ತಿರುವನಂತಪುರಂ:ಆನ್​ಲೈನ್​ ರಮ್ಮಿ ಆಟಗಳನ್ನು ನಿಷೇಧಿಸಬೇಕು ಎನ್ನುವ ಕೂಗಿಗೆ ಕೇರಳ ಸರ್ಕಾರ ಕೊನೆಗೂ ಕಿವಿ ಕೊಟ್ಟಿದೆ. ರಾಜ್ಯದಲ್ಲಿ ಆನ್​ಲೈನ್​ ರಮ್ಮಿ ಆಟವನ್ನು ನಿಷೇಧಿಸಿ ಪಿಣರಾಯಿ ವಿಜಯನ್​ ಅವರ ಸರ್ಕಾರ ಆದೇಶ ಹೊರಿಡಿಸಿದೆ.
ಈ ಹಿಂದೆ ಕೇರಳ ಹೈ ಕೋರ್ಟ್​ ಆನ್​ಲೈನ್​ ರಮ್ಮಿಯನ್ನು ಕೇರಳ ಗೇಮಿಂಗ್​ ಆ್ಯಕ್ಟ್​ 1960 ಒಳಗೆ ತರಲು ಸಾಧ್ಯವೇ ಎಂದು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಅದರಂತೆ ಸರ್ಕಾರವು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಆನ್​ಲೈನ್​ ರಮ್ಮಿ ಆಟಗಳನ್ನು ಕೇರಳ ಗೇಮಿಂಗ್​ ಆ್ಯಕ್ಟ್​ 1960 ಒಳಗೆ ತಂದಿದೆ. ಇನ್ನೆರೆಡು ವಾರದಲ್ಲಿ ರಾಜ್ಯದಲ್ಲಿ ಆನ್​ಲೈನ್​ ರಮ್ಮಿ ಆಟಗಳು ಸಂಪೂರ್ಣವಾಗಿ ಬ್ಯಾನ್​ ಆಗಲಿದೆ ಎಂದು ತಿಳಿಸಲಾಗಿದೆ.
ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ಕಾಯಿದೆಯಲ್ಲಿ ತರಬೇಕೆಂದು ರಾಜ್ಯ ಪೊಲೀಸ್ ಮುಖ್ಯಸ್ಥ ಲೋಕನಾಥ್ ಬೆಹೆರಾ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಮತ್ತು ನ್ಯಾಯಮೂರ್ತಿ ಎಸ್.ಮಣಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಸರ್ಕಾರ ತಿಳಿಸಿದೆ.
ಕೇರಳ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲಿ ಈ ಆನ್​ಲೈನ್​ ಜೂಜಾಟವನ್ನು ನಿಷೇಧಿಸಬೇಕೆಂಬ ಕೂಗು ಕೇಳಿಬಂದಿದೆ. ಕರ್ನಾಟಕದಲ್ಲೂ ಅನೇಕರು ಈ ಕುರಿತಾಗಿ ದನಿ ಎತ್ತಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

‘ಉತ್ತರ ಪ್ರದೇಶದಲ್ಲಿ 350 ಸೀಟು ಗೆದ್ದೇ ಗೆಲ್ಲುತ್ತೇವೆ’

“ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 11 =
Remember me
