ಲಖನೌ:ಉತ್ತರಪ್ರದೇಶದಲ್ಲಿ 2017ರಲ್ಲಿ ಆ್ಯಂಟಿ ರೋಮಿಯೋ ಸ್ಕ್ವಾಡ್​ ರಚನೆಯಾಗಿದ್ದು ಹಳೇ ವಿಷಯ. ಕಾಲೇಜಿಗೆ ಹೋಗುವ ಹೆಣ್ಣುಮಕ್ಕಳು, ಮಹಿಳೆಯರ ಸುರಕ್ಷತೆಗಾಗಿ ಸಿಎಂ ಯೋಗಿ ನೇತೃತ್ವದ ಸರ್ಕಾರ ಈ ಸ್ಕ್ವಾಡ್​ ರಚನೆ ಮಾಡಿತ್ತು.
ಇದೀಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಇನ್ನೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯದಲ್ಲಿ ಸೆಕ್ಸ್​ ಸಂಬಂಧಿತ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್​ ದುರಾಚಾರಿ’ ಎಂಬ ಕಾರ್ಯಾಚರಣೆ ಶುರುವಾಗಿದೆ.ಇದನ್ನೂ ಓದಿ:ಕಂಗನಾಗ್ಯಾಕೆ ಇನ್ನೂ ಸಮನ್ಸ್​ ಕೊಟ್ಟಿಲ್ಲ? ನಗ್ಮಾ ಪ್ರಶ್ನೆ
ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ತಡೆಯುವ ನಿಟ್ಟಿನಲ್ಲಿ ‘ಆಪರೇಶನ್​ ದುರಾಚಾರಿ’ ಪ್ರಾರಂಭ ಮಾಡಲಾಗಿದೆ. ಯಾರಾದರೂ ಲೈಂಗಿಕ ಸಂಬಂಧ ಅಪರಾಧಗಳನ್ನು ಮಾಡಿದರೆ, ಸೆಕ್ಸ್​ ಕ್ರೈಂಗಳಲ್ಲಿ ಸಿಕ್ಕಿಬಿದ್ದರೆ ಅವರ ಫೋಟೊ, ಮಾಡಿದ ಅಪರಾಧದ ಉಲ್ಲೇಖ ಇರುವ ದೊಡ್ಡ ಪೋಸ್ಟರ್​​ಗಳನ್ನು ರಸ್ತೆಗಳ ಪಕ್ಕದಲ್ಲಿ ಹಾಕಲಾಗುವುದು. ಈ ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಸಿಎಂ ಯೋಗಿ ಅವರೇ ನಿರ್ದೇಶನ ನೀಡಿದ್ದಾಗಿ ಸರ್ಕಾರದ ವಕ್ತಾರ ತಿಳಿಸಿದ್ದಾರೆ.ಇದನ್ನೂ ಓದಿ:ಮಗುವಾಯಿತೆಂದು ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮೇಘನಾ ರಾಜ್​ ಮನವಿ
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ನಡೆಸುವವರ ಹೆಸರು ಹೇಳಿ ಮಾನ ಕಳೆಯುವುದು, ತನ್ಮೂಲಕ ಅವರಿಗೆ ಪಾಠ ಕಲಿಸುವುದೇ ಈ ಕಾರ್ಯಾಚರಣೆಯ ಉದ್ದೇಶ ಎಂದಿದ್ದಾರೆ. (ಏಜೆನ್ಸೀಸ್​)
ಬೆಂಗಳೂರಿಗೆ ಬರೋರು, ಬೆಂಗಳೂರಿಂದ ಬೇರೆ ಊರಿಗೆ ಹೋಗೋರು ನಾಳೆ ಹುಷಾರು!

ಡ್ರಗ್ಸ್ ಕೇಸ್​; ಖ್ಯಾತ ನಿರೂಪಕಿ ಅನುಶ್ರೀಗೆ ಸಿಸಿಬಿ ಬುಲಾವ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + four =
Remember me
