ಜಾರ್ಖಂಡ್‌:ಕರೊನಾ ವೈರಸ್‌ ಹಿನ್ನೆಲೆಯಲ್ಲಿ, ಶಾಲಾ- ಕಾಲೇಜುಗಳೆಲ್ಲಾ ಇದೀಗ ಆನ್‌ಲೈನ್‌ ಕ್ಲಾಸ್‌ದ್ದೇ ಭರಾಟೆ. ಮಕ್ಕಳ ಕೈಗೆ ಸ್ಮಾರ್ಟ್‌ಫೋನ್‌ ಕೊಡಬಾರದು ಎಂದು ನಿರ್ಧರಿಸಿದ್ದ ಪಾಲಕರೂ ಇದೀಗ ಅನಿವಾರ್ಯವಾಗಿ ಫೋನ್‌ ಕೊಡಿಸುವ ಪರಿಸ್ಥಿತಿ! ಪಾಲಕರಿಬ್ಬರೂ ಕಚೇರಿಗೆ ಹೋದರೆ ಮಕ್ಕಳಿಗೆ ಇಂಟರ್‌ನೆಟ್‌ ಬೇಕಲ್ಲ!
ಇದು ಒಂದೆಡೆಯಾದರೆ, ಎಷ್ಟೋ ಕಡೆಗಳಲ್ಲಿ ಇಂಟರ್‌ನೆಟ್‌ ಸೌಲಭ್ಯಗಳೇ ಇಲ್ಲ, ಅದರಲ್ಲಿಯೂ ಕೆಲವು ಗ್ರಾಮಗಳಲ್ಲಿ ಸರಿಯಾಗಿ ನೆಟ್‌ವರ್ಕ್‌ ಸಿಗುತ್ತಿಲ್ಲ. ತೀರಾ ಬಡವರಿಗೆ ಸ್ಮಾರ್ಟ್‌ಫೋನ್‌ ಖರೀದಿಸಲು ಆಗುವುದಿಲ್ಲ. ಇಂಥವರು ಏನು ಮಾಡಬೇಕು? ಹಾಗೆಂದು ಶಾಲೆಯನ್ನಂತೂ ನಿಲ್ಲಿಸುವಂತಿಲ್ಲ.
ಕರೊನಾ ವೈರಸ್‌ ಹರಡದಂತೆ ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳಬೇಕು, ಆನ್‌ಲೈನ್‌ ಕ್ಲಾಸ್‌ ಮಾಡಲು ಇಂಟರ್‌ನೆಟ್‌ ಇಲ್ಲದಿದ್ದರೂ ಬೇರೆ ವ್ಯವಸ್ಥೆಯ ಮೊರೆ ಹೋಗಬೇಕು, ಹೇಗೆ?
ಇದನ್ನೂ ಓದಿ:ಬಹುಮಾನ ತಂದುಕೊಟ್ಟ ನಿಯಮಪಾಲನೆ
ಇಂಥದ್ದೊಂದು ಪರಿಸ್ಥಿತಿಯನ್ನು ನಿಭಾಯಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ ಉತ್ತರ ಪ್ರದೇಶದ ಜಾರ್ಖಂಡ್‌ನ ಡಮ್ಕಾ ಜಿಲ್ಲೆಯ ಬನ್ಕಾತಿ ಎಂಬ ಗ್ರಾಮ. ಇಲ್ಲಿರುವ 246 ವಿದ್ಯಾರ್ಥಿಗಳ ಪೈಕಿ 204 ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ ಇರಲಿಲ್ಲ. ಅದನ್ನು ಕೊಂಡುಕೊಳ್ಳುವ ಶಕ್ತಿಯಂತೂ ಈ ಬಡ ವಿದ್ಯಾರ್ಥಿಗಳಿಗೆ ಇರಲೇಇಲ್ಲ.
ಇಂಥ ಪರಿಸ್ಥಿತಿಯಲ್ಲಿ ಶಾಲೆಯ ಮುಖ್ಯ ಅಧ್ಯಾಪಕ ಶ್ಯಾಮ್‌ಕಿಶೋರ್ ಸಿಂಗ್ ಗಾಂಧಿಯವರು ಒಂದು ಉಪಾಯವನ್ನು ಮಾಡಿದರು. ಅದೇ ಲೌಡ್‌ಸ್ಪೀಕರ್‌ ಟೆಕ್ನಿಕ್‌. ಪ್ರತಿದಿನ ಎರಡು ಗಂಟೆ ಶಾಲೆಯಲ್ಲಿ ತರಗತಿ ನಡೆಯುತ್ತದೆ. ಆದರೆ ವಿದ್ಯಾರ್ಥಿಗಳು ಶಾಲೆಗೆ ಬರುವ ಅಗತ್ಯ ಇಲ್ಲ!
ಇದೊಂದು ಚಿಕ್ಕ ಗ್ರಾಮ. ವಿದ್ಯಾರ್ಥಿಗಳು ತಮ್ಮ ಮನೆಯ ಸಮೀಪ ಬಂದು ಕುಳಿತುಕೊಳ್ಳುತ್ತಾರೆ.ಕಡೆ ಮರಗಳ ಕೆಳಗೆ ವಿದ್ಯಾರ್ಥಿಗಳು ದೂರ ದೂರ ಕುಳಿತುಕೊಳ್ಳುತ್ತಾರೆ. ಲೌಡ್ ಸ್ಪೀಕರ್ ಮೂಲಕ ಶಾಲೆಯಲ್ಲಿ ಶಿಕ್ಷಕರು ಬೋಧಿಸುತ್ತಾರೆ. ಲೌಡ್‌ಸ್ಪೀಕರ್‌ ಈ ಎಲ್ಲಾ ವಿದ್ಯಾರ್ಥಿಗಳಿಗೂ ಕೇಳಿಸುತ್ತದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠಗಳನ್ನು ಕೇಳುತ್ತಾ, ಮುಖ್ಯಾಂಶಗಳನ್ನು ಪಟ್ಟಿ ಮಾಡಿಕೊಳ್ಳುತ್ತಾರೆ.
ಶಾಲೆಯಲ್ಲಿ ಐದು ಜನ ಶಿಕ್ಷಕರು ಮತ್ತು ಇಬ್ಬರು ಪರ್ಯಾಯ ಶಿಕ್ಷಕರು ಮೈಕ್‌ನಲ್ಲಿ ಪಾಠ ಮಾಡುತ್ತಾರೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಸಂದೇಹವೇನಾದರೂ ಬಂದರೆ, ತರಗತಿ ಮುಗಿದ ಬಳಿಕ ಯಾರ ಮನೆಯಲ್ಲಿ ಮೊಬೈಲ್‌ ಫೋನ್‌ ಇದೆಯೋ ಅಲ್ಲಿಂದ ಶಿಕ್ಷಕರಿಗೆ ಮೆಸೇಜ್‌ ಮಾಡಲಾಗುತ್ತದೆ. ಮಾರನೆಯ ದಿನ ಶಿಕ್ಷಕರು ಈ ಸಮಸ್ಯೆಗೆ ಪರಿಹಾರ ನೀಡುತ್ತಾರೆ.
ಕಲಿಯುವ ಮನಸ್ಸಿದ್ದರೆ ಶಾಲೆ ಯಾವುದಾದರೇನು ಎನ್ನುವುದನ್ನು ಇದಾಗಲೇ ಹಲವಾರು ಮಹನೀಯರು ಸಾಬೀತು ಮಾಡಿದ್ದಾರಲ್ಲವೆ? ದೊಡ್ಡ ದೊಡ್ಡ ಶಾಲೆಗಳಲ್ಲಿ, ಎ.ಸಿ ರೂಮ್‌ಗಳಲ್ಲಿ ಕುಳಿತು ಕಲಿತ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏನೆಲ್ಲಾ ಆಗಿದ್ದಾರೆ ಎನ್ನುವುದೂ ಎಲ್ಲರಿಗೂ ತಿಳಿದದ್ದೇ. ಇದನ್ನೇ ಆಧಾರವಾಗಿಟ್ಟುಕೊಂಡು ಇರುವ ವ್ಯವಸ್ಥೆಯಲ್ಲಿಯೇ ಆನ್‌ಲೈನ್‌ ತರಗತಿಗಳಿಗೆ ಸೆಡ್ಡು ಹೊಡೆದು, ಎಲ್ಲ ಮಕ್ಕಳಿಗೂ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇದೀಗ ಭಾರಿ ಪ್ರಚಾರವನ್ನೂ ಗಳಿಸಿ, ಅನೇಕ ಶಾಲೆಗಳು ಈ ಕ್ರಮ ಅನುಸರಿಸಲು ಮುಂದಾಗಿವೆ.(ಏಜೆನ್ಸೀಸ್‌)
ಪಾಕ್‌ನ ನಕಲಿ ಪೈಲಟ್‌ಗಳ ಭಯಾನಕ ಸತ್ಯ ಬಯಲು! ವಿಶ್ವಾದ್ಯಂತ ತಲೆದಂಡ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − one =
Remember me
