ಕೊಯಮತ್ತೂರು:ಸಾಮಾನ್ಯವಾಗಿ ದೇವಸ್ಥಾನವೆಂದರೆ ಅಲ್ಲಿ ಪುರುಷರಿಂದಲೇ ಪೂಜೆ ನಡೆಯುತ್ತಿರುತ್ತದೆ. ಗರ್ಭಗುಡಿಗೆ ಅವರಿಗಷ್ಟೇ ಪ್ರವೇಶ ಇರುತ್ತದೆ. ಇನ್ನು ಮುಟ್ಟಾದವರು ದೇವಸ್ಥಾನಕ್ಕೆ ಹೋಗಬಾರದು ಎಂಬ ಕಟ್ಟಳೆಯೂ ಇದೆ. ಆದರೆ ಇಲ್ಲೊಂದು ಕಡೆ ಈ ನಿರ್ಬಂಧಗಳಿಲ್ಲ, ಮುಟ್ಟಾಗಿದ್ದರೂ ಇಲ್ಲಿ ಮೈಲಿಗೆಯಲ್ಲ.
ಹೌದು.. ಇಲ್ಲೊಂದು ದೇವಸ್ಥಾನದಲ್ಲಿ ಮಹಿಳೆಯರೇ ಅರ್ಚಕರು, ಅವರಿಗಷ್ಟೇ ಗರ್ಭಗುಡಿಗೆ ಪ್ರವೇಶ, ಅವರಿಗೆ ಮಾತ್ರ ಪೂಜೆಗೆ ಮಾಡಲು ಅವಕಾಶ. ಅಷ್ಟೇ ಅಲ್ಲ, ಭಕ್ತೆಯರು ಮುಟ್ಟಾಗಿದ್ದರೂ ಇಲ್ಲಿಗೆ ಬರಬಹುದು, ಅವರಿಗೆ ಯಾವ ನಿರ್ಬಂಧವೂ ಇಲ್ಲ.

ತಮಿಳುನಾಡಿನ ವೆಲ್ಲಿಯಂಗಿರಿ ಪರ್ವತ ಪ್ರದೇಶದ ಬುಡದಲ್ಲಿ ಮಾ ಲಿಂಗ ಭೈರವಿ ಎಂಬ ದೇವಸ್ಥಾನದಲ್ಲಿ ಇಂಥ ಸನ್ನಿವೇಶ ಕಾಣಸಿಗುತ್ತದೆ. ಬೈರಾಗಿಣಿ ಮಾ ಎಂದೂ ಕರೆಯಲಾಗುವ ಈ ದೇವಸ್ಥಾನದಲ್ಲಿ ಮಹಿಳೆಯರು ಕೆಂಪು ಸೀರೆ ಉಟ್ಟುಕೊಂಡು ಪೂಜೆ ಮಾಡುತ್ತಾರೆ.

ತಮಿಳುನಾಡಿನ ಕೊಯಮತ್ತೂರು ನಗರದಿಂದ 40 ಕಿಲೋಮೀಟರ್ ದೂರದಲ್ಲಿರುವ ಸದ್ಗುರು ಜಗ್ಗಿ ವಾಸುದೇವ್ ಆಶ್ರಮದಲ್ಲಿ ಈ ದೇವಾಲಯ ಇದೆ. ಈ ದೇವಸ್ಥಾನ ಗೋಡೆಗಳಲ್ಲಿ ತಲೆಕೆಳಗಾದ ತ್ರಿಕೋನದ ರಚನೆಗಳಿದ್ದು, ಗರ್ಭದ ಸಂಕೇತ ಎನ್ನಲಾಗುತ್ತಿದೆ. ದೇವಾಲಯದ ವಿನ್ಯಾಸವು ಸ್ತ್ರೀಯ ದೇಹವನ್ನು ಪ್ರತಿನಿಧಿಸುವಂತಿದೆ.
ಇದೊಂದಿದ್ರೆ ಸಾಕು, ಬ್ಯಾಂಕ್​ ಖಾತೆಯೇ ಬೇಕಾಗಿಲ್ಲ: ಹಣ ಪಾವತಿ-ಸ್ವೀಕೃತಿ ಎಲ್ಲವೂ ಬ್ಯಾಂಕ್ ಅಕೌಂಟ್ ಇಲ್ಲದೆಯೂ ಸಾಧ್ಯ!

ಇನ್​ಫೊಸಿಸ್​ ನಾರಾಯಣಮೂರ್ತಿ ಅವರ ಆ ಮಾತು ‘ವಾರಕ್ಕೆ 70 ಗಂಟೆಗಳ ಕೆಲಸದ ನಡುವೆ’ ಕಳೆದುಹೋಯ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
