ನವದೆಹಲಿ:ಪ್ರವಾಹ, ಲಾಕ್‌ಡೌನ್‌ ಸಮಯದಲ್ಲಿ ಸಂತ್ರಸ್ತರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡಿ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರರಾಗಿರುವ ಬಾಲಿವುಡ್‌ ನಟ ಸೋನು ಸೂದ್‌, ಈಗ ಮತ್ತೊಂದು ಮಹತ್ತರ ಕಾರ್ಯ ಮಾಡಿದ್ದಾರೆ.
ವೈರಸ್‌ ಸೋಂಕು ತಗುಲುವುದನ್ನು ತಡೆಗಟ್ಟುನ ನಿಟ್ಟಿನಲ್ಲಿ ಕರೊನಾ ವಾರಿಯರ್ಸ್‌ ಆಗಿರುವ ಮಹಾರಾಷ್ಟ್ರ ಪೊಲೀಸರಿಗೆ 25 ಸಾವಿರ ಫೇಸ್‌ ಷೀಲ್ಡ್‌ಗಳನ್ನು ನೀಡಿದ್ದಾರೆ. ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರು ಈ ಕುರಿತು ಮಾಹಿತಿ ನೀಡುವ ಜತೆಗೆ ಸೋನು ಸೂದ್‌ ಜತೆ ತಮ್ಮ ಟ್ವಿಟರ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದು, ಅವರ ಉದಾರ ಕೊಡುಗೆಗಾಗಿ ಧನ್ಯವಾದ ಸಲ್ಲಿಸಿದ್ದಾರೆ.
“ನಮ್ಮ ಪೊಲೀಸ್ ಸಿಬ್ಬಂದಿಗೆ 25 ಸಾವಿರ ಫೇಸ್‌ ಷೀಲ್ಡ್‌ಗಳನ್ನು ನೀಡುತ್ತಿರುವ ನಿಮ್ಮ ಉದಾರತೆಗಾಗಿ ನಾನು ಧನ್ಯವಾದ ಸಲ್ಲಿಸುತ್ತಿದ್ದೇನೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನಟ,. “ನಿಮ್ಮ ಕರುಣಾಜನಕ ಮಾತುಗಳಿಂದ ನಿಜವಾಗಿಯೂ ಗೌರವಿಸಲ್ಪಟ್ಟಿದೆ ಸರ್! ನನ್ನ ಪೊಲೀಸ್ ಸಹೋದರರು ಮತ್ತು ಸಹೋದರಿಯರು ಈ ಸಂದರ್ಭದಲ್ಲಿಯ ವೀರರು. ಅವರ ಕಾರ್ಯ ಶ್ಲಾಘನಾರ್ಹ. ನಾನು ಚಿಕ್ಕ ಸೇವೆ ಸಲ್ಲಿಸುವ ಮೂಲಕ ಅವರಿಗೆ ನೆರವಾಗುತ್ತಿದ್ದೇನೆ, ಜೈ ಹಿಂದ್’ ಎಂದಿದ್ದಾರೆ.
I thank@SonuSoodJi for your generous contribution of giving 25,000#FaceShieldsfor our police personnel.pic.twitter.com/bojGZghy23
— ANIL DESHMUKH (@AnilDeshmukhNCP)July 16, 2020

ಕರೊನಾ ವೈರಸ್‌ ಬಿಕ್ಕಟ್ಟಿನ ದಿನಗಳಲ್ಲಿ ವಲಸಿಗರಿಗೆ ಸಹಾಯ ಮಾಡಿರುವ ಸಂದರ್ಭದಲ್ಲಿ ತಮಗಾಗಿರುವ ಅಪೂರ್ವ ಅನುಭವಗಳನ್ನು ಪುಸ್ತಕದ ರೂಪದಲ್ಲಿ ಹೊರತರುವುದಾಗಿ ಸೋನು ಸೂದ್‌ ಹೇಳಿದ್ದಾರೆ. ಈ ಪುಸ್ತಕವನ್ನು ಪ್ರಕಟಿಸಲು ಪೆಂಗ್ವಿನ್ ರಾಂಡಮ್ ಹೌಸ್ ಮುಂದಾಗಿದೆ.
ಕರೊನಾ ಸೋಂಕಿನಲ್ಲಿ ನಂ.1 ಸ್ಥಾನದಲ್ಲಿರುವ ಕುಖ್ಯಾತಿ ಗಳಿಸಿರುವ ಮಹಾರಾಷ್ಟ್ರದಲ್ಲಿ ಈ ವರೆಗೂ 6,400 ಮಂದಿ ಪೊಲೀಸ್ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದು, ಈ ಪೈಕಿ 5,100 ಮಂದಿ ಪೊಲೀಸರು ಗುಣಮುಖರಾಗಿದ್ದಾರೆ. 1,213 ಮಂದಿ ಪೊಲೀಸರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 48 ಮಂದಿ ಪೊಲೀಸರು ಕೊರೋನಾಗೆ ಬಲಿಯಾಗಿದ್ದಾರೆ.(ಏಜೆನ್ಸೀಸ್‌)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 1 =
Remember me
