ನವದೆಹಲಿ :ಬಾಲಿವುಡ್​ ನಟ ಹಾಗೂ ಬಿಜೆಪಿ ಎಂಪಿ ಕಿರಣ್ ಖೇರ್​ ಅವರ ಪತಿ ಅನುಪಂ ಖೇರ್​ ಅವರು ಸಾಧಾರಣವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸುತ್ತಾ ಬಿಜೆಪಿ ಬೆಂಬಲಿಗರಾಗೇ ಗುರುತಿಸಿಕೊಂಡಿದ್ದಾರೆ. ಅಂತಹುದರಲ್ಲಿ ನಿನ್ನೆ ಸಂದರ್ಶನವೊಂದರಲ್ಲಿ ಕರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಹೇಳಿದ್ದು ವರದಿಯಾಗಿತ್ತು.
ಅಷ್ಟೇ ಅಲ್ಲ, ಇಮೇಜ್ ಬಿಲ್ಡಿಂಗ್​ಗೂ ಮೀರಿ ಮುಖ್ಯವಾದದ್ದು ಜೀವನದಲ್ಲಿ ಎಷ್ಟೋ ವಿಚಾರಗಳಿವೆ ಎಂಬುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಪ್ರಜೆಗಳ ಆಶೋತ್ತರಗಳನ್ನು ಅರಿತು ಕೆಲಸ ಮಾಡಬೇಕು ಎಂದು ಎಚ್ಚರಿಸಿದ್ದರು. ಅವರ ಈ ಮಾತುಗಳು ಭಾರೀ ಚರ್ಚೆ ಪಡೆದ ಬೆನ್ನಲ್ಲೇ ಇಂದು ಮಾರ್ಮಿಕವಾದ ಮತ್ತೊಂದು ಮಾತನ್ನು ಖೇರ್ ಆಡಿದ್ದಾರೆ.
गलती उन्हीं से होती हैजो काम करते हैं,निकम्मों की ज़िंदगी तोदूसरों की बुराई खोजने में हीख़त्म हो जाती है..:)
— Anupam Kher (@AnupamPKher)May 14, 2021

‘ಕೆಲಸ ಮಾಡುವವರಿಂದಲೇ ತಪ್ಪುಗಳಾಗುವುದು, ಆಲಸಿಯಾಗಿ ಕಾಲ ಕಳೆಯುವವರ ಜೀವನವು ಬೇರೆಯವರಲ್ಲಿ ಕೆಟ್ಟದ್ದನ್ನು ಹುಡುಕುವುದರಲ್ಲೇ ಮುಗಿದುಹೋಗುತ್ತೆ’ ಎಂಬ ಅರ್ಥ ನೀಡುವ ಹಿಂದಿ ಸಾಲುಗಳನ್ನು ಅವರು ಟ್ವೀಟ್ ಮಾಡಿದ್ದಾರೆ. ಪರೋಕ್ಷವಾಗಿ ಕೇಂದ್ರ ಸರ್ಕಾರ ಸ್ವಲ್ಪ ತಪ್ಪಿದ್ದರೂ ಕೆಲಸ ಮಾಡುತ್ತಿದೆ. ಸುಮ್ಮನೆ ಕೂತು ವಿರೋಧಕ್ಕಾಗಿ ವಿರೋಧ ಮಾಡುವ ರಾಜಕೀಯ ವ್ಯರ್ಥ ಎಂಬ ನವಿರಾದ ಸಂದೇಶ ನೀಡಿದ್ದಾರೆ.
ಅಂದ ಹಾಗೆ, ಭಾರತವು ಕರೊನಾ ಎರಡನೇ ಅಲೆಗೆ ತತ್ತರಿಸಿರುವ ಈ ಸಮಯದಲ್ಲಿ ಅನುಪಂ ಖೇರ್​ ಅವರು, ಅತ್ಯಾವಶ್ಯಕ ವೈದ್ಯಕೀಯ ಉಪಕರಣಗಳನ್ನು ಪೂರೈಸುವ ಉದ್ದೇಶದಿಂದ ‘ಪ್ರಾಜೆಕ್ಟ್​ ಹೀಲ್ ಇಂಡಿಯಾ’ ಆರಂಭಿಸಿದ್ದಾರೆ. ಗ್ಲೋಬಲ್ ಕ್ಯಾನ್ಸರ್ ಫೌಂಡೇಶನ್​ನ ಡಾ. ಆಶುತೋಷ್ ತಿವಾರಿ ಮತ್ತು ಭಾರತ್​ ಫೋರ್ಜ್​ ಸಂಸ್ಥೆಯ ಬಾಬಾ ಕಲ್ಯಾಣಿ ಅವರೊಂದಿಗೆ ಕೈಜೋಡಿಸಿರುವ ಅನುಪಂ ಖೇರ್ ಫೌಂಡೇಶನ್​, ವಿದೇಶದಿಂದ ವೆಂಟಿಲೇಟರ್ಸ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್​ಗಳಂಥ ಪ್ರಾಣ ರಕ್ಷಕ ಉಪಕರಣಗಳನ್ನು ತರಿಸಿ ಅಗತ್ಯವಿರುವ ಸಂಸ್ಥೆಗಳಿಗೆ ವಿತರಿಸುವ ಕಾರ್ಯ ಆರಂಭಿಸಿದೆ.(ಏಜೆನ್ಸೀಸ್)
ಗೋವಾ ಆಕ್ಸಿಜನ್ ಗೊಂದಲ : ಒಂದೇ ಆಸ್ಪತ್ರೆಯಲ್ಲಿ 4 ದಿನಗಳಲ್ಲಿ 74 ಸಾವು

ಈ ಚಿತ್ರದಲ್ಲಿ ಜನಪ್ರಿಯ ಕಾಮೆಡಿಯನ್ ಇದ್ದಾರೆ… ಯಾರು ಹೇಳ್ತೀರಾ ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − five =
Remember me
