ನವದೆಹಲಿ:ಮೊದಲೆಲ್ಲ ಮದುವೆಯ ದಿನಗಳಷ್ಟೇ ಫೋಟೋ ಹೊಡೆಸಿಕೊಳ್ಳುತ್ತಿದ್ದರು. ಆದರೆ ಪ್ರೀವೆಡ್ಡಿಂಗ್‌, ಪೋಸ್ಟ್‌ ವೆಡ್ಡಿಂಗ್‌ ಫೋಟೋ ಶೂಟ್‌ಗಳು ಕೆಲ ವರ್ಷಗಳಿಂದ ಭಾರಿ ಟ್ರೆಂಡ್‌ ಆಗಿವೆ. ಮದುವೆಯ ದಿನಗಿಂತಲೂ ಹೆಚ್ಚಾಗಿ ಮದುವೆಯ ಮುನ್ನ ಈ ಜೋಡಿಗಳ ಫೋಟೋ ಹೊಡೆಸಿಕೊಳ್ಳುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿವಿಧ ಭಂಗಿಗಳಲ್ಲಿ ಫೋಟೋ ಹೊಡೆಸಿಕೊಳ್ಳುವುದು ಇದೀಗ ಮಾಮೂಲಾಗಿಬಿಟ್ಟಿದೆ.
ಈ ರೀತಿ ಫೋಟೋಶೂಟ್‌ ಮಾಡಿಸಿಕೊಳ್ಳುವಾಗ ನಡೆದಿರುವ ಎಡವಟ್ಟುಗಳು ಅದೆಷ್ಟೋ. ಅಂಥದ್ದೇ ಒಂದು ವಿಡಿಯೋ ಇದೀಗ ಭಾರಿ ವೈರಲ್‌ ಆಗಿದೆ. ನವಜೋಡಿಯೊಂದು ಫೋಟೋಶೂಟ್​ ಮಾಡುವಾಗ ಧೂಮಪಾನಕ್ಕೆ ಪ್ರಚೋದನೆ ಮಾಡಿರುವ ಆರೋಪ ಕೇಳಿಬಂದಿದ್ದು, ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:‘ಪ್ರಚೋದನಕಾರಿ ಉಡುಪುಗಳು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತದೆ…’, ಭುಗಿಲೆದ್ದ ಚೀನಾ ಶಾಲೆಯ ಪಠ್ಯ ಪುಸ್ತಕ ವಿವಾದ
ವಧು ಮತ್ತು ವರ ಇಬ್ಬರು ಸಾಂಪ್ರದಾಯಿಕ ಉಡುಗೆಯಲ್ಲಿದ್ದಾರೆ. ವರ ಧೂಮಪಾನ ಮಾಡಿ ವಧುವಿನ ಬಾಯಿ ಬಾಯಿ ಹಾಕಿ ಹೊಗೆಯನ್ನು ವಧುವಿನ ಬಾಯಿಯ ಒಳಗೆ ಬಿಡುತ್ತಾನೆ. ಆ ಹೊಗೆಯನ್ನು ಎಳೆದುಕೊಳ್ಳುವ ವಧು ಮತ್ತು ಹೊಗೆಯನ್ನು ಬಾಯಿಯಿಂದ ಹೊರಗೆ ಬಿಡುತ್ತಾಳೆ. ಬಳಿಕ ಇಬ್ಬರು ಕ್ಯಾಮೆರಾಗೆ ನಗುತ್ತಾ ಪೋಸ್​ ನೀಡುತ್ತಾರೆ.
Kali-kalam…What to say about this cultural disintegration !!Who all wants such an encouraging wife …who is ok to see her husband's health deteriorating ?!?pic.twitter.com/U5gqZMovbq
— RajeIyer (@RajeswariAiyer)August 13, 2023

ಈ ವಿಡಿಯೋವನ್ನು ರಾಜೇಶ್ವರಿ ಅಯ್ಯರ್​ (@RajeswariAiyer) ಎಂಬುವರು ತಮ್ಮ ಎಕ್ಷ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಕಲಿಗಾಲ. ಈ ಸಾಂಸ್ಕೃತಿಕ ವಿಘಟನೆಯ ಬಗ್ಗೆ ಏನು ಹೇಳಲಿ? ಇಂತಹದನ್ನು ಪ್ರೋತ್ಸಾಹಿಸುವ ಹೆಂಡತಿ ಯಾರಿಗೆ ಬೇಕು? ಗಂಡನ ಆರೋಗ್ಯ ಹದಗೆಡುವುದನ್ನು ನೋಡಲು ಯಾರಿಗೆ ತಾನೇ ಇಷ್ಟ? ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಸಮ್ಮರ್‌ಹಿಲ್‌ನಲ್ಲಿ ಒಂದೇ ಕುಟುಂಬದ ಏಳು ಜನರು ನಾಪತ್ತೆ; ದೇವಸ್ಥಾನ ತಲುಪಿದವರಿಗೆ ಆಚೆ ಬರುವ ಅವಕಾಶವೂ ಸಿಗಲಿಲ್ಲ!
ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ಮೂಲ ಎಲ್ಲಿಯದ್ದು ಎಂದು ತಿಳಿದುಬಂದಿಲ್ಲ. ಆದರೆ, ವಿಡಿಯೋ ಮಾತ್ರ ನೆಟ್ಟಿಗರ ಗಮನ ಸೆಳೆದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದನ್ನು ದಾಟಬಾರದು ಎಂದು ನವಜೋಡಿಯನ್ನು ನೆಟ್ಟಿಗರ ತರಾಟೆಗೆ ತೆಗೆದುಕೊಂಡಿದ್ದಾರೆ.(ಏಜೆನ್ಸೀಸ್​)
ಈವರೆಗೂ 10 ಮಹಿಳೆಯರ ಜತೆ ಮಲಗಿದ್ದೇನೆ! ಮತ್ತೆ ವೈರಲ್​ ಆಯ್ತು ಜೈಲರ್​ ವಿಲ್ಲನ್ ವಿವಾದಾತ್ಮಕ ಮಾತುಗಳು​ ​

‘ಪ್ರಚೋದನಕಾರಿ ಉಡುಪುಗಳು ಲೈಂಗಿಕ ಕಿರುಕುಳಕ್ಕೆ ಕಾರಣವಾಗುತ್ತದೆ…’, ಭುಗಿಲೆದ್ದ ಚೀನಾ ಶಾಲೆಯ ಪಠ್ಯ ಪುಸ್ತಕ ವಿವಾದ

ಮದುವೆ ಮುನ್ನವೇ ವರದಕ್ಷಿಣೆ ಕಿರುಕುಳ: ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + ten =
Remember me
