುವ ವ್ಯಕ್ತಿಗತ ಸಾಲಗಾರರು ಮತ್ತು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್​ಎಂಇ) ಈ ಯೋಜನೆಯ ಲಾಭ ದಕ್ಕಲಿದೆ. ವೈದ್ಯಕೀಯ ಕ್ಷೇತ್ರದ ಉತ್ಪಾದಕರಿಗೆ ನೆರವಾಗಲು 50,000 ಕೋಟಿ ರೂಪಾಯಿಯ ಪ್ಯಾಕೇಜ್​ಅನ್ನು ಕೂಡ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ಹಿಂದೆ ಆರ್ಥಿಕ ಮರುಹೊಂದಾಣಿಕೆ ಯೋಜನೆಯ ಅನುಕೂಲ ಪಡೆಯದಿದ್ದ ವ್ಯಕ್ತಿಗಳು ಹಾಗೂ 25 ಕೋಟಿ ರೂಪಾಯಿ ವರೆಗಿನ ವ್ಯವಹಾರ ಇರುವವರು ಹಾಗೂ 2021ಮಾರ್ಚ್ 31ರ ವೇಳೆಗೆ ಸ್ಟಾ್ಯಂಡರ್ಡ್ ಎಂದು ವರ್ಗೀಕರಿಸಲಾದ ಸಾಲ ಗಳನ್ನು ಹೊಂದಿದವರು ಆರ್​ಬಿಐನ ಹೊಸ ಮಾರಟೋರಿಯಂ ಯೋಜನೆಯಫಲಾನುಭವಿಗಳಾಗಲಿದ್ದಾರೆ. 2 ವರ್ಷಗಳ ವರೆಗೆ ಇದು ಅನ್ವಯವಾಗುತ್ತದೆ.
ಕೆವೈಸಿ ನಿಯಮ ಸಡಿಲ
ಕರೊನಾ ವೈರಸ್ ಎರಡನೇ ಅಲೆಯ ಕಾರಣ, ಆರ್​ಬಿಐ, ಕೆವೈಸಿ (ನೋ ಯುವರ್ ಕಸ್ಟಮರ್) ನಿಯಮ ಜಾರಿಯನ್ನು ಸಡಿಲಗೊಳಿಸಿದೆ. ಈ ಸಂಬಂಧ ಬ್ಯಾಂಕ್​ಗಳಿಗೆ ಸೂಚನೆ ನೀಡಿರುವ ಆರ್​ಬಿಐ, ಡಿಸೆಂಬರ್ ಕೊನೆಯ ತನಕ ಕೆವೈಸಿ ಸಂಬಂಧ ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳು ಗ್ರಾಹಕರ ವಿರುದ್ಧ ಯಾವುದೇ ಕಠಿಣ ಕ್ರಮ ಜರುಗಿಸಬಾರದು ಎಂದು ನಿರ್ದೇಶನ ನೀಡಿದೆ. ಯಾವುದಾದರೂ ಎನ್​ಫೋರ್ಸ್​ವೆುಂಟ್ ಏಜೆನ್ಸಿ ಅಥವಾ ಕೋರ್ಟ್ ನಿರ್ದೇಶನದ ಹೊರತಾಗಿ ಗ್ರಾಹಕರ ಮೇಲೆ ಕೆವೈಸಿ ವಿಚಾರದಲ್ಲಿ ನಿರ್ಬಂಧ ಅಥವಾ ದಂಡನಾ ಕ್ರಮವನ್ನು ಬ್ಯಾಂಕುಗಳು ಅಥವಾ ಇತರೆ ರೆಗ್ಯುಲೇಟೆಡ್ ಎಂಟೈಟಿಗಳು ತೆಗೆದುಕೊಳ್ಳುವಂತಿಲ್ಲ. ಪ್ರೊಪೈಟರ್​ಶಿಪ್ ಸಂಸ್ಥೆಗಳು, ಅಥೋರೈಸ್ಡ್ ಸಿಗ್ನಟರೀಸ್ ಮತ್ತು ಲೀಗಲ್ ಎಂಟೈಟಿಗಳ ಬೆನೆಫಿಶಿಯಲ್ ಓನರ್ಸ್ ಮುಂತಾದ ಗ್ರಾಹಕರ ಹೊಸ ವಿಭಾಗಕ್ಕಾಗಿ ವಿಡಿಯೋ ಕೆವೈಸಿ ಅಥವಾ ವಿ – ಸಿಐಪಿ ( ವಿಡಿಯೋ ಬೇಸ್ಡ್ ಕಸ್ಟಮರ್ ಐಡೆಂಟಿಫಿಕೇಶನ್ ಪ್ರೊಸಸ್) ಬಳಸುವ ಅವಕಾಶವನ್ನೂ ವಿಸ್ತರಿಸಲು ಆರ್​ಬಿಐ ತೀರ್ವನಿಸಿದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಆರೋಗ್ಯ ಪ್ಯಾಕೇಜ್ ಫಲಾನುಭವಿಗಳು
ವ್ಯಾಕ್ಸಿನ್ ತಯಾರಕರು, ವೈದ್ಯಕೀಯ ಉಪಕರಣಗಳ ಸರಬರಾಜುದಾರರು, ಆಸ್ಪತ್ರೆಗಳು ಮತ್ತು ಹಣದ ಅಗತ್ಯವಿರುವ ಕೋವಿಡ್ ರೋಗಿಗಳು 50,000 ಕೋಟಿ ರೂಪಾಯಿ ಮೊತ್ತದ ಆರೋಗ್ಯರಕ್ಷಣೆ ಪ್ಯಾಕೇಜ್​ನ ಫಲಾನುಭವಿಗಳಾಗಲಿದ್ದಾರೆ. ಈ ಎಲ್ಲ ಸೌಲಭ್ಯ ಸಲಕರಣೆಗಳ ಲಭ್ಯತೆಗೆ ತುರ್ತಾಗಿ ಹಣಕಾಸಿನ ನೆರವನ್ನು ಒದಗಿಸಲಾಗುತ್ತದೆ. 2022ರ ಮಾರ್ಚ್ 31ರ ವರೆಗೆ ಬ್ಯಾಂಕ್​ಗಳು ನೀಡಬಹುದಾದ ಸಾಲಗಳನ್ನು ಮೂರು ವರ್ಷಗಳಿಗೆ ಆದ್ಯತಾ ವಲಯದ ಸಾಲ ಅಥವಾ ಮರುಪಾವತಿ ಎಂದು ಪರಿಗಣಿಸಲಾಗುತ್ತದೆ. ಈ ಪೈಕಿ ಯಾವುದು ಮೊದಲೋ ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಡಿಮೆ ಬಡ್ಡಿ ದರದೊಂದಿಗೆ ಈ ವರ್ಗೀಕರಣ ಮಾಡಲಾಗುತ್ತದೆ. ಆರ್ಥಿಕ ಮರುಹೊಂದಾಣಿಕೆ ಯೋಜನೆಯನ್ನು 90 ದಿನದೊಳಗೆ ಅನುಷ್ಠಾನಗೊಳಿಸಬೇಕಾಗುತ್ತದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
