ಡೆಹ್ರಾಡೂನ್ :ಉತ್ತರಾಖಂಡದಲ್ಲಿರುವ ಕೇದಾರನಾಥ ಸ್ವಾಮಿ ದೇವಾಲಯಕ್ಕೆ ಪೂಜೆ ಅರ್ಪಿಸಲು ಆನ್​ಲೈನ್​ ಪೋರ್ಟಲ್​ಅನ್ನು ನಾಳೆಯಿಂದ ತೆರೆಯಲಾಗುವುದು. ಈ ಹಿನ್ನೆಲೆಯಲ್ಲಿ ದೇವಾಲಯಕ್ಕೆ 11 ಕ್ವಿಂಟಾಲ್​ ಹೂವುಗಳನ್ನು ಹಾಕಿ ಅಲಂಕಾರ ಮಾಡಲಾಗಿದೆ ಎಂದು ಎಎನ್​​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚಾರ್​ ಧಾಮ್​ ಯಾತ್ರೆಯ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಕೇದಾರನಾಥಕ್ಕೂ ಕರೊನಾ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಕ್ತರು ಖುದ್ದು ಭೇಟಿ ನೀಡಲು ಈ ಬಾರಿ ಅವಕಾಶವಿಲ್ಲ. ಆದರೆ, ಆನ್​ಲೈನ್​ ಪೂಜೆ ಅರ್ಪಿಸಲು ದೇವಾಲಯ ನಿರ್ವಹಣಾ ಸಮಿತಿ ಅವಕಾಶ ಮಾಡಿಕೊಟ್ಟಿದ್ದು, ನಾಳೆಯಿಂದ (ಮೇ17) ಇದಕ್ಕೆ ಸಂಬಂಧಿಸಿದ ಪೋರ್ಟಲ್​ ತೆರೆಯಲಿದೆ. ವೆಬ್​ಸೈಟ್​ ವಿಳಾಸ ಇಲ್ಲಿದೆ : https://badrinath-kedarnath.gov.in/
ಉತ್ತರಾಖಂಡ ಚಾರ್​ ಧಾಮ್ ದೇವಸ್ಥಾನಂ ಮ್ಯಾನೇಜ್​ಮೆಂಟ್ ಬೋರ್ಡ್​ನ ವೆಬ್​ಸೈಟ್​ನಲ್ಲಿ ಆನ್​ಲೈನ್​ ಪೂಜಾ, ಪಾಠ್, ಅರ್ಚನಾ, ಆರತಿ, ಭೋಗ್​ಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಯಮುನೋತ್ರಿ ಮತ್ತು ಗಂಗೋತ್ರಿಯ ಪೋರ್ಟಲ್​ಗಳು ಈಗಾಗಲೇ ತೆರೆಯಲ್ಪಟ್ಟಿವೆ. ಬದರೀನಾಥ ಧಾಮದ ಪೋರ್ಟಲ್ ಮೇ 18 ರಂದು ತೆರೆಯಲಿದೆ.(ಏಜೆನ್ಸೀಸ್)
ಕೇಂದ್ರ ನೀಡಿರುವ ವೆಂಟಿಲೇಟರ್​ಗಳ ಆಡಿಟ್​ : ಪ್ರಧಾನಿ ಮೋದಿ ಆದೇಶ

ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದ್ದಕ್ಕೆ ಪಂಚಾಯಿತಿ ಸದಸ್ಯರ ಕಾಲಿಗೆ ಬಿದ್ದು ಕ್ಷಮೆ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 6 =
Remember me
