ಶಿಮ್ಲಾ:ಕರೊನಾ ಹಾವಳಿಯಿಂದಾಗಿ ಈಗ ಎಲ್ಲೆಲ್ಲೋ ಆನ್‌ಲೈನ್‌ ಕ್ಲಾಸ್‌ಗಳದ್ದೇ ಭರಾಟೆ. ಆದರೆ ಎಷ್ಟೋ ಕುಟುಂಬದ ಮಕ್ಕಳಿಗೆ ಆನ್‌ಲೈನ್‌ ಕ್ಲಾಸ್‌ಗಾಗಿ ಸ್ಮಾರ್ಟ್‌ಫೋನ್‌,ಕಂಪ್ಯೂಟರ್‌ ಯಾವುದೂ ಇಲ್ಲ. ಆದರೂ ಶಾಲೆಗಳು ಆನ್‌ಲೈನ್‌ ಕ್ಲಾಸ್‌ಗೆ ಉತ್ಸುಕವಾಗಿದೆ.
ಇದಾಗಲೇ ಸ್ಮಾರ್ಟ್‌ಫೋನ್‌ ಇಲ್ಲದೇ ಕ್ಲಾಸ್‌ ಮಿಸ್‌ ಆಗುವುದಾಗಿ ನೊಂದು ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಬಂದಿವೆ. ಇಲ್ಲೊಬ್ಬ ಅಪ್ಪ, ತನ್ನ ಮಕ್ಕಳಿಗೆ ಕ್ಲಾಸ್‌ ಮಿಸ್‌ ಆಗಬಾರದು ಎನ್ನುವ ಕಾರಣಕ್ಕೆ ಕುಟುಂಬದ ಏಕೈಕ ಆಧಾರವಾಗಿರುವ ಹಸುವನ್ನೇ ಮಾರಾಟ ಮಾಡಿ ಸ್ಮಾರ್ಟ್‌ಫೋನ್‌ ತರಿಸಿಕೊಟ್ಟಿದ್ದಾರೆ!
ತಮ್ಮ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು, ಆದ್ದರಿಂದ ಹಸುವನ್ನು ಮಾರಿರುವುದಾಗಿ ಹೇಳಿದ್ದಾರೆ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ತಹಸಿಲ್‌ನ ಗುಮ್ಮರ್ ಗ್ರಾಮದ ನಿವಾಸಿ ಕುಲದೀಪ್ ಕುಮಾರ್.
ಇದನ್ನೂ ಓದಿ:ಗಂಡನನ್ನು ನಾನೇ ಸಾಯಿಸಬೇಕೆಂದಿದ್ದೆ: ದುಬೆ ಹೆಂಡತಿ ಉವಾಚ..!
ಇವರ ಕುಟುಂಬಕ್ಕೆ ಇದ್ದುದು ಒಂದು ಹಸು ಮಾತ್ರ. ಅದರ ಹಾಲನ್ನು ಮಾರಿ ಜೀವನ ಸಾಗಿಸುತ್ತಿದೆ ಈ ಕುಟುಂಬ. ಆದರೆ ಈಗ ಕೇವಲ ಆರು ಸಾವಿರ ರೂಪಾಯಿಗೆ ಅದನ್ನು ಮಾರಿ ಫೋನ್‌ ತರಿಸಿಕೊಟ್ಟಿದ್ದಾರೆ.
ಇವರ ಮಗಳು ಅನು ಹಾಗೂ ಮಗ ವಾನ್ಶ್ ಸರ್ಕಾರಿ ಶಾಲೆಯಲ್ಲಿ 4 ಮತ್ತು 2ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅಲ್ಲೀಗ ಆನ್‌ಲೈನ್‌ ಕ್ಲಾಸ್‌ ಶುರುವಾಗಿದೆ. ಆದರೆ ಮೊಬೈಲ್‌ ಕೊಂಡುಕೊಳ್ಳಲು ಇವರ ಬಳಿ ಹಣವಿರಲಿಲ್ಲ. ಅದಕ್ಕಾಗಿ .ಕುಲದೀಪ್ ಅವರು ಬ್ಯಾಂಕ್‌ ಸಹಾಯ ಕೋರಿದ್ದಾರೆ, ಕೆಲವು ಪರಿಚಯಸ್ಥರಿಂದಲೂ ನೆರವು ಕೋರಿದ್ದಾರೆ. ಆದರೆ ಎಲ್ಲಿಯೂ ಹಣ ಸಿಕ್ಕಿರಲಿಲ್ಲ.
ಅದೇ ಇನ್ನೊಂದೆಡೆ ಆನ್‍ಕ್ಲಾಸ್ ಆರಂಭಿಸಿರುವ ಶಿಕ್ಷಕರು, ಮೊಬೈಲ್ ಕೊಡಿಸಿ ತರಗತಿಗೆ ಹಾಜರುಪಡಿಸಿ ಎಂದು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಕುಲದೀಪ್‌ ಕೊನೆಯದಾಗಿ ಹಸು ಮಾರಲು ನಿರ್ಧರಿಸಿದ್ದಾರೆ.
ಆದರೆ ಇಲ್ಲಿಗೂ ಇವರ ಸಮಸ್ಯೆ ಬಗೆಹರಿಯಲಿಲ್ಲ. ಇರುವುದು ಇಬ್ಬರು ಮಕ್ಕಳು. ಇರುವುದು ಒಂದೇ ಫೋನ್‌, ಇಬ್ಬರೂ ಮಕ್ಕಳು ಕ್ಲಾಸ್‌ ಮಿಸ್‌ ಆಗುವ ಭಯದಲ್ಲಿ ಅಳುವುದನ್ನು ಈ ತಂದೆಗೆ ನೋಡಲಾಗುತ್ತಿಲ್ಲ. ಸದ್ಯ ಈ ವಿಷಯ ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಧವಾಲಾ ಅವರ ಕಿವಿಗೆ ಮುಟ್ಟಿದ್ದು, ಸರ್ಕಾರದಿಂದ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಮುಂದಿನ ವರ್ಷ ಚಿನ್ನ ಖರೀದಿಸುವ ಪ್ಲ್ಯಾನ್‌ ಇದ್ಯಾ? ಹಾಗಿದ್ರೆ ಇದನ್ನೊಮ್ಮೆ ಓದಿಬಿಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 15 =
Remember me
