ಈ ಹಿಂದೆ ಕರೊನಾವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ, ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊಗಳಿಸಿಕೊಂಡಿದ್ದ ಕೇರಳದಲ್ಲಿ ಇದೀಗ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಕರೊನಾ ನಿಯಂತ್ರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ನೇತೃತ್ವದ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುತ್ತಿದೆ.
ಲಾಕ್​ಡೌನ್​ ಮಾರ್ಗಸೂಚಿಯಲ್ಲಿ ಇಂದು ಕೆಲವು ಬದಲಾವಣೆಗಳನ್ನು ಕೇರಳ ಸರ್ಕಾರ ಘೋಷಿಸಿದೆ. ಇನ್ನು ಮುಂದೆ ರಾಜ್ಯದಲ್ಲಿ ಮದುವೆ ಸಮಾರಂಭದಲ್ಲಾಗಲಿ…ಅಂತ್ಯಕ್ರಿಯೆಯಲ್ಲಾಗಲಿ 20 ಜನರು ಮಾತ್ರ ಭಾಗವಹಿಸಲು ಅವಕಾಶ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಅದಕ್ಕಿಂತ ಹೆಚ್ಚಿನ ಜನರು ಪಾಲ್ಗೊಂಡರೆ ಪ್ರಕರಣ ದಾಖಲಾಗುತ್ತದೆ. ಈ ಮೊದಲು 50 ಜನರಿಗೆ ಭಾಗವಹಿಸಲು ಅವಕಾಶ ಇಡಲಾಗಿತ್ತು. ಆದರೆ ಕರೊನಾ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಸರ್ಕಾರ ತಿಳಿಸಿದೆ.ಇದನ್ನೂ ಓದಿ:ರಾಮಮಂದಿರ ನಿರ್ಮಾಣವಾದ ತಕ್ಷಣ ಕರೊನಾ ನಾಶವಾಗುತ್ತದೆ ಎಂದ ಬಿಜೆಪಿ ಎಂಪಿ
ಕೋಳಿಕ್ಕೋಡ್​ ಮತ್ತು ವಯಾನಾಡು ಜಿಲ್ಲೆಗಳಲ್ಲಿ ಈ ಹಿಂದಿನ ಲಾಕ್​ಡೌನ್​ ನಿಯಮಗಳನ್ನು ಮೀರಿ ಮದುವೆ ಮಾಡಲಾಗಿತ್ತು. ಅಲ್ಲದೆ ಅಂತ್ಯಕ್ರಿಯೆಯೊಂದರಲ್ಲೂ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಇದರಿಂದಾಗಿ 70ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿತ್ತು. ಇವೆರಡೆ ಪ್ರದೇಶಗಳಲ್ಲದೆ ಇನ್ನೂ ಕೆಲವು ಕಡೆ ನಿಯಮಗಳ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ, ಲಾಕ್​​ಡೌನ್​ನ್ನು ಇನ್ನಷ್ಟು ಬಿಗಿಗೊಳಿಸಲು ನಿರ್ಧರಿಸಿದ್ದಾಗಿ ಕೇರಳ ಸರ್ಕಾರ ಹೇಳಿದೆ.
ಕೇರಳದಲ್ಲಿ ಪ್ರತಿದಿನ ಸಾವಿರಕ್ಕೂ ಹೆಚ್ಚು ಕರೊನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳೆದ 24 ಗಂಟೆಯಲ್ಲಿ 1,167 ಮಂದಿಯಲ್ಲಿ ಸೋಂಕು ದೃಢವಾಗಿದ್ದು, ಸೋಂಕಿತರ ಸಂಖ್ಯೆ 20,896ಕ್ಕೆ ಏರಿದೆ. (ಏಜೆನ್ಸೀಸ್​)
ದೇಶದಲ್ಲಿ 15 ಲಕ್ಷದ ಗಡಿದಾಟಿದ ಕರೊನಾ ಸೋಂಕಿತರ ಸಂಖ್ಯೆ; ಚೇತರಿಕೆ ಪ್ರಮಾಣದಲ್ಲಿ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 8 =
Remember me
