ಲಖೌನ:ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕನಿಷ್ಠ ಎಂಟು ಮಂದಿಯನ್ನು ಕೊಂದಿದ್ದ ತೋಳವನ್ನು ಕೊನೆಗೂ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಆದರೆ ಈ ಹಿಂಡಿನಲ್ಲಿದ್ದ ಇನ್ನೂ ಎರಡು ತೋಳಗಳು ಇನ್ನೂ ಸೆರೆಸಿಕ್ಕಿಲ್ಲ. ಹೀಗಾಗಿ ಆತಂಕ ಕಡಿಮೆಯಾಗಿಲ್ಲ.
ಇದನ್ನೂ ಓದಿ:ರಾಜ್ಯದಲ್ಲಿ ಬೇಜವಾಬ್ದಾರಿ ಕಾಂಗ್ರೆಸ್ ಸರ್ಕಾರ, ಕಳೆದೊಂದು ವರ್ಷದಲ್ಲಿ ಅಭಿವೃದ್ಧಿ ಆರಂಭವೇ ಆಗಿಲ್ಲ!: ವಿಜಯೇಂದ್ರ ಆರೋಪವೇನು?
ಏಳು ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಬಹ್ರೈಚ್ ಜಿಲ್ಲೆಯಲ್ಲಿ ಕನಿಷ್ಠ ಎಂಟು ಮಂದಿ ತೋಳಗಳ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ನಡೆದ ಇತ್ತೀಚಿನ ದಾಳಿಯಲ್ಲಿ ಒಂದು ಶಿಶುವೊಂದು ಬಲಿಯಾಗಿತ್ತು.
6 ತೋಳಗಳ ಹಿಂಡಿನಲ್ಲಿದ್ದ ಈ ದಾಳಿಕೋರ ತೋಳವು ನಿರ್ದಿಷ್ಟ ದಾರಿಯಲ್ಲಿ ಓಡುವಂತೆ ಪಟಾಕಿಗಳನ್ನು ಸಿಡಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ತಮ್ಮ ಬಲೆಗೆ ಬೀಳಿಸಿದ್ದಾರೆ. ತೋಳದ ಪ್ರಜ್ಞೆ ತಪ್ಪಿಸಿದ ಅಧಿಕಾರಿಗಳು ಮೃಗಾಲಯವೊಂದಕ್ಕೆ ಅದನ್ನು ಸಾಗಿಸಿದ್ದಾರೆ. ಈವರೆಗೂ ಒಟ್ಟು ನಾಲ್ಕು ತೋಳಗಳನ್ನು ಅಧಿಕಾರಿಗಳು ಸೆರೆಹಿಡಿದ್ದಾರೆ. ಇನ್ನೂ ಎರಡು ಕಾಡು, ಹಳ್ಳಿಗಳ ನಡುವೆ ಓಡಾಡಿಕೊಂಡಿವೆ ಎಂದು ನಂಬಲಾಗಿದೆ.
ಈ ನರಭಕ್ಷಕ ತೋಳಗಳನ್ನು ಸೆರೆಹಿಡಿಯಲು ಉತ್ತರ ಪ್ರದೇಶ ಸರ್ಕಾರವು ‘ ಆಪರೇಷನ್ ಭೇಡಿಯಾ ಕಾರ್ಯಾಚರಣೆ ಆರಂಭಿಸಿದೆ. ಬಹ್ರೈಚ್ ಜಿಲ್ಲೆಯ ಮೆಹ್ಸಿ ತಾಲೂಕಿನಲ್ಲಿ ಬೇಟೆಯಾಡುತ್ತಾ ಅಡ್ಡಾಡುತ್ತಿದ್ದ ಈ ತೋಳಗಳ ಹಿಂಡನ್ನು ಹಿಡಿಯುವುದು ಸುಲಭದ ಮಾತಾಗಿರಲಿಲ್ಲ. ತೋಳ ಆಕ್ರಮಣ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು ಕಾರ್ಯಾಚರಣೆ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದರು ಎನ್ನಲಾಗಿದೆ.
ನರಭಕ್ಷಕ ತೋಳಗಳನ್ನು ಹಿಡಿಯಲು ಅಧಿಕಾರಿಗಳು 16 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅರಣ್ಯ ಮತ್ತು ಹಳ್ಳಿಗಳ ಹೊಲಗಳ ನಡುವೆ ಓಡಾಡುವ ತೋಳಗಳ ಜಾಡು ಹಿಡಿಯಲು ಡ್ರೋನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್ ಮ್ಯಾಪಿಂಗ್ ತಂತ್ರಜ್ಞಾನಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸಿದ್ದರು. ದಾಳಿಗಳು ಸಂಭವಿಸಿದ ಸಂದರ್ಭದಲ್ಲಿ ತೋಳಗಳ ದಾರಿಯ ದಿಕ್ಕು ಬದಲಿಸುವ ಸಲುವಾಗಿ ಅಧಿಕಾರಿಗಳು ಅನೆಗಳ ಲದ್ದಿ ಮತ್ತು ಮೂತ್ರವನ್ನು ಬಳಸಿದ್ದರು.
ಹಳ್ಳಿಗಳಲ್ಲಿ ಬಾಗಿಲು ಇಲ್ಲದ ಮನೆಗಳಿಗೆ ಕದ ಅಳವಡಿಸಲಾಗುತ್ತಿದೆ. ಎಲ್ಲ ಹಳ್ಳಿಗಳಲ್ಲಿಯೂ ರಾತ್ರಿ ಗಸ್ತು ತಿರುಗುವಿಕೆಯನ್ನು ನಡೆಸಲಾಗುತ್ತಿದೆ. ಜನರಲ್ಲಿ ತೋಳಗಳ ದಾಳಿ ಕುರಿತು ಜಾಗೃತಿ ಮೂಡಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಹೊಣೆ ವಹಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮೋನಿಕಾ ರಾಣಿ ತಿಳಿಸಿದ್ದಾರೆ.
ಹುರುನ್ ಇಂಡಿಯಾ ಭಾರತದ ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲಿ ಗೌತಮ್ ಅದಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
