ಚೆನ್ನೈ:ಡಿಎಂಕೆ ಮೈತ್ರಿಕೂಟದಲ್ಲಿ ಆರು ಕ್ಷೇತ್ರಗಳನ್ನು ಕೇಳಿ ಕಡೆಗೆಎರಡು ಸ್ಥಾನಕ್ಕೆ ಪಟ್ಟು ಹಿಡಿದಿದ್ದ ಎಂಡಿಎಂಕೆ ಅಂತಿಮವಾಗಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಲಯಂನಲ್ಲಿ ಪಕ್ಷದ ಅಧ್ಯಕ್ಷ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೊ ಒಪ್ಪಂದಕ್ಕೆ ಸಹಿ ಹಾಕಿದರು.
ಇದನ್ನೂ ಓದಿ:ಜೆಎನ್‌ಯು ಕ್ಯಾಂಪಸ್​ನಲ್ಲಿ ನಗ್ನವ್ಯಕ್ತಿ ಪ್ರತ್ಯಕ್ಷ..ವಿವಿ ಹೇಳಿದ್ದೇನು?
ಈ ಬಾರಿಯ ಚುನಾವಣೆಯಲ್ಲಿ ಎಂಡಿಎಂಕೆ ಗೆಲ್ಲುವ ಅವಕಾಶವಿರುವ ಕಾಂಚೀಪುರಂ, ಕಡಲೂರು, ಈರೋಡ್, ವಿರುದುನಗರ, ತಿರುಚ್ಚಿ ಮತ್ತು ಮೈಲಾಡುತುರೈ ಕ್ಷೇತ್ರಗಳನ್ನು ತನ್ನ ಪಕ್ಷಕ್ಕೆ ಮೀಸಲಿಡಬೇಕೆಂದು ಎಂಡಿಎಂಕೆ ಒತ್ತಾಯಿಸಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಡಿಎಂಕೆ ಹೇಳಿದ್ದರಿಂದ ಒಂದು ಲೋಕಸಭೆ ಹಾಗೂ ಒಂದು ರಾಜ್ಯಸಭಾ ಸ್ಥಾನವನ್ನು ಹಂಚಿಕೆ ಮಾಡುವಂತೆ ಆಗ್ರಹಿಸಿತ್ತು. ಆ ನಿಟ್ಟಿನಲ್ಲಿ ಡಿಎಂಕೆಹಾಗೂ ಎಂಡಿಎಂಕೆ ಮುಖಂಡರು ಮೂರು ಸುತ್ತಿನ ಚರ್ಚೆ ನಡೆಸಿದರೂ ಸೀಟು ಹಂಚಿಕೆ ಅಂತಿಮಗೊಂಡಿರಲಿಲ್ಲ. ಅಂತಿಮವಾಗಿ ಸ್ಟಾಲಿನ್ ಸಮ್ಮುಖ ಸೀಟುಗಳ ಹೊಂದಾಣಿಕೆ ಮುಕ್ತಾಯವಾಗಿದೆ.
ಡಿಎಂಕೆ ಒಂದು ಸ್ಥಾನವನ್ನು ಹಂಚಿಕೆ ಮಾಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅಣ್ಣಾ ಅರಿವಲಯಂ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೈಕೋ, ಲೋಕಸಭೆ ಚುನಾವಣೆಯಲ್ಲಿ ಡಿಎಂಕೆಗೆ ಬೆಂಬಲ ನೀಡಿ ಮೈತ್ರಿಕೂಟದ ಹೆಚ್ಚು ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ಎಂಡಿಎಂಕೆ ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಮಿತ್ರಪಕ್ಷಗಳೊಂದಿಗೆ ಚರ್ಚಿಸಿದ ನಂತರ ಡಿಎಂಕೆ ನಾಯಕತ್ವ ಘೋಷಿಸಲಿದೆ ಎಂದು ಅವರು ಹೇಳಿದರು.
ರಾಜ್ಯಸಭಾ ಸ್ಥಾನದ ಬಗ್ಗೆ ಸ್ಟಾಲಿನ್ ಜೊತೆ ಚರ್ಚೆ ಮಾಡಿಲ್ಲ ಎಂದ ವೈಕೋ ರಾಜ್ಯಸಭಾ ಚುನಾವಣೆ ಹತ್ತಿರದಲ್ಲಿರುವಾಗ ಈ ವಿಷಯವನ್ನು ಪ್ರಸ್ತಾಪಿಸಲು ಬಯಸುವುದಾಗಿ ಹೇಳಿದ್ದಾರೆ.
ಡಿಪಿಐಗೆ ಎರಡು ಸ್ಥಾನ: ಇನ್ನು ಡಿಎಂಕೆ ಮೈತ್ರಿಕೂಟದಲ್ಲಿ ಡಿಪಿಐಗೆ ಎರಡು ಸ್ಥಾನಗಳನ್ನು ಅಂತಿಮಗೊಳಿಸಲಾಗಿದೆ. ಸೀಟು ಹಂಚಿಕೆ ವಿಚಾರದಲ್ಲಿ ಉಭಯ ಪಕ್ಷಗಳ ನಡುವೆ ಇದ್ದ ಜಿದ್ದಾಜಿದ್ದಿ ಕೊನೆಗೂ ಬಗೆಹರಿದಿದೆ. ಹಿಂದಿನಂತೆ ಡಿಪಿಐ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಒಪ್ಪಿಗೆ ನೀಡಿದೆ. ಆ ಮಟ್ಟಿಗೆ ಅಣ್ಣಾ ಅರಿವಾಲಯಂನಲ್ಲಿ ಸಿಎಂ ಸ್ಟಾಲಿನ್ ಮತ್ತು ಡಿಪಿಐ ನಾಯಕ ತೊಳ್ ತಿರುಮಾವಲವನ್ ಒಪ್ಪಂದದ ದಾಖಲೆಗಳಿಗೆ ಸಹಿ ಹಾಕಿದರು.
ಕಾಂಗ್ರೆಸ್ ನಿರ್ಧಾರವೇನು?:ಏತನ್ಮಧ್ಯೆ ಡಿಎಂಕೆ ಮೈತ್ರಿಕೂಟದ ಪ್ರಮುಖ ಮಿತ್ರ ಪಕ್ಷವಾದ ಕಾಂಗ್ರೆಸ್‌ಗೆ ಸೀಟು ಹಂಚಿಕೆ ಭಾನುವಾರ ಅಂತಿಮಗೊಳ್ಳಲಿದೆ. ಗುರುವಾರ ಚರ್ಚೆ ನಡೆಸಿದ್ದು, ಕಾಂಗ್ರೆಸ್​ಗೆ ಒಂದು ಸ್ಥಾನ ನೀಡಲು ಒಪ್ಪಿಗೆ ಸೂಚಿಸಿದರು. ಆದರೆ ಕಾಂಗ್ರೆಸ್ ಬೇಡಿಕೆ ಇಟ್ಟಿರುವ ಹತ್ತು ಸ್ಥಾನಗಳನ್ನು ಹಂಚಿಕೆ ಮಾಡಲು ಸಾಧ್ಯವಿಲ್ಲ ಎನ್ನುತ್ತಿವೆ ಡಿಎಂಕೆ ಮೂಲಗಳು. ಇದೇ ವೇಳೆ ಕಾಂಗ್ರೆಸ್ ನಾಯಕರು ಈ ಬಾರಿ ಹತ್ತು ಸೀಟುಗಳನ್ನು ತಮಗೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಪಕ್ಷಗಳ ನಡುವಿನ ಸೀಟು ಹೊಂದಾಣಿಕೆಯನ್ನು ಭಾನುವಾರ ಅಂತಿಮಗೊಳಿಸಲಾಗುವುದು ಎಂದು ಡಿಎಂಕೆ ಮುಖಂಡರು ತಿಳಿಸಿದ್ದಾರೆ.
ಚಂದ್ರನ ಮೇಲೆ ‘ಪರಮಾಣು ವಿದ್ಯುತ್ ಸ್ಥಾವರ’ಕ್ಕೆ ರಷ್ಯಾ-ಚೀನಾ ಯೋಜನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + seventeen =
Remember me
