ನವದೆಹಲಿ: ಒಂದೇ ಕುಟುಂಬದ ಸದಸ್ಯರ ಆಧಾರ್ ಪಿವಿಸಿ ಕಾರ್ಡ್ ಅನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆರ್ಡರ್ ಮಾಡಬೇಕಾಗಿಲ್ಲ. ಆಯಾ ಕುಟುಂಬದ ಸದಸ್ಯರಲ್ಲಿ ಯಾರಾದರೊಬ್ಬರು ಎಲ್ಲರ ಆಧಾರ್ ಪಿವಿಸಿ ಕಾರ್ಡ್​ಗಳನ್ನು ಆರ್ಡರ್ ಮಾಡಬಹುದು!
ಯುಐಡಿಎಐ ಕಳೆದ ತಿಂಗಳಷ್ಟೇ ಆಧಾರ್ ಪಿವಿಸಿ ಕಾರ್ಡ್​ ಅನ್ನು ಪರಿಚಯಿಸಿದೆ. ಕ್ರೆಡಿಟ್​/ಡೆಬಿಟ್ ಅಥವಾ ಪ್ಯಾನ್​ಕಾರ್ಡ್ ಮಾದರಿಯ ಈ ಕಾರ್ಡ್ ಪಡೆಯುವುದಕ್ಕೆ ನಿಗದಿತ 50 ರೂಪಾಯಿ ಶುಲ್ಕ ಪಾವತಿಸಿದರೆ ಸಾಕು. ಈ ಕಾರ್ಡ್ ದೀರ್ಘ ಬಾಳಿಕೆಯದಾಗಿದ್ದು, ಮಳೆ, ಬಿಸಿಲುಗಳಿಗೆ ಹಾನಿಯಾಗುವಂಥದ್ದಲ್ಲ ಎಂದು ಅದು ತಿಳಿಸಿತ್ತು. ಅವರವರ ಕಾರ್ಡ್​ಗಳನ್ನು ಅವರವರೇ ಆರ್ಡರ್ ಮಾಡಿ ತರಿಸುವುದಕ್ಕೆ ಅವಕಾಶ ನೀಡಿತ್ತು.
ಇದನ್ನೂ ಓದಿ:ಹೊಸ ಅವತಾರದಲ್ಲಿ ಬರ್ತಾ ಇದೆ ಆಧಾರ್
ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒಂದೇ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಆ ಕುಟುಂಬ ಸದಸ್ಯರಲ್ಲಿ ಯಾರಾದರೊಬ್ಬರು ಅವರ ಮೊಬೈಲ್ ಸಂಖ್ಯೆ ನಮೂದಿಸಿ ಪಡೆದುಕೊಳ್ಳಬಹುದು. ಇದಕ್ಕೆ ಪ್ರತಿ ಕಾರ್ಡಿಗೆ ನಿಗದಿತ ಶುಲ್ಕ ಪಾವತಿಸಿದರೆ ಸಾಕು. ಈ ಆರ್ಡರ್ ನೀಡುವುದಕ್ಕೆ ಬಳಸುವ ಮೊಬೈಲ್​ಗೆ ಒಟಿಪಿ ದೃಢೀಕರಣ ಸಂದೇಶ ಬರುತ್ತದೆ. ಅದನ್ನು ಬಳಸಿಕೊಂಡು ಆರ್ಡರ್ ನೀಡಬಹುದು ಎಂದು ಯುಐಡಿಎಐ ಟ್ವೀಟ್ ಮೂಲಕ ತಿಳಿಸಿದೆ.ಆಧಾರ್ ಪಿವಿಸಿ ಕಾರ್ಡ್ ಗೆ ಆರ್ಡರ್ ಮಾಡಬೇಕಾದ ವೆಬ್ ಲಿಂಕ್ ಇಲ್ಲಿದೆ –https://residentpvc.uidai.gov.in/order-pvcreprint
ಮೀನುಗಳಲ್ಲೊಬ್ಬ ಬಿಲ್ಲುಗಾರ ಅರ್ಜುನ: ನೀರಿನ ಬಾಣದಿಂದಲೇ ಬೇಟೆಯಾಡುವ ಚಾಣಾಕ್ಷ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
