
ಮುಂಬೈ:ಮದ್ಯದಂಗಡಿಯವ ಎಂದು ಹೇಳಿಕೊಂಡ ವ್ಯಕ್ತಿ ಮಹಿಳೆಯ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 61 ಸಾವಿರ ರೂ.ವರ್ಗಾವಣೆ ಮಾಡಿಕೊಂಡು ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ವಂಚಕನ ಗುರಿಗೆ ತುತ್ತಾದ ಮಹಿಳೆ ಷಾಂಪೇನ್ ಬಾಟಲಿಯೊಂದಕ್ಕೆ 62,000 ರೂ. ಕಳೆದುಕೊಂಡಿದ್ದಾಳೆ.ಆಕೆ ಖಾಸಗಿ ಕಂಪನಿಯೊಂದರ ಉದ್ಯೋಗಿ. ತನ್ನನ್ನು ಪ್ರಕಾಶ್ ಶರ್ಮಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಆಕೆ ಮೋಸಹೋಗಿದ್ದಾಳೆ.
ಇದನ್ನೂ ಓದಿ  :ಮೃತ ಉದ್ಯೋಗದಾತನ ಎಟಿಎಂ ಕಾರ್ಡ್ ಬಳಸಿ ಆಕೆ ಕದ್ದದ್ದು ಬರೊಬ್ಬರಿ 35 ಲಕ್ಷ ರೂ.
ಮಹಿಳೆ ತನಗೆ ಸಮೀಪವಿರುವ ವೈನ್ ಅಂಗಡಿಯೊಂದು ಬ್ರಾಂಡೆಡ್ ಷಾಂಪೇನ್ ಬಾಟಲಿಗೆ 700 ರೂ.ಗಳ ರಿಯಾಯಿತಿ ನೀಡುತ್ತಿರುವುದನ್ನು ಗಮನಿಸಿದಾಗ ಇಂಟರ್ನೆಟ್ ಜಾಲಾಡುತ್ತಿದ್ದಳು. ತನ್ನ ಕುಟುಂಬದೊಂದಿಗೆ ವಿಶೇಷ ಸಂಭ್ರಮವನ್ನು ಆಚರಿಸಲು ಬಯಸಿದ್ದ ಮಹಿಳೆ 1,700 ರೂ.ಗಳ ಬಾಟಲಿಯನ್ನು ಖರೀದಿಸಲು ಆರ್ಡರ್ ಮಾಡಲು ನಿರ್ಧರಿಸಿದಳು.ಆಕೆ ಸೋಮವಾರ ಮಧ್ಯಾಹ್ನ ಸಾರಾಯಿ ಅಂಗಡಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಪ್ರಕಾಶ್ ಶರ್ಮಾ ಎಂಬಾತ ಶಾಂಪೇನ್ ಬಾಟಲಿಗೆ 1,000 ರೂ. ಪಾವತಿಸಬೇಕೆಂದು ತಿಳಿಸಿದ್ದಾನೆ.
ಮಹಿಳೆ ಇ-ವ್ಯಾಲೆಟ್ ಮೂಲಕ ಹಣವನ್ನು ಪಾವತಿಸಲು ಮುಂದಾದಳು ಆದರೆ ಶರ್ಮಾಗೆ ಇ-ವ್ಯಾಲೆಟ್ ಖಾತೆ ಇಲ್ಲದಿರುವುದರಿಂದ ಆಕೆಯ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಶೇರ್ ಮಾಡಲು ತಿಳಿಸಿದ್ದಾನೆ.
ಇದನ್ನೂ ಓದಿ  :ಪ್ರಧಾನ ಮಂತ್ರಿ ಶಿಶು ವಿಕಾಸ ಯೋಜನೆ ಹೆಸರಿನಡಿ ನಕಲಿ ಶಿಶು ಯೋಜನೆ ನಡೆಸುತ್ತಿದ್ದ ಆರೋಪಿಗಳ ಬಂಧನ
ಆಕೆ ತನ್ನ ಸಿವಿವಿ, ಹುಟ್ಟಿದ ದಿನಾಂಕ ಮತ್ತು ಕಾರ್ಡ್ ಅಂತಿಮ ದಿನಾಂಕವನ್ನು ಅಷ್ಟೇ ಅಲ್ಲದೆ ಒನ್-ಟೈಮ್ ಪಾಸ್ವರ್ಡ್ (ಒಟಿಪಿ) ಅನ್ನು ಆತನಿಗೆ ಶೇರ್ ಮಾಡಿದ್ದಾಳೆ. ಆಕೆಯ ಖಾತೆಯಿಂದ 1,000 ರೂ. ಡೆಬಿಟ್ ಆಗಿದೆ.ಮಹಿಳೆ ಫೋನ್ ಕಾಲ್ ಕಟ್ ಮಾಡಲು ಮುಂದಾದಾಗ ಮತ್ತೊಂದು ಒಟಿಪಿ ಬಂದಿದೆ. ಆರ್ಡರ್ ಕ್ಲೋಸ್ ಮಾಡಲು ಶರ್ಮಾ ಆಕೆಗೆ ಒಟಿಪಿ ಕಳುಹಿಸುವಂತೆ ಕೇಳಿದ. ಆತನಿಗೆ ಒಟಿಪಿ ಕಳುಹಿಸಿದ ನಂತರ ಆಕೆ ಶಾಕ್ ಆಗಿದ್ದಾಳೆ. ಕಾರಣ 61,000 ರೂ. ಆಕೆಯ ಖಾತೆಯಿಂದ ವರ್ಗಾವಣೆಗೊಂಡಿದೆ.ಹಣ ಹಿಂದಿರುಗಿಸಲು ಆಕೆ ಆತನಿಗೆ ಕೇಳಿದಾಗ, ಮಾತುಕತೆ ಮುಂದುವರಿದು, ಅವಳು ಕಾಲ್ ಕಟ್ ಮಾಡಿ ಸಾರಾಯಿ ಅಂಗಡಿಗೆ ಹೋದಳು.ಆ ಅಂಗಡಿ ವ್ಯವಸ್ಥಾಪಕರಿಗೆ ದೂರು ನೀಡಿದಾಗ, ಆ ನಂಬರ್ ಆ ಅಂಗಡಿಗೆ ಸೇರಿಲ್ಲ ಎಂದು ತಿಳಿದುಬಂದಿದೆ. ಆಕೆಗೆ ಮೋಸ ಹೋಗಿರುವುದು ಖಚಿತವಾಗಿದೆ. ಶಂಕಿತ ವಂಚಕ ಸಾರಾಯಿ ಅಂಗಡಿಯ ಫೋಟೊ ಬಳಸಿದ್ದು, ಮ್ಯಾನೇಜರ್‌ನ ಫೋಟೋಗಳನ್ನು ವಾಟ್ಸಾಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ತಿಳಿದುಬಂದಿದೆ. ತನಿಖೆ ನಡೆಯುತ್ತಿದೆ.
ಗುಜರಾತ್​ ಬಿಜೆಪಿ ಮುಖಂಡನ ಹತ್ಯೆಗೆ ಚೋಟಾ ಶಕೀಲ್​ ಸ್ಕೆಚ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
