ಇಟಾನಗರ:ಅರುಣಾಚಲ ಪ್ರದೇಶದಲ್ಲಿ ಏಕಕಾಲಕ್ಕೆ ನಡೆದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಇವಿಎಂಗೆ ಹಾನಿ ಮತ್ತು ಹಿಂಸಾಚಾರ ನಡೆದಿದ್ದ 8 ಮತಗಟ್ಟೆಗಳಲ್ಲಿ ಏ.26ರಂದು ಮರು ಮತದಾನ ನಡೆಸುವಂತೆ ಭಾರತೀಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಇದನ್ನೂ ಓದಿ:ಭಯೋತ್ಪಾದನಾ ಚಟುವಟಿಕೆ: ಕಾಶ್ಮೀರದ 9 ಕಡೆ ಎನ್​ಐಎ ದಾಳಿ
ಚುನಾವಣಾ ಆಯೋಗವು ಈ 8 ಮತಗಟ್ಟೆಗಳಲ್ಲಿ ನಡೆದಿರುವ ಮತದಾನವನ್ನು ಅನೂರ್ಜಿತಗೊಳಿಸಿದೆ. ಜೊತೆಗೆ ಏಪ್ರಿಲ್ 26ರಂದು ಬೆಳಿಗ್ಗೆ 6ರಿಂದ 2 ಗಂಟೆವರೆಗೆ ಮರುಮತದಾನಕ್ಕೆ ಆದೇಶಿಸಲಾಗಿದೆ ಎಂದು ಉಪ ಮುಖ್ಯ ಚುನಾವಣಾಧಿಕಾರಿ ಲಿಕೆನ್ ಕೊಯು ಮಾಹಿತಿ ನೀಡಿದ್ದಾರೆ.
ಪೂರ್ವ ಕಮೆಂಗ್ ಜಿಲ್ಲೆಯ ಬಮೆಂಗ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರಿಯೋ, ಕುರುಂಗ್ ಕುಮೆಯ ನ್ಯಾಪಿನ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಾಂಗ್ ಲೋಥ್, ಡಿಂಗ್ರರ್, ಬೋಗಿಯಾ ಸಿಯುಮ್, ಜಿಂಬಾರಿ ಮತ್ತು ಮೇಲ್ ಸುಬಾನ್ಸಿರಿ ಜಿಲ್ಲೆಯ ನಾಚೋ ಕ್ಷೇತ್ರ ವ್ಯಾಪ್ತಿಯಲ್ಲಿರುವ ಲೆಂಗಿ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸುವಂತೆ ಆದೇಶಿಸಲಾಗಿದೆ.
ಜೈಲ್​ ಅನುಭವ ಬಿಚ್ಚಿಟ್ಟ ಸೋನುಗೌಡ? ಈ ಚೆಲುವೆಯ ಅಕೌಂಟ್‌ನಲ್ಲಿ ಎಷ್ಟಿದೆ? ಎಷ್ಟು ದುಡಿಯುತ್ತಿದ್ದಾಳೆ? ವಿವರ ಇಲ್ಲಿದೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 11 =
Remember me
