ದೆಹಲಿ:ರೈಲ್ವೆ ಎಸಿ ಕೋಚ್‌ನ ಛಾವಣಿಯ ಮೂಲಕ ನೀರು ಸೋರಿಕೆಯಾಗಿ ಪ್ರಯಾಣಿಕರು ತೊಂದರೆಗೆ ಒಳಗಾದ ಘಟನೆ ಆವಂತಿಕಾ ಎಕ್ಸ್‌ಪ್ರೆಸ್‌ನಲ್ಲಿ ನಡೆದಿದೆ.ಇದನ್ನೂ ಓದಿ:ಬೆಂಗಳೂರು-ಮೈಸೂರು ದಶಪಥ: ಅಪಘಾತದಲ್ಲಿ ಈ ತಿಂಗಳು 45 ಸಾವು!; ಸಚಿವರಿಂದ ಅಧಿಕಾರಿಗಳ ಸಭೆ, ಸದ್ಯದಲ್ಲೇ ತನಿಖೆ?ಮುಂಬೈ-ಇಂದೋರ್ ಆವಂತಿಕಾ ಎಕ್ಸ್‌ಪ್ರೆಸ್‌ನ ಪ್ರಯಾಣಿಕರೊಬ್ಬರು ಮಳೆಯ ಸಮಯದಲ್ಲಿ ಎಸಿ ಕೋಚ್‌ನ ಮೇಲ್ಛಾವಣಿಯಿಂದ ನೀರು ಸೋರುತ್ತಿರುವ ಹಾಗೂ ಪ್ರಯಾಣಿಕನ ಅಲ್ಲಿಯೇ ಕುಳಿತಿರುವ ಸ್ಥಿತಿಯನ್ನು ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕೂಡಲೇ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಈ ಕುರಿತು ತೀವ್ರ ಆಕ್ಷೇಪದ ಜತೆಗೆ ತರಹೇವಾರಿ ಕಾಮೆಂಟ್​ಗಳನ್ನು ಮಾಡಿದ್ದಾರೆ.ಕಾಂಗ್ರೆಸ್ ಕೂಡ್​​ ಈ ವೀಡಿಯೊವನ್ನು ಮರು-ಶೇರ್ ಮಾಡಿದ್ದು, ಪ್ರಚಾರದ ಬದಲಾಗಿ ರೈಲ್ವೆಯ ಅಭಿವೃದ್ಧಿಗಾಗಿ ಹಲವಾರು ಕೆಲಸಗಳನ್ನು ಮಾಡಬಹುದಿತ್ತು. ಹೊಸ ರೈಲುಗಳಿಗೆ ಹಸಿರು ಧ್ವಜವನ್ನು ತೋರಿಸುವ ರೈಲ್ವೆ ಮಂತ್ರಿ ಪ್ರಸ್ತುತ ವಿದೇಶದಲ್ಲಿದ್ದು, ಹೆಸರಿಗೆ ಮಾತ್ರ ರೈಲ್ವೆ ಮಂತ್ರಿ ಎನಿಸಿಕೊಂಡಿರುವ ವ್ಯಕ್ತಿ ಸ್ವಲ್ಪ ಇತ್ತ ಗಮನಹರಿಸಬೇಕು ಎಂದು ವ್ಯಂಗ್ಯವಾಡಿ ಟ್ವೀಟ್​​ ಮಾಡಿದೆ.ಇದನ್ನೂ ಓದಿ:ಕೊಲೆ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ 27 ವರ್ಷಗಳ ಬಳಿಕ ಬಂಧನ: ಈಕೆಗಾಗಿ ಮೂರು ರಾಜ್ಯದಲ್ಲಿ ಹುಡುಕಾಡಿದ್ದ ಪೊಲೀಸ್​​ಈ ವಿಡಿಯೋಗೆ ಭಾರತೀಯ ರೈಲ್ವೆಯು ತೆರೆದ ಶವರ್ ಸೌಲಭ್ಯದೊಂದಿಗೆ ಹೊಸ ಸೌಲಭ್ಯ ಪ್ರಾರಂಭಿಸಿದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ಭಾರತೀಯ ರೈಲ್ವೆ ಈಗ ಪ್ರಯಾಣಿಕರಿಗೆ ಶವರ್ ಜೆಲ್, ಶಾಂಪೂ ಮತ್ತು ಬಾತ್​ರೂಮ್​​ನ್ನು ಒದಗಿಸಲು ಚರ್ಚಿಸುತ್ತಿದೆ ಎಂದು ವ್ಯಂಗ್ಯಭರಿತವಾಗಿ ಕಾಮೆಂಟ್​​ನಲ್ಲಿ ತಿಳಿಸಿದ್ದಾರೆ.ಕೂಡಲೇ ಎಚ್ಚೆತ್ತ ಪಶ್ಚಿಮ ಪಶ್ಚಿಮ ರೈಲ್ವೇಸ್ ಈ ಸಮಸ್ಯೆಯನ್ನು ಗಮನಿಸಿದ್ದು ಆವಂತಿಕಾ ಎಕ್ಸ್‌ಪ್ರೆಸ್‌ನ ಎಲ್ಲಾ ಕೋಚ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಯಾಣಿಕರ ಅನುಕೂಲವು ನಮ್ಮ ಮೊದಲ ಆದ್ಯತೆಯಾಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
