ಜೈಪುರ:ತೀವ್ರ ವಿರೋಧದ ನಡುವೆಯೂ 24 ವರ್ಷದ ಯುವತಿಯೊಬ್ಬಳು ಪ್ರೀತಿಸಿ ಮದುವೆಯಾದ ಕಾರಣಕ್ಕೆ ಆಕೆಯ ಮನೆಯವರೇ ಕೊಲೆಗೈದಿರುವ ಪ್ರಕರಣವೊಂದು ರಾಜಸ್ಥಾನದ ರಾಜಸ್ಥಾನದ ಝಲಾವರ್‌ನಲ್ಲಿ ನಡೆದಿದೆ.
ಇದನ್ನೂ ಓದಿ:ಗ್ರೆಟರ್ ಬೆಂಗಳೂರು ಮಾಸ್ಟರ್ ಪ್ಲಾನ್ ಅಂತಿಮ ಹಂತದಲ್ಲಿದೆ: ಡಿಸಿಎಂ ಡಿ ಕೆ ಶಿವಕುಮಾರ್
ಮೂಲಗಳ ಪ್ರಕಾರ, ಯುವತಿಯ ಕುಟುಂಬದ ಸದಸ್ಯರು ಮೊದಲು ಆಕೆಯ ಗಂಡನ ಎದುರೇ ಅಪಹರಿಸಿದ್ದಾರೆ. ನಂತರ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಳಿಕ ಆಕೆಯ ದೇಹವನ್ನು ಸ್ಮಶಾನದ ಮೈದಾನದಲ್ಲಿ ಸುಟ್ಟಲಾಗಿದೆ ಎನ್ನಲಾಗಿದೆ.
ಮಹಿಳೆ ತನ್ನ ಕುಟುಂಬದ ಇಚ್ಛೆಗೆ ವಿರುದ್ಧವಾಗಿ ರವಿ ಭೀಲ್ ಯುವಕನನ್ನು ವಿವಾಹವಾಗಿದ್ದಳು ಎಂಬ ಕಾರಣಕ್ಕೆ ಈ ಘಟನೆ ನಡೆದಿದೆ ಎಂದು ಪೊಲೀಸರ ಪೊಲೀಸರ ತನಿಖೆಯಿಂದ ಮಾಹಿತಿ ಹೊರಬಿದ್ದಿದೆ. ಹಾಗೂ ಕೊಲೆಗೆ ಮುನ್ನ ತಮ್ಮ ಕುಟುಂಬ ಸದಸ್ಯರ ಕೋಪದಿಂದ ತಪ್ಪಿಸಿಕೊಳ್ಳಲು ದಂಪತಿಗಳು ಬೇರೆ ಬೇರೆ ಸ್ಥಳಗಳಲ್ಲಿ ತಂಗಿದ್ದರು.
ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ದಂಪತಿಗಳು ಬ್ಯಾಂಕ್‌ಗೆ ಭೇಟಿ ನೀಡುತ್ತಾರೆ ಎಂಬ ಮಾಹಿತಿಯನ್ನು ಆಕೆಯ ಕುಟುಂಬ ಸದಸ್ಯರಿಗೆ ಪಡೆದ ನಂತರ ಮಹಿಳೆಯನ್ನು ಅಪಹರಿಸಲಾಗಿದೆ. ಆಕೆಯ ಪತಿ ದೂರು ನೀಡಲು ಪೊಲೀಸರನ್ನು ಸಂಪರ್ಕಿಸಿದಾಗ ಆಕೆಯ ದೇಹವನ್ನು ಸುಟ್ಟುಹಾಕಲಾಯಿತು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಯುವತಿಯ ದೇಹ ಶೇ.80ಕ್ಕೂ ಹೆಚ್ಚು ಸುಟ್ಟಿತ್ತು ಎನ್ನಲಾಗಿದೆ. ಆಕೆಯ ಕುಟುಂಬ ಸದಸ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಹಿಳೆಯ ಸುಟ್ಟ ಅವಶೇಷಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನಕ್ಕೆ ಕಳುಹಿಸಲಾಗಿದೆ.
ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ: ಥಾಣೆಯ ವ್ಯಕ್ತಿಗೆ 10 ವರ್ಷದ ಕಠಿಣ ಜೈಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − three =
Remember me
