ಜೂನ್ 17ರಂದುಬಕ್ರೀದ್‌ಹಬ್ಬವಿರುವ ಕಾರಣ ಇದೀಗ ಮಾರುಕಟ್ಟೆಗಳಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಿದ್ದು, ಬೆಲೆ ಕೂಡ ದುಬಾರಿಯಾಗುತ್ತಿದೆ. ಹಬ್ಬಕ್ಕೂ ಮುಂಚಿತವಾಗಿ ಹೆಚ್ಚಿದ ಬೇಡಿಕೆಯ ಪರಿಣಾಮ ಇದೀಗ ಹೈದರಾಬಾದ್‌ನಲ್ಲಿ ಈರುಳ್ಳಿ ಬೆಲೆ ಕೇವಲ ಹದಿನೈದು ದಿನಗಳಲ್ಲಿ ಶೇ. 25-40 ರಷ್ಟು ಏರಿಕೆಗೊಂಡಿದೆ.
ಇದನ್ನೂ ಓದಿ:ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ: ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ಯಾರಿಗೆ?
ಮಹಾರಾಷ್ಟ್ರದಲ್ಲಿ ಬರಗಾಲದಂತಹ ಪರಿಸ್ಥಿತಿಗಳು ಉಲ್ಬಣಗೊಂಡಿರುವ ಉತ್ಪಾದನಾ ಕೊರತೆಯ ನಡುವೆ ಈ ಬೆಲೆ ಏರಿಕೆ ಮುನ್ನೆಲೆಗೆ ಬಂದಿದೆ. ಹೈದರಾಬಾದ್‌ನಲ್ಲಿ ಈರುಳ್ಳಿ ಚಿಲ್ಲರೆ ದರದಲ್ಲಿ ಶೇ.25ರಷ್ಟು ಏರಿಕೆಯಾಗಿದ್ದು, ಸಗಟು ದರದಲ್ಲಿ ಶೇ.15ರಷ್ಟು ಹೆಚ್ಚಳ ಕಂಡಿದೆ. ಒಂದು ವರ್ಷದ ಹಿಂದೆ, ಚಿಲ್ಲರೆ ಬೆಲೆ ಪ್ರತಿ ಕೆಜಿಗೆ 20 ರೂ. ಮತ್ತು ಸಗಟು ಬೆಲೆ ಕ್ವಿಂಟಲ್‌ಗೆ 1,581.97 ರೂ. ಇತ್ತು. ಪ್ರಸ್ತುತ, ಚಿಲ್ಲರೆ ಬೆಲೆಗಳು ಪ್ರತಿ ಕಿಲೋಗ್ರಾಂಗೆ 40 ರೂ.ನಿಂದ 50 ರೂ.ನಷ್ಟಿದೆ. ಇದು ಕೇವಲ ಒಂದು ತಿಂಗಳ ಹಿಂದೆ 20ರಿಂದ 30 ರೂ. ಇತ್ತು.
ಇನ್ನು ಸೆಪ್ಟೆಂಬರ್ ಅಥವಾ ಅಕ್ಟೋಬರ್​ನಲ್ಲಿ ಹೊಸ ಖಾರಿಫ್ ಬೆಳೆ ಬರುವ ನಿರೀಕ್ಷೆಯಿಲ್ಲದ ಕಾರಣ ಪ್ರತಿ ಕೆಜಿ ಈರುಳ್ಳಿಗೆ 50ರಿಂದ 60 ರೂ. ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಈ ವರ್ಷ ಸರ್ಕಾರಿ ಏಜೆನ್ಸಿಗಳ ಸೀಮಿತ ಸಂಗ್ರಹಣೆಯು ವ್ಯಾಪಾರಿಗಳು ಮತ್ತು ರೈತರನ್ನು ತಮ್ಮ ಬೆಳೆಗಳನ್ನು ಹಿಡಿದಿಟ್ಟುಕೊಳ್ಳಲು ಉತ್ತೇಜಿಸಿದೆ.
ಇದನ್ನೂ ಓದಿ:ನಾವಿಲ್ಲಿರೋದು ಅನ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದಿಕ್ಕಲ್ಲ: ಸೆಹ್ವಾಗ್​ ಹೇಳಿಕೆಗೆ ಶಕೀಬ್ ತಿರುಗೇಟು!
ಸದ್ಯ ರೈತರು ತಾವು ಬೆಳೆದ ಈರುಳ್ಳಿಯನ್ನು ದಾಸ್ತಾನು ಮಾಡಲು ಮುಂದಾಗಿದ್ದು, ಬೆಲೆಗಳು ಗರಿಷ್ಠ ಮಟ್ಟಕ್ಕೆ ತಲುಪಿದಾಗ ಅವುಗಳನ್ನು ಮಾರಾಟ ಮಾಡಲು ಚಿಂತಿಸಿದ್ದಾರೆ ಎಂದು ಹೈದರಾಬಾದ್ ಮೂಲದ ಈರುಳ್ಳಿ ವ್ಯಾಪಾರಿಯೊಬ್ಬರು ಹೇಳಿದ್ದಾರೆ,(ಏಜೆನ್ಸೀಸ್).
ನಾವಿಲ್ಲಿರೋದು ಅನ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವುದಿಕ್ಕಲ್ಲ: ಸೆಹ್ವಾಗ್​ ಹೇಳಿಕೆಗೆ ಶಕೀಬ್ ತಿರುಗೇಟು!

ಯಾರ ಪ್ರಭಾವಕ್ಕೂ ಮಣಿಯದೇ ‘ರೀಲ್​ ಹೀರೋ’​ಗೆ ಬಿಸಿ ಮುಟ್ಟಿಸಿದ್ದೇ ಈ ಇಬ್ಬರು ಖಡಕ್ ಅಧಿಕಾರಿಗಳು! ಇವರೇ ನೋಡಿ ‘ರಿಯಲ್’ ಹೀರೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + seven =
Remember me
