ಪಣಜಿ:ಭಾರತದ 52ನೆಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗೋವಾದಲ್ಲಿ ಚಾಲನೆ ಸಿಕ್ಕಿದ್ದು, ಜಗಮಗಿಸುವ ಬಣ್ಣದ ಲೋಕ ಅನಾವರಣಗೊಂಡಿದೆ. ವಿಶೇಷವೆಂದರೆ ಈ ಸಲದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜತೆಗೇ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಕೂಡ ನಡೆಯಲಿದೆ.
ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಸಂದರ್ಭದಲ್ಲಿ ಮಾತನಾಡುತ್ತ, ಚಲನಚಿತ್ರೋತ್ಸವದ ಮೂಲಕ ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ನೈತಿಕತೆ ಅರಿಯಲು ಸಾಧ್ಯ ಎಂದು ಹೇಳಿದ ಅವರು, ಸಿನಿಮಾ ಕ್ಷೇತ್ರದಿಂದ 75 ಯುವ ಸೃಜನಶೀಲ ಪ್ರತಿಭಾವಂತರಿಗೆ ವಿಶೇಷ ಅವಕಾಶ ಕೊಡುವ ಯೋಜನೆ ಕುರಿತು ಪ್ರಸ್ತಾಪಿಸಿದರು.
ಡ್ರೀಮ್​ ಗರ್ಲ್ ಎಂದೇ ಹೆಸರಾಗಿರುವ ಖ್ಯಾತ ನಟಿ ಹಾಗೂ ಸಂಸದೆ ಕೂಡ ಆಗಿರುವ ಹೇಮಮಾಲಿನಿ ಅವರಿಗೆ ಇಂಡಿಯನ್ ಫಿಲ್ಮ್​ ಪರ್ಸನಾಲಿಟಿ ಆಫ್ ದ ಇಯರ್-2021 ಪ್ರಶಸ್ತಿ ನೀಡಲಾಯಿತು.
ಇದನ್ನೂ ಓದಿ:ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​
ಹಲವಾರು ಮೊದಲುಗಳಿಗೂ ಈ ಸಲದ ಚಿತ್ರೋತ್ಸವ ಸಾಕ್ಷಿಯಾಗಿದೆ. ಮೊದಲ ಬಾರಿಗೆ ಈ ಸಿನಿಮೋತ್ಸವದಲ್ಲಿ ಬ್ರಿಕ್ಸ್ ಪಾಲ್ಗೊಳ್ಳುತ್ತಿದೆ. ಅಂದರೆ ಬ್ರೆಜಿಲ್, ರಷ್ಯಾ, ಚೀನಾ, ದಕ್ಷಿಣ ಆಫ್ರಿಕ (BRICS) ಸಿನಿಮಾಗಳು ಈ ಸಲದ ಉತ್ಸವದಲ್ಲಿ ಇರಲಿವೆ. ಅಲ್ಲದೆ ಈ ಸಲ ಒಟಿಟಿಗೂ ಅವಕಾಶವಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ತಿಳಿಸಿದ್ದಾರೆ.
ಕೋವಿಡ್​ ಕರಿಛಾಯೆಯ ನಡುವೆಯೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ತನ್ನ ಹೊಳಲು ಕಳೆದುಕೊಂಡಿಲ್ಲ. ಕಳೆದ ಸಲ 69 ದೇಶಗಳಿಂದ ಸಿನಿಮಾಗಳು ಬಂದಿದ್ದರೆ ಈ ಸಲ 96 ದೇಶಗಳಿಂದ 624 ಸಿನಿಮಾಗಳು ಬಂದಿವೆ. ಅದರಲ್ಲೂ ಭಾರತದ 18 ಭಾಷೆಗಳ 44 ಚಿತ್ರಗಳು ಇಂಡಿಯನ್ ಪನೋರಮಾದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.
ನಮ್​ ಕಾರು ತೇಲ್ತಿತ್ತು, ಇಂಜಿನ್ನೇ ಆಫ್​ ಆಯ್ತು..; ತಿರುಪತಿಯಲ್ಲಿ ಭಯಂಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದನ್ನು ವಿವರಿಸಿದ ನಟಿ ತಾರಾ
ಹಳೇ ಮುಗಿಲು, ಹೊಸ ಪೇಟೆ: ಮುಗಿಲ್ ಪೇಟೆ ಸಿನಿಮಾ ವಿಮರ್ಶೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 6 =
Remember me
