ಬೆಂಗಳೂರು:ಈಗಾಗಲೇ ಹಲವು ಸೆಲೆಬ್ರಿಟಿಗಳ ಮೇಣದ ಪ್ರತಿಮೆಗಳನ್ನು ಹೊಂದಿರುವ ಲಂಡನ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ರಣವೀರ್ ಸಿಂಗ್ ಅವರ ಮೇಣದ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಇದನ್ನು ರಣವೀರ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಒಂದು ವಿಶೇಷತೆ ಇದೆ.

ದೃಷ್ಟಿಭ್ರಮೆ ಎಂದರೇನು?:ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.
ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ತನ್ನ ಎರಡು ಮೇಣದ ಆಕೃತಿಗಳ ಪಕ್ಕದಲ್ಲಿ ನಿಂತಿರುವ ಚಿತ್ರಗಳನ್ನು ರಣವೀರ್ ಸಿಂಗ್ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.  ಆದರೆ ಈ ಫೋಟೋದಲ್ಲಿರುವ ನಿಜವಾದ ರಣವೀರ್ ಯಾರು? ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೂವರಲ್ಲಿ ನಿಜವಾದ ರಣವೀರ್‌ ಯಾರು ಎನ್ನುವ ಗೊಂದಲ ಅಭಿಮಾನಿಗಳಿಗೆ ಮೂಡಿತ್ತು.ರಣವೀರ್ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ನಾವು ಇಂದು ಅವರ ಅಭಿಮಾನಿಗಳಿ ಒಂದು ಸವಾಲು ನೀಡುತ್ತಿದ್ದೇವೆ. 10 ಸೆಕೆಂಡ್​ನಲ್ಲಿ  ಈ ಫೋಟೋದಲ್ಲಿರುವ ರಣವೀರ್  ಅವರನ್ನು ಪತ್ತೆ ಮಾಡಿ.

A post shared by Ranveer Singh (@ranveersingh)

ರಣವೀರ್ ಸಿಂಗ್ ಮೇಡಮ್ ಟುಸ್ಸಾಡ್ಸ್‌ನಲ್ಲಿ ತನ್ನ ತಾಯಿ ಅಂಜು ಭವ್ನಾನಿಯೊಂದಿಗೆ ತಮ್ಮ ಮೇಣದ ಆಕೃತಿಯನ್ನು ಅನಾವರಣಗೊಳಿಸಿದರು. ಇಷ್ಟು ಜನಪ್ರಿಯ ಸೆಲೆಬ್ರಿಟಿಗಳ ನಡುವೆ ತಮ್ಮ ವಿಗ್ರಹವನ್ನು ಸ್ಥಾಪಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮ್ಯೂಸಿಯಂ ನಿರ್ವಹಣೆಗೆ ಧನ್ಯವಾದಗಳು. ರಣವೀರ್ ಪೋಸ್ಟ್ ಗೆ ಅವರ ಪತ್ನಿ ನಟಿ ದೀಪಿಕಾ ಪಡುಕೋಣೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನನ್ನ ಬಳಿ ಈಗ ಮೂವರು ರಣವೀರರಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ರಣವೀರ್ ಸಿಂಗ್ ಸದ್ಯ ರೋಹಿತ್ ಶೆಟ್ಟಿ ಅಭಿನಯದ ‘ಸಿಂಗಂ ಅಗೇನ್’ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿತ್ತು. ದೀಪಾ ಪಡುಕೋಣೆ, ಅಜಯ್ ದೇವಗನ್, ಕರೀನಾ ಕಪೂರ್ ಮತ್ತು ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ನಿಮಗೆ ಮೇಣದ ಪ್ರತಿಮೆಗಳ ಮಧ್ಯೆ ರಣವೀರ್ ಅವರನ್ನು ಹುಡುಕಲು ಸಾಧ್ಯವಾಗದೆ ಇದ್ದರೆ ನಾವು ನಿಮಗೆ ಉತ್ತರ ಕೊಡುತ್ತೇವೆ ಎರಡು ಮೇಣದ ಪ್ರತಿಮೆಗಳ ಮಧ್ಯೆ ನಿಜವಾದ ರಣವೀರ್​​ ಕೂಡಾ ಇದ್ದಾರೆ. ಗುಲಾಬಿ ಬಣ್ಣದ ಜಾಕೆಟ್, ಕಪ್ಪು ಮುದ್ರಿತ ಕೋಟ್ ಮತ್ತು ಕಣ್ಣಿನ ಕನ್ನಡಕಗಳನ್ನು ಧರಿಸಿರುವುದನ್ನು ಫೋಟೋ ತೋರಿಸಿದೆ. ಇವರಲ್ಲಿ ನಿಜವಾದ ರಣವೀರ್ ಕನ್ನಡಕ ಹಾಕಿಕೊಂಡು ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದಲ್ಲಿ ಮಾರ್ಕ್​​ ಮಾಡಿ ತೋರಿಸಲಾಗಿದೆ.

ನಿಮ್ಮ ಕಣ್ಣಿಗೊಂದು ಸವಾಲು; 5 ಸೆಕೆಂಡುಗಳು ಇಲ್ಲಿ ಅಡಗಿರುವ ಜಿಂಕೆಯನ್ನು ಪತ್ತೆ ಮಾಡಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + six =
Remember me
