ಹೈದರಾಬಾದ್:ಒನ್​ವೇ ಪ್ರೀತಿಯ ಪ್ರಸಂಗವೊಂದರಲ್ಲಿ, ಭಗ್ನಪ್ರೇಮಿಯು ಯುವತಿಯ ಮನೆಗೆ ಹೋಗಿ ಕಠಾರಿಯಿಂದ ಇರಿದು ಹಲ್ಲೆ ಮಾಡಿರುವ ಘಟನೆ ಸೈಬರಾಬಾದಿನಿಂದ ವರದಿಯಾಗಿದೆ. ಹಲ್ಲೆಗೊಳಗಾದ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್​ ತೀವ್ರ ಗಾಯಗಳುಂಟಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಲಕ್ಷ್ಮಿನಗರ ಕಾಲೋನಿಯಲ್ಲಿ ಮಂಗಳವಾರ ರಾತ್ರಿ 7.40 ಕ್ಕೆ ಈ ಘಟನೆ ನಡೆದಿದೆ. ಬಹಳ ಸಮಯದಿಂದ ಮಹಿಳೆಯ ಹಿಂದೆ ಬಿದ್ದಿದ್ದ ಎನ್ನಲಾದ ಸಲ್ಮಾನ್ ಶಾರೂಖ್ ಎಂಬಾತನೇ ಹಲ್ಲೆ ನಡೆಸಿದ ದುಷ್ಕರ್ಮಿ. ಮಹಿಳೆಯ ವಾಸಿಸುವ ಅಪಾರ್ಟ್​ಮೆಂಟ್ ಕಾಂಪ್ಲೆಕ್ಸ್​ನ ಕಾಂಪೌಂಡ್ ಏರಿ, ಆಕೆಯ ಮನೆಗೆ ಹೋದ ಆರೋಪಿಯು, ಕಠಾರಿಯಿಂದ ಆಕೆಯ ಎದೆ ಮತ್ತು ಹೊಟ್ಟೆಗೆ ಇರಿದು ಗಾಯಗೊಳಿಸಿದ್ದಾನೆ.
ಇದನ್ನೂ ಓದಿ:ಹದಿನೇಳರ ಹುಡುಗಿಯ ಮೇಲೆ ಗ್ಯಾಂಗ್ ರೇಪ್… ಸ್ನೇಹಿತೆ ಮನೆಗೆ ಹೋಗಿದ್ದೇ ತಪ್ಪಾಯಿತು!
ಮಹಿಳೆಯು ವಾರದ ಹಿಂದೆಯೇ ಸಲ್ಮಾನ್ ತನ್ನ ಬೆನ್ನುಹತ್ತಿದ್ದು, ಕಿರುಕುಳ ನೀಡುತ್ತಿರುವುದಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಳು ಎನ್ನಲಾಗಿದೆ. ಎರಡು ವರ್ಷಗಳಿಂದ ಪರಿಚಿತನಾಗಿದ್ದ ಆರೋಪಿ, ಇತ್ತೀಚೆಗೆ ಪ್ರೇಮ ಪ್ರಸ್ತಾಪ ಮಾಡಿದ್ದ. ಆದರೆ ಮಹಿಳೆಯು ಅದನ್ನು ತಿರಸ್ಕರಿಸಿದ್ದಳು. ಪಟ್ಟು ಬಿಡದೆ ಆರೋಪಿ ಅವಳನ್ನು ಹಿಂಬಾಲಿಸುವುದು, ಅಡ್ಡಗಟ್ಟಿ ಮಾತನಾಡಿಸುವುದು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಗಾಯಗೊಂಡು ಪ್ರಜ್ಞೆ ತಪ್ಪಿ ಕುರ್ಚಿಯ ಮೇಲೆ ಕುಸಿದುಬಿದ್ದಿದ್ದರೆ, ಅವಳ ಪಾಲಕರು ವೈದ್ಯಕೀಯ ಸಹಾಯಕ್ಕಾಗಿ ಕಾಯುತ್ತಾ ಅವಳನ್ನು ಎಚ್ಚರವಾಗಿಡಲು ಪ್ರಯತ್ನಿಸುತ್ತಿರುವ ದೃಶ್ಯವನ್ನು ಸೆರೆಹಿಡಿದಿರುವ ವೀಡಿಯೋ ತುಣುಕೊಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ನರಸಿಂಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಪೊಲೀಸರ ಮೇಲೆ ಕಣ್ಗಾವಲು! ಠಾಣೆ​ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಪ್ರೀಂ ಡೆಡ್​ಲೈನ್

‘ಬನ್ರೀ, ಚಂದ್ರನ ಮೇಲೆ ಹೋಗ್ಬರಣ’ ಚಂದ್ರನ ಕನಸು ಕಂಡವರಿಗೆ ಇಲ್ಲಿದೆ ಸ್ಪೆಷಲ್​ ಆಫರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 13 =
Remember me
