ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರದ ಮೂರನೇ ಅವಧಿಯ ಚೊಚ್ಚಲ ಬಜೆಟ್​ನಲ್ಲಿ ಭರಪೂರ ಘೋಷಣೆಗಳನ್ನು ಮಾಡಲಾಗಿದ್ದು, ವಿತ್ತ ಸಚಿವರು ಕ್ಷೇತ್ರ ವಲಯಕ್ಕೆ ಅನುಗುಣವಾಗಿ ಬಜೆಟ್​​​ ಮಂಡನೆ ಮಾಡಿದ್ದು, ಶಿಕ್ಷಣ, ಉದ್ಯೋಗ, ಕೈಗಾರಿಕೆ, ಮಹಿಳೆ, ಕೃಷಿ, ಸೇರಿದಂತೆ ಅನೇಕ ಕ್ಷೇತ್ರಗಳಿಗೆ ನಿರ್ಣಾಯಲ ಘೋಷಣೆಗಳನ್ನು ಮಾಡಿದ್ದಾರೆ. ಆದರೆ, ಮೋದಿ ಸರ್ಕಾರದ ಬಜೆಟ್​ ಕುರಿತು ಮಾತನಾಡಿರುವ ವಿಪಕ್ಷ ನಾಯಕರು ಇದು ಕುರ್ಚಿ ಉಳಿಸಿಕೊಳ್ಳಲು ಮಾಡಲಾಗಿರುವ ಬಜೆಟ್​ ಎಂದು ಟೀಕಿಸಿದ್ದಾರೆ.
ಬಜೆಟ್​ ಕುರಿತು ಮಾತನಾಡಿದ ಎಸ್​ಪಿ ಸಂಸದ ಅಖಿಲೇಶ್​ ಯಾದವ್​, ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಹೆಚ್ಚಿದ್ದು, ಸರ್ಕಾರ ಆಂಧ್ರಪ್ರದೇಶ ಹಾಗೂ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದು ಸ್ವಾಗತಾರ್ಹ. ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಜೆಟ್​ನಲ್ಲಿ ಯೋಜನೆಗಳನ್ನು ರೂಪಿಸಲಾಗಿದ್ದು, ಪ್ರತಿಬಾರಿಯಂತೆ ಈ ಬಾರಿಯೂ ನೀರಸವಾಗಿದೆ ಎಂದು ಹೇಳಿದ್ದಾರೆ.
#WATCH| Post Budget 2024: Samajwadi Party chief Akhilesh Yadav says "…'Sarkaar bachani hai toh acchi baat hai ki Bihar aur Andhra Pradesh ko vishesh yojnao se joda gaya hai'…They have increased unemployment in the last 10 years…"pic.twitter.com/mIRgt11Jgk
ಶಿರೋಮಣಿ ಅಕಾಲಿದಳದ ಸಂಸದೆ, ಮಾಜಿ ಕೇಂದ್ರ ಸಚಿವೆ ಹರ್​ಸಿಮ್ರತ್​ ಕೌರ್​ ಮಾತನಾಡಿ, ರೈತರ ಸಾಲಮನ್ನಾ ಹಾಗೂ ಎಂಎಸ್​ಪಿಗೆ ಕಾನೂನು ಮಾನ್ಯತೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆರ್ಥಿಕ ಸಮೀಕ್ಷೆಯ ಪ್ರಕಾತ ಶೇ. 50ರಷ್ಟು ಯುವಕರು ಯುವಕರು ನಿರುದ್ಯೋಗ, ಹಣದುಬ್ಬರ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿರೀಕ್ಷೆಯಲ್ಲಿದ್ದೆವು. ಆದರೆ, ಅದ್ಯಾವುದು ಆಗಿಲ್ಲ ಎಂದು ಹೇಳಿದ್ದಾರೆ.
#WATCH| Ahead of Union Budget, Shiromani Akali Dal MP Harsimrat Kaur Badal says, "… I expect that the farmer loans are waived and that MSP is made a legal guarantee… The economic survey shows that 50% of the youth of India lacks the necessary skills to even land jobs.…pic.twitter.com/w0w6LRMRT2
ಇದನ್ನೂ ಓದಿ:ರಾಜೀನಾಮೆ ಕೇಳುವ ನೈತಿಕ ಹಕ್ಕು ಬಿಜೆಪಿಗಿಲ್ಲ, ಬೇಕಿದ್ದರೆ ಉಚ್ಚಾಟಿಸಲಿ; ಸ್ವಪಕ್ಷೀಯರ ವಿರುದ್ಧವೇ ಗುಡುಗಿದ ಶಾಸಕ ಹೆಬ್ಬಾರ್
ಈ ಕುರಿತು ಮಾತನಾಡಿರುವ ಟಿಎಂಸಿ ಸಂಸದ ಕಲ್ಯಾಣ್​ ಬ್ಯಾನರ್ಜಿ, ಸರ್ಕಾರವು ಈ ಕ್ಷಣದಲ್ಲಿ ತನಗೆ ಯಾರನ್ನು ಮುದ್ದು ಮಾಡಬೇಕು ಅನ್ನಿಸುತ್ತಿದೆಯೋ ಅಂತಹವರಿಗಾಗಿ ಈ ಬಜೆಟ್​ಅನ್ನು ಮಂಡಿಸಿದೆ. ಈ ಬಜೆಟ್​ ರಾಜಕೀಯ ಲಾಭಕ್ಕಾಗಿ ಮಾಡಲಾಗಿದ್ದು, ಪಶ್ಚಿಮ ಬಂಗಾಳಕ್ಕೆ ವಿಶೇಷ ಅನುದಾನವನ್ನು ನೀಡಲಾಗಿಲ್ಲ. ಕೇಂದ್ರ ಸರ್ಕಾರದ ಈ ಬಜೆಟ್​ಅನ್ನು ನೋಡಿದರೆ ಇವರು ಬಂಗಾಳಿಗರನ್ನು ಕಂಡರೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಕಾಣುತ್ತದೆ. ಮುಂದಿನ ದಿನಗಳಲ್ಲಿ ಬಂಗಾಳದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಾಗುವುದು.
#WATCH| Delhi | On Union Budget, TMC MP says Kalyan Banerjee says, "This is a 'kursi bachao' budget."pic.twitter.com/YJ4ocerVAT
ಈ ಕುರಿತು ಮಾತನಾಡಿರುವ ಸಂಸದ ಪಪ್ಪು ಯಾದವ್​, ಇಂದು ಮಂಡಿಸಿದ ಬಜೆಟ್​ನಲ್ಲಿ ನಾಲ್ಕು ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಹೇಳಿದ್ದಾರೆ. ಆದರೆ, ಕಳೆದ 10 ವರ್ಷಗಳಲ್ಲಿ ಇವರು ಎಷ್ಟು ಕೋಟಿ ಉದ್ಯೋಗ ನೀಡಿದ್ದಾರೆ ಎಂಬುದಾಗಿ ಮೊದಲು ತಿಳಿಸಬೇಕು. ಮೋದಿ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ನಿತೀಶ್​ ಕುಮಾರ್​ ಅವರ ಮಾತಿಗೆ ಬೆಲೆ ಕೊಡಲಾಗಿಲ್ಲ. ಬಿಹಾರಕ್ಕೆ ಯಾವುದೇ ಅನುದಾನವನ್ನು ಘೋಷಿಸಲಾಗಿಲ್ಲ. ಯಾವುದೇ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ಘೋಷಿಸಲಾಗಿಲ್ಲ. ಹಿಂದಿನಂತೆ ಈ ಬಜೆಟ್​ ಕೂಡ ನೀರಸವಾಗಿತ್ತು ಎಂದು ಸಂಸದ ಪಪ್ಪು ಯಾದವ್​ ಕಿಡಿಕಾರಿದ್ದಾರೆ.
#WATCH| On the announcements made for Bihar in#UnionBudget2024, independent MP Pappu Yadav says, "…They are saying that they will give 4 cr jobs, how many jobs have you given in last 10 years? What about the issue of migration from Bihar?… Nitish Kumar is a kingmaker but…pic.twitter.com/v4lUjyfgr9
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
