ಬೆಂಗಳೂರು:ರಾಜಧಾನಿಯ ಚಾಮರಾಜಪೇಟೆ 4ನೇ ಕ್ರಾಸ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಜುಗ್‌ರಾಜ್ ಜೈನ್ (74) ಕೊಲೆ ಪ್ರಕರಣದ ಆರೋಪಿ ಗುಜರಾತ್ ಪೊಲೀಸರ ಕೈಗೆ ಸೆರೆಸಿಕ್ಕಿದ್ದಾನೆ.
ರಾಜಸ್ಥಾನ ಮೂಲದ ಬಿಜಾರಾಮ್ ಬಂಧಿತ. ಮೇ 24ರಂದು ಅಪಾರ್ಟ್‌ಮೆಂಟ್‌ನಲ್ಲಿ ಜುಗ್‌ರಾಜ್ ಜೈನ್‌ನನ್ನು ಹತ್ಯೆ ಮಾಡಿ ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ದೋಚಿದ್ದ. ಈ ಕುರಿತು ತನಿಖೆ ಕೈಗೊಂಡ ಚಾಮರಾಜಪೇಟೆ ಪೊಲೀಸರು, ಎಲ್ಲೆಡೆ ಬಲೆಬೀಸಿದ್ದರು.
ಇದರ ನಡುವೆ ರಾಜಸ್ಥಾನ ಮತ್ತು ಗುಜರಾತ್ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆರೋಪಿ ಬಿಜಾರಾಮ್ ಬ್ಯಾಗ್‌ನಲ್ಲಿ ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಅನುಮಾನ ಬಂದು ವಶಕ್ಕೆ ಪಡೆದ ಅಮೀರ್​ಘಡ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಬೆಂಗಳೂರಿನಲ್ಲಿ ಮಾಲೀಕನನ್ನು ಕೊಂದು ಆಭರಣ ದೋಚಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನಿಂದ 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಬಂಧನದ ವಿಷಯ ತಿಳಿದ ಬೆಂಗಳೂರು ನಗರ ಪೊಲೀಸರು, ಅಮೀರ್​ಘಡ ಪೊಲೀಸರಿಗೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ವಿಶೇಷ ಪೊಲೀಸ್ ತಂಡ ಗುಜರಾತಿಗೆ ತೆರಳಿದ್ದು, ಸ್ಥಳೀಯ ಕೋರ್ಟ್‌ನಿಂದ ಅನುಮತಿ ಪಡೆದು ಆರೋಪಿಯನ್ನು ಬೆಂಗಳೂರಿಗೆ ಕರೆ ತರುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಪೇಟೆಯಲ್ಲಿ ದೀಪಂ ಎಲೆಕ್ಟ್ರಿಕಲ್ ಅಂಗಡಿ ಮಾಲೀಕ ಜುಗ್‌ರಾಜ್ ಆರೈಕೆಗೆ ಬಿಜಾರಾಮ್‌ನನ್ನು ನೇಮಕ ಮಾಡಲಾಗಿತ್ತು. ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ಮಾಲೀಕನನ್ನು ಕೊಂದು ಬೆಲೆಬಾಳುವ ವಸ್ತುಗಳನ್ನು ದೋಚಿದ್ದ. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತಿ ಚಲಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ ಸಿಲುಕಿ ಪತ್ನಿ ಸಾವು; ಛಿದ್ರಗೊಂಡ ದೇಹ, ತುಂಡಾಗಿ ಬಿದ್ದ ಕೈ..

ಆಧಾರ್ ಕಾರ್ಡ್​​ ಫೋಟೋ ಹಂಚಿಕೊಳ್ಳಬಾರದಂತೆ, ನಿಜನಾ?: ಆಧಾರ್​ ಪ್ರಾಧಿಕಾರದಿಂದ ಹೊರಬಿತ್ತು ಮತ್ತೊಂದು ಪತ್ರಿಕಾ ಹೇಳಿಕೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seventeen =
Remember me
