ವಾರ್ಧಾ:ದೇಶದಲ್ಲಿ ಅತಿಹೆಚ್ಚು ಕರೊನಾ ಸೋಂಕಿತರು ಇರುವುದು ಮಹಾರಾಷ್ಟ್ರದಲ್ಲಿ. ವೈರಸ್​ ಪೀಡಿತರ ಸಂಖ್ಯೆಯಲ್ಲಿ ದಿನೇದಿನೆ ಏರುತ್ತಿದ್ದರೂ ಅದರ ನಡುವೆ ಜನಪ್ರತಿನಿಧಿಗಳೂ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವ ಆಗಿದೆ.
ವಾರ್ಧಾದಲ್ಲಿ ಬಿಜೆಪಿ ಶಾಸಕರೇ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿದ್ದಾರೆ. ತಮ್ಮ ಜನ್ಮದಿನದ ನಿಮಿತ್ತ ಸ್ಥಳೀಯ ಜನರನ್ನು ಮನೆಗೆ ಕರೆಸಿ ರೇಷನ್​ ವಿತರಣೆ ಮಾಡಿದ್ದಾರೆ. ರೇಷನ್​​ಗಾಗಿ ಶಾಸಕರ ಮನೆಯ ಎದುರು ಜನರು ಗುಂಪುಗುಂಪಾಗಿ ಸೇರಿದ್ದರು. ಅಲ್ಲಿ ಯಾವುದೇ ಸಾಮಾಜಿಕ ಅಂತರ ಕಂಡು ಬರಲಿಲ್ಲ.
ವಾರ್ಧಾದ ಆರ್ವಿ ಕ್ಷೇತ್ರದ ಬಿಜೆಪಿ ಶಾಸಕ ದಾದರಾವ್ ಕೆಚೆ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತ ಜನರಿಗೆ ಗೋಧಿ ಮತ್ತು ಅಕ್ಕಿಯನ್ನು ವಿತರಿಸಿದ್ದಾರೆ.
ಈ ರೇಷನ್​ಗಾಗಿ 100ಕ್ಕೂ ಹೆಚ್ಚು ಮಂದಿ ಅವರ ಮನೆ ಹೊರಗೆ ಪರಸ್ಪರ ಅಂತರ ಕಾಯ್ದುಕೊಳ್ಳದೆ ಸರತಿ ಸಾಲಿನಲ್ಲಿ ನಿಂತಿದ್ದರು. ಅಲ್ಲಲ್ಲಿ ಗುಂಪಾಗಿ ನಿಂತು ಮಾತನಾಡುತ್ತಿದ್ದರು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಅವರನ್ನೆಲ್ಲ ಚದುರಿಸಿದ್ದಾರೆ. ದೂರದಲ್ಲಿ ನಿಲ್ಲಿ ಎಂದು ಹೇಳಿದ್ದಾರೆ.
ಆದರೆ ಈ ಘಟನೆ ಬಗ್ಗೆ ಬಿಜೆಪಿ ಎಂಎಲ್​ಎ ಬೇರೆಯದೇ ಕತೆ ಹೇಳಿದ್ದಾರೆ. ನಾನು ಪ್ರತಿವರ್ಷವೂ ನನ್ನ ಜನ್ಮದಿನದಂದು ಬಡವರಿಗೆ ರೇಷನ್​ ನೀಡುತ್ತೇನೆ. ಈ ಬಾರಿ 21 ಜನರಿಗೆ ಮಾತ್ರ ರೇಷನ್​ ನೀಡಲು ನಿರ್ಧರಿಸಿದ್ದೆ. ಆದರೆ ಪ್ರತಿಪಕ್ಷ ಇದರಲ್ಲೂ ಪಿತೂರಿ ಮಾಡಿದೆ. 100ಕ್ಕೂ ಹೆಚ್ಚು ಜನರನ್ನು ನಮ್ಮನೆ ಎದುರು ಕಳಿಸಿತ್ತು ಎಂದು ಹೇಳಿ ನುಣುಚಿಕೊಂಡಿದ್ದಾರೆ.
ಶಾಸಕರ ಮನೆಯ ಎದುರು ನೂರಾರು ಜನರು ರೇಷನ್​ಗಾಗಿ ನಿಂತಿದ್ದ ಫೋಟೋ ಎಲ್ಲೆಡೆ ವೈರಲ್​ ಆಗಿದೆ. ಪ್ರಧಾನಿ ಮೋದಿ ಸೇರಿ ಹಲವು ಪ್ರಮುಖ ನಾಯಕರು ಕರೊನಾ ವಿರುದ್ಧ ಹೋರಾಟಕ್ಕೆ ಅರಿವು ಮೂಡಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಸಾರಿಸಾರಿ ಹೇಳುತ್ತಿದ್ದಾರೆ. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇರುವವರೇ ಅದನ್ನು ಪಾಲಿಸದಿದ್ದರೆ ಹೇಗೆಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + eight =
Remember me
