ಕೋಲ್ಕತ್ತ:ಶಾಲಾ- ಕಾಲೇಜುಗಳು ಶುರುವಾಗಿಲ್ಲ. ಆದರೆ, ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಬೇಕಾದ ಅನಿವಾರ್ಯತೆಯಿಂದಾಗಿ ಆನ್​ಲೈನ್​ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ, ಈ ತರಗತಿಯೇ ವಿದ್ಯಾರ್ಥಿಗಳಿಗೆ ದುಸ್ವಪ್ನವಾಗಿ ಪರಿಣಮಿಸಿದೆ.
ಕೋಲ್ಕತ್ತದ ಶಾಲೆಯೊಂದರ ಆರನೇ ತರಗತಿ ಮಕ್ಕಳು ಮಂಗಳವಾರ ಆನ್​ಲೈನ್​ ತರಗತಿಗೆಂದು ಸಜ್ಜಾಗಿದ್ದರು. ಆದರೆ ಅತ್ತ ಕಡೆಯಿಮದ ಪಾಠ ಶುರುವಾಗುವ ಬದಲು, ಚಿತ್ರ-ವಿಚಿತ್ರ ಶಬ್ಧಗಳು ಕೇಳಿ ಬಂದಿವೆ. ಇದರಿಂದ ಮಕ್ಕಳಿಗೆ ಭೀತಿಯಾದರೂ ಸರಿಯಾಗಬಹುದು ಎಂದು ಕಾದಿದ್ದಾರೆ.
ಇದನ್ನೂ ಓದಿ;ಪಾಕ್​ ರಾಯಭಾರ ಕಚೇರಿ ಅರ್ಧದಷ್ಟು ಸಿಬ್ಬಂದಿಗೆ ದೇಶ ತೊರೆಯಲು ಸೂಚನೆ ಕೊಟ್ಟಿದ್ದೇಕೆ ಭಾರತ?
ಶಿಕ್ಷಕರ ಬದಲು ಇನ್ಯಾರೋ ಅವರ ಆನ್​ಲೈನ್​ ತರಗತಿಯನ್ನು ಅಕ್ರಮಿಸಿದ್ದರು. ಅಂದರೆ ಆನ್​ಲೈನ್​ ತರಗತಿಯನ್ನು ಹ್ಯಾಕ್​ ಮಾಡಲಾಗಿತ್ತು. ಪಾಠವನ್ನು ಕೇಳಬೇಕೆಂದು ಕೂತಿದ್ದ ವಿದ್ಯಾರ್ಥಿನಿಯರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ. ಜೀವ ಬೆದರಿಕೆಯನ್ನು ಒಡ್ಡಿದ್ದಾರೆ.ಇದಾಗುತ್ತಿದ್ದಂತೆ ಮಕ್ಕಳು ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಹ್ಯಾಕರ್​ಗಳೊಂದಿಗೆ ಪಾಲಕರು ಮಾತನಾಡಲು ಶುರು ಮಾಡುತ್ತಿದ್ದಂತೆ ಸಂಪರ್ಕ ಕಡಿತಗೊಂಡಿದೆ.
ಇದಾದ ಬಳಿಕ ಹ್ಯಾಕರ್​ಗಳು ಚಾಟ್​ ಬಾಕ್ಸ್​ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಶುರು ಮಾಡಿದ್ದಾರೆ. ಕೂಡಲೇ ತರಗತಿಯನ್ನು ನಿಲ್ಲಿಸಲಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು.
ಇದನ್ನೂ ಓದಿ;ಪತಂಜಲಿ ಕರೊನಾ ನಿಗ್ರಹ ಔಷಧಕ್ಕೆ ಪ್ರತಿಕ್ರಿಯಿಸದ ಐಸಿಎಂಆರ್​, ಆಯುಷ್​ ಇಲಾಖೆ
ತನಿಖೆ ಕಂಡುಬಂದ ಅಂಶವೆಂದರೆ ವಿದ್ಯಾರ್ಥಿಯೊಬ್ಬನ ಹೆಸರಿನಲ್ಲಿ ಎರಡು ಲಾಗಿನ್​ಗಳು ಸೃಷ್ಟಿಯಾಗಿವೆ. ಜತೆಗೆ, ತತರಗತಿಯ ಪಾಸ್​ವರ್ಡ್​ ಯಾರಿಗೆಲ್ಲ ಶೇರ್​ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲಾಗುತ್ತಿದೆ. ಈ ಘಟನೆಯಿಂದ ಆನ್​​ಲೈನ್​ ತರಗತಿಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ಪ್ರಶ್ನೆಗಳೆದ್ದಿವೆ.
ಲಸಿಕೆ ಇಲ್ಲದೆಯೂ ಕೊನೆಗಾಣಲಿದೆ ಕರೊನಾ ಸಂಕಷ್ಟ; ಇಟಲಿ ವೈದ್ಯರಿಂದ ಅಧ್ಯಯನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
