ಅಹಮದಾಬಾದ್:ತಂತ್ರಜ್ಞಾನ ಅಭಿವೃದ್ಧಿ ಹೊಂದಿದಂತೆ ಸಂಪ್ರದಾಯಗಳೂ ಕೂಡ ಈಗ ಡಿಜಿಟಲೀಕರಣವಾಗುತ್ತಿವೆ. ಇದಕ್ಕೆ ಉದಾಹರಣೆ ಎಂಬಂತೆ ಗುಜರಾತ್​ನ ಕುಟುಂಬವೊಂದು ವಿಡಿಯೋ ಕಾಲಿಂಗ್ ಮೂಲಕವೇ ಯುವಕ- ಯುವತಿಯ ನಿಶ್ಚಿತಾರ್ಥ ನೆರವೇರಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಯುವಕ ಮತ್ತು ಯುವತಿ ಇಬ್ಬರೂ ಬೇರೆ ಬೇರೆ ಸ್ಥಳಗಳಲಿದ್ದಿದ್ದರಿಂದ ಕುಟುಂಬಸ್ಥರು ಇಬ್ಬರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕ ಮಾಡಿ ನಿಶ್ಚಿತಾರ್ಥ ನೆರವೇರಿಸಿದ್ದಾರೆ. ಅಕ್ಕಪಕ್ಕ ಮಣೆ ಹಾಕಿ ಎರಡು ಮೊಬೈಲ್​ಗಳನ್ನಿಟ್ಟು ಶಾಸ್ತ್ರಗಳನ್ನು ನಡೆಸಲಾಗಿದೆ.
ಕುಟುಂಬದ ಮಹಿಳೆಯರು ಯುವತಿಯ ಮೊಬೈಲ್​ಗೆ ಅರಿಶಿಣ, ಕುಂಕುಮ ಹಚ್ಚಿ, ಸೀರೆ ಇಟ್ಟು ಸಂಪ್ರದಾಯಗಳನ್ನು ನಡೆಸಿದ್ದಾರೆ. ಈ ಹಿಂದೆ ಕೂಡ ವಿಡಿಯೋ ಕಾಲಿಂಗ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡ ಅನೇಕ ಘಟನೆಗಳು ನಡೆದಿದ್ದವು.
ಆದರೆ, ಇದೇ ಮೊದಲ ಬಾರಿ ಯುವಕ-ಯುವತಿ ಇಬ್ಬರೂ ಇಲ್ಲದಿದ್ದರೂ ನಿಶ್ಚಿತಾರ್ಥ ನಡೆಸಲಾಗಿದೆ.(ಏಜೆನ್ಸೀಸ್​)
https://youtu.be/5Xy1hxfGuDA
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 1 =
Remember me
