ಬೆಂಗಳೂರು:ಈತನ ಹೆಸರು ಮೊಹಮ್ಮದ್ ಸಲ್ಮಾನ್ ಷರೀಫ್​. ಒಂದಲ್ಲ ಎರಡು ಮದುವೆ ಆಗಿದ್ದಾನೆ. ಜೊತೆಗೆ ಎರಡನೇ ಪತ್ನಿಗೆ ಮಗುವನ್ನೂ ಕೊಟ್ಟು, ಬಳಿಕ ಸಂಸಾರ ಮಾಡೋಕೂ ಹಣ ಕೇಳಿದ್ದಾನೆ. ಇಂಥ ವಂಚಕ ಪತಿಯನ್ನು ಹುಡುಕಿಕೊಂಡು ಎರಡನೇ ಪತ್ನಿ ಇದೀಗ ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಬಂದಿದ್ದಾಳೆ.
ಈತ ಈಗಾಗಲೇ ಒಂದು ಮದುವೆ ಆಗಿದ್ದನ್ನು ಮುಚ್ಚಿಟ್ಟು, ಆಂಧ್ರಪ್ರದೇಶದ ಕರ್ನೂಲ್​ನಲ್ಲಿ ಮತ್ತೊಬ್ಬ ಯುವತಿಯನ್ನು ಮದುವೆಯಾಗಿದ್ದಾನೆ. ಮದುವೆಯಾಗಿ ಒಂದು ಮಗುವಾದ ಬಳಿಕ ಸಂಸಾರ ಮಾಡಲು ಹಿಂಜರಿದ ಈತ ಅದಕ್ಕೂ ಹಣ ಕೇಳಿದ್ದಾನೆ.
ಇದನ್ನೂ ಓದಿ:ಪ್ರೇಮಿಗಳಲ್ಲಿ ಮನಸ್ತಾಪ: ನೇಣಿಗೆ ಶರಣಾದ ಪ್ರೇಯಸಿ, ಪ್ರಿಯಕರನ ಬಂಧನ…
400 ಗ್ರಾಂ ಚಿನ್ನಾಭರಣ, ಒಂದು ಕ್ರೆಟಾ ಕಾರು, 20 ಲಕ್ಷ ರೂಪಾಯಿ ಹಣ ಪಡೆದು ಮದುವೆಯಾಗಿದ್ದ. ಆದರೆ ಕೆಲವೇ ದಿನಗಳಲ್ಲಿ ಮೊದಲ ಮದುವೆ ವಿಚಾರ ಗೊತ್ತಾಗಿ ಪ್ರಶ್ನೆ ಮಾಡಿದ್ದಕ್ಕೆ, ಸಂಸಾರ ಮಾಡಬೇಕಂದರೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದ. ಒಪ್ಪದಿದ್ದಾಗ ಎರಡನೇ ಪತ್ನಿಯನ್ನು ಆಂಧ್ರಪ್ರದೇಶದ ಕರ್ನೂಲ್​ನ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ದ. ನಂತರ ದೂರು ದಾಖಲಾದಾಗ ಪರಾರಿಯಾಗಿದ್ದ.
ಇದನ್ನೂ ಓದಿ:‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
ಇದೀಗ ಎರಡನೇ ಪತ್ನಿ ಈತನನ್ನು ಹುಡುಕಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದು ಇಲ್ಲಿನ ಜೆ.ಸಿ.ನಗರ ಪೊಲೀಸರ ಮೊರೆ ಹೋಗಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಸಲ್ಮಾನ್ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ

ಪ್ರೀತಿಸುವ ನಾಟಕ, ಐದೇ ತಿಂಗಳಲ್ಲಿ ಲಿವಿಂಗ್ ಟುಗೆದರ್​; ಅವಳಾಗುತ್ತಿದ್ದಂತೆ ಗರ್ಭಿಣಿ, ಇವನು ಪರಾರಿ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × one =
Remember me
