ಹೈದರಾಬಾದ್:ಗುಡಿಸಲಿನ ಒಳಗೆ ತಂದೆಯ ಜತೆ ಮಲಗಿದ್ದ ಒಂದು ವರ್ಷದ ಮಗುವನ್ನು ಬೀದಿ ನಾಯಿಗಳ ಗುಂಪು ಕಚ್ಚಿ ಸಿಗಿದು ತಿಂದು ಹಾಕಿದ ಎದೆ ನಡುಗಿಸುವ ಘಟನೆ ತೆಲಂಗಾಣದ ಶಂಶಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಿಮಗೊಂದು ಚಾಲೆಂಜ್! ಈ ಫೋಟೋವನ್ನ ಸರಿಯಾಗಿ ನೋಡಿ ಯಾರಾದರು ಸ್ಟಾರ್​ ಹೀರೋ ಕಾಣ್ತಾ ಇದ್ದಾರಾ ?
ಶಂಶಾಬಾದ್‌ನಲ್ಲಿ ಗುರುವಾರ ನಸುಕಿನಲ್ಲಿ ಮಗುವಿನ ತಂದೆ ಮತ್ತು ಇತರ ಕುಟುಂಬ ಸದಸ್ಯರು ಶಂಶಾಬಾದ್‌ನ ತಮ್ಮ ಗುಡಿಸಲಿನಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ. ಅಂಬೆಗಾಲಿಡುವ ಮಗು ಹೇಗೆ ಗುಡಿಸಲು ಬಿಟ್ಟಿತು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವರ್ಷದ ಮಾರ್ಚ್ ತಿಂಗಳಿನಿಂದ ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯ ಬಗ್ಗೆ ವರದಿಯಾಗಿರುವ 9ನೇ ಪ್ರಕರಣ ಇದಾಗಿದೆ. ಹೈದರಾಬಾದ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜಿಕರಿಂದ ನಿರಂತರ ದೂರು ಬರುತ್ತಿವೆ. ಮಗುವಿನ ತಂದೆ ಕೆ ಸೂರ್ಯ ಕುಮಾರ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಆರ್‌ಜಿಐ ಏರ್‌ಪೋರ್ಟ್ ಇನ್‌ಸ್ಪೆಕ್ಟರ್ ಕೆ ಬಾಲರಾಜು ತಿಳಿಸಿದ್ದಾರೆ.
ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ಸೂರ್ಯ ಕುಮಾರ್ ಅವರು ಶಂಶಾಬಾದ್ ಪಟ್ಟಣದ ರಾಜೀವ್ ಗೃಹಕಲ್ಪ ಸಂಕೀರ್ಣದ ಸಮೀಪ ನಿರ್ಮಿಸಿರುವ ತಾತ್ಕಾಲಿಕ ಗುಡಿಸಲಿನಲ್ಲಿ ವಾಸವಿದ್ದರು. ಬುಧವಾರ ರಾತ್ರಿ ಅವರು ತಮ್ಮ ಒಂದು ವರ್ಷದ ಮೊದಲ ಮಗ ಕೆ ನಾಗರಾಜು, 20 ತಿಂಗಳ ನವಜಾತ ಶಿಶು ಹಾಗೂ ಕುಟುಂಬದ ಇತರರೆ ಸದಸ್ಯರ ಜತೆ ಗುಡಿಸಲಿನಲ್ಲಿ ಮಲಗಿದ್ದರು. ಆದರೆ ಇತ್ತೀಚೆಗಷ್ಟೇ ಎರಡನೇ ಮಗುವಿಗೆ ಜನ್ಮ ನೀಡಿದ್ದ ಸೂರ್ಯಕುಮಾರ್ ಪತ್ನಿ ಘಟನೆ ನಡೆದಾಗ ಅಲ್ಲಿ ಇರಲಿಲ್ಲ.
ವಿವಾದದ ನಡುವೆ ಮತ್ತೆರಡು ಫೋಟೊ ಹಂಚಿಕೊಂಡ ಪವಿತ್ರಾಗೌಡ! ನಟ ದರ್ಶನ್​ ಫ್ಯಾನ್ಸ್​ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 19 =
Remember me
