ಪಣಜಿ:ಈ ಸ್ಟೋರಿ ಕೇಳಿದ್ರೆ ವಿಧಿಯನ್ನೊಮ್ಮೆ ಶಪಿಸಬೇಕು ಅನ್ನಿಸುತ್ತೆ. ಯಾರಿಗೂ ಇಂಥ ದುರ್ಗತಿ ಕೊಡಬೇಡ ದೇವರೆ ಎಂದು ಮನದಲ್ಲೊಮ್ಮೆ ಬೇಡಿಕೊಳ್ತೀರಿ…
ಒಂದೆಡೆ ಪುಟ್ಟ ಕಂದಮ್ಮನ್ನು ಕಳೆದುಕೊಂಡ ದುಖಃ, ಇನ್ನೊಂದೆಡೆ ಊರಿಗೆ ಹೋಗಲಾರದ ಅಸಹಾಯಕತೆ, ಸತ್ತ ಮಗುವಿನ ಅಂತ್ಯಸಂಸ್ಕಾರ ಮಾಡಲಾಗದಷ್ಟು ಕಿತ್ತುತಿನ್ನುವ ಬಡತನ… ಇಂತಹ ದಯನೀಯ ಸ್ಥಿತಿಯಲ್ಲೂ ಒಂದು ಖಾಲಿ ಜಾಗದಲ್ಲಿ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ, ಹತ್ತು ದಿನಗಳ ನಂತರ ಆ ಊರಿನ ಗ್ರಾಮಸ್ಥರೇ ಪಟ್ಟು ಹಿಡಿದು ಮಗುವಿನ ಶವವನ್ನು ಹೊರ ತೆಗೆಸಿದ ಅಮಾನವೀಯ ಘಟನೆಗೆ ಗೋವಾದ ಕುಂಕಳ್ಳಿಯ ಪೋಯ್​ಟೊಮೊಡೊದಲ್ಲಿ ಭಾನುವಾರ ನಡೆದಿದೆ.ಇದನ್ನೂ ಓದಿರಿಐವರ ಕೊಲೆಗೆ ಕಾರಣವಾಯ್ತು ಒಂದು ಲವ್​ ಸ್ಟೋರಿ!
ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ ಮೂಲತಃ ಕರ್ನಾಟಕದ ಗದಗ ತಾಲೂಕಿನ ಸುರೇಶ ಲಮಾಣಿ ಅವರ ಒಂದು ವರ್ಷದ ಹೆಣ್ಣು ಮಗು ಜೂನ್​ 29ರಂದು ಸಾವನ್ನಪ್ಪಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಊರಿಗೆ ಹೋಗಲು ಆಗಿಲ್ಲ. ಇರುವ ಊರಲ್ಲೇ ಅಂತ್ಯಸಂಸ್ಕಾರ ನೆರವೇರಿಸುವಷ್ಟು ಹಣವೂ ಇಲ್ಲ. ಇಂತಹ ಸಂಕಷ್ಟದಲ್ಲಿ ಮೃತದೇಹವನ್ನು ಕುಂಕಳ್ಳಿಯ ಖಾಲಿ ಜಾಗವೊಂದರಲ್ಲಿ ಹೊಂಡ ತೆಗೆದು ಮಣ್ಣು ಮಾಡಿದ್ದರು.
ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಜಾಗ ಇದಾಗಿದ್ದು, ಅಂತ್ಯಸಂಸ್ಕಾರಕ್ಕೆ ಜಾಗದ ಮಾಲಿಕ ಯಾವುದೇ ತಕರಾರು ಮಾಡಿರಲಿಲ್ಲ. ಕಳೆದ ಭಾನುವಾರ ಇದಕ್ಕೆ ತಕರಾರು ವ್ಯಕ್ತಪಡಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು.
ಪೊಲೀಸ್​ ನಿರೀಕ್ಷಕ ಥೇರನ್​ ಡಿಕಾಸ್ತಾ ಅವರ ಮಾರ್ಗದರ್ಶನದಲ್ಲಿ ಉಪನಿರೀಕ್ಷಕ ಆದಿತ್ಯ ನಾಯ್ಕ ನೇತೃತ್ವದ ಪೊಲೀಸರ ತಂಡ ಸುರೇಶ ಲಮಾಣಿಯನ್ನು ಹುಡುಕಿ ಕರೆತಂದು ಹೂತಿದ್ದ ಶವವನ್ನು ಹೊರತೆಗೆಸಿ ಮಡಗಾಂಗೆ ಸಾಗಿಸಿ ಮತ್ತೊಮ್ಮೆ ಅಂತ್ಯಸಂಸ್ಕಾರ ಮಾಡಿಸಲಾಯಿತು.
ಮಗು ಹೃದಯಸಂಬಂಧಿ ಕಾಯಿಲೆಯಿಂದಲೇ ಮೃತಪಟ್ಟಿರುವ ಬಗ್ಗೆ ವೈದ್ಯರು ಪ್ರಮಾಣಪತ್ರ ನೀಡಿದ್ದರು. ಆದರೂ ಸ್ಥಳೀಯರು ಅಂತ್ಯಸಂಸ್ಕಾರಕ್ಕೆ ತಕರಾರು ಮಾಡಿದ್ದು ವಿಪರ್ಯಾಸ.
ಗೂಗಲ್ ಪೇ ಕಸ್ಟಮರ್ ಸೋಗಿನಲ್ಲಿ ವಂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 6 =
Remember me
