ನವದೆಹಲಿ:ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ನಡೆದ 95ನೇ ಅಕಾಡೆಮಿ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಈವರೆಗೂ ಆಸ್ಕರ್​ ರೇಸ್​ನಲ್ಲಿ ಸ್ಪರ್ಧಿಸುವುದೇ ಕಷ್ಟವಾಗಿದ್ದ ಭಾರತಕ್ಕೆ ಈ ಬಾರಿ ಎರಡು ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ. ಕಾರ್ತಿಕ್​ ಗೊನ್ಸಾಲ್ವಿಸ್​ ನಿರ್ದೇಶನದ ಮತ್ತು ಗುನೀತ್​ ಮೊಂಗಾ ನಿರ್ಮಾಣದ ದಿ ಎಲಿಫೆಂಟ್​ ವಿಸ್ಪರರ್ಸ್​ ಸಾಕ್ಷ್ಯಚಿತ್ರಕ್ಕೆ ಮತ್ತು ಜಾಗತಿಕವಾಗಿ ವೈರಲ್ ಆಗಿರುವ ಎಸ್‌ಎಸ್ ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್‌ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಒಲಿದು ಬಂದಿದೆ.
ಸಾಕ್ಷ್ಯಚಿತ್ರ ವಿಭಾಗದಲ್ಲಿ ದಿ ಎಲಿಫೆಂಟ್​ ವಿಸ್ಪರರ್ಸ್​ ಪ್ರಶಸ್ತಿ ಗೆದ್ದರೆ, ಅತ್ಯುತ್ತಮ ಒರಿಜನಲ್​ ಸಾಂಗ್​ ವಿಭಾಗದಲ್ಲಿ ನಾಟು ನಾಟು ಹಾಡು ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಇದನ್ನೂ ಓದಿ:ಇಬ್ಬರು ನೆಲದ ಮೇಲೆ ಅಸಯ್ಯವಾಗಿ ಮಲಗಿದ್ದರು: IPS​ ಅಧಿಕಾರಿ-ASI ಪತ್ನಿ ವಿರುದ್ಧ ಹೆಡ್​ ಕಾನ್​ಸ್ಟೆಬಲ್​​​ ದೂರು
ಈ ಸಾಲಿನ ಮೊದಲ ಆಸ್ಕರ್​ ಪ್ರಶಸ್ತಿ ಅತ್ಯುತ್ತಮ ಅನಿಮೇಟೆಡ್ ಚಲನಚಿತ್ರಕ್ಕಾಗಿ ಗಿಲ್ಲೆರ್ಮೊ ಡೆಲ್ ಟೊರೊ ನಿರ್ದೇಶನದ ಪಿನೋಚ್ಚಿಯೊಗೆ ಒಲಿಯಿತು. ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ ಸಿನಿಮಾ ಬಹುಪಾಲು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ದಾಖಲೆ ಬರೆಯಿತು. ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಡೇನಿಯಲ್ಸ್, ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಕೆ ಹುಯ್ ಕ್ವಾನ್ ಹಾಗೂ ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ ಜೇಮೀ ಲೀ ಕರ್ಟಿಸ್ ಅವರು ಆಸ್ಕರ್ ಪಡೆದರು
ಆಸ್ಕರ್​ ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಕಂಡಂತಿದೆ1.ಅತ್ಯುತ್ತಮ ಚಿತ್ರ:ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌2.ಅತ್ಯುತ್ತಮ ನಿರ್ದೇಶಕ:ಡೇನಿಯಲ್ ಕ್ವಾನ್ ಮತ್ತು ಡೇನಿಯಲ್ ಸ್ಕೀನೆರ್ಟ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ ಸಿನಿಮಕ್ಕಾಗಿ)3.ಅತ್ಯುತ್ತಮ ನಟಿ:ಮಿಚೆಲ್ ಯೋಹ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ ಸಿನಿಮಕ್ಕಾಗಿ)4.ಅತ್ಯುತ್ತಮ ನಟ:ಬ್ರೆಂಡನ್ ಫ್ರೇಸರ್ (ದಿ ವ್ಹೇಲ್​ ಸಿನಿಮಾಕ್ಕಾಗಿ)5.ಉತ್ತಮ ಪೋಷಷಕ ನಟಿ:ಜೇಮೀ ಲೀ ಕರ್ಟಿಸ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ ಸಿನಿಮಕ್ಕಾಗಿ)6.ಉತ್ತಮ ಪೋಷಕ ನಟ:ಕೆ ಹುಯ್ ಕ್ವಾನ್ (ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌ ಸಿನಿಮಕ್ಕಾಗಿ)7.ಅತ್ಯುತ್ತಮ ಒರಿಜನಲ್​ ಸಾಂಗ್​:ನಾಟು ನಾಟು (ಆರ್​ಆರ್​ಆರ್​)8.ಅತ್ಯುತ್ತಮ ಒರಿಜಿನಲ್​ ಸ್ಕೋರ್​:ಆಲ್​ ಕ್ವೈಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್​9.ಉತ್ತಮ ಒರಿಜಿನಲ್​ ಸ್ಕ್ರೀನ್​ಪ್ಲೇ:ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌10.ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್​ಪ್ಲೇ​:ವ್ಯುಮೆನ್ ಟಾಕಿಂಗ್​11.​ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್​ ಫಿಲ್ಮ್​:ನವಲ್ನಿ12.ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್​ ಸಬ್ಜೆಕ್ಟ್​:ದಿ ಎಲಿಫೆಂಟ್​ ವಿಸ್ಪರರ್ಸ್​13.ಅತ್ಯುತ್ತಮ ಅನಿಮೇಟೆಡ್​ ಫೀಚರ್​ ಫಿಲ್ಮ್​:ನಿರ್ದೇಶಕ ಗಿಲ್ಲೆರ್ಮೊ ಡೆಲ್ ಟೊರೊ ಅವರ ಪಿನೋಚ್ಚಿಯೋ14.ಅತ್ಯುತ್ತಮ ಅನಿಮೇಟೆಡ್​ ಕಿರುಚಿತ್ರ:ದಿ ಬಾಯ್​, ದಿ ಮೋಲ್​, ದಿ ಫಾಕ್ಸ್​ ಆ್ಯಂಡ್​ ದಿ ಹಾರ್ಸ್​15.ಅತ್ಯುತ್ತಮ ಲೈವ್​ ಆ್ಯಕ್ಸನ್​ ಕಿರುಚಿತ್ರ:ಆ್ಯನ್​ ಐರಿಷ್​ ಗುಡ್​ಬೈ16.ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್​ ಫಿಲ್ಮ್​:ಆಲ್​ ಕ್ವೈಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್​17:ಅತ್ಯುತ್ತಮ ಸಿಮಿಮ್ಯಾಟೋಗ್ರಫಿ:ಆಲ್​ ಕ್ವೈಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್​18.ಅತ್ಯುತ್ತಮ ಪ್ರೊಡಕ್ಷನ್​ ಡಿಸೈನ್​:ಆಲ್​ ಕ್ವೈಟ್​ ಆನ್​ ದಿ ವೆಸ್ಟರ್ನ್​ ಫ್ರಂಟ್​19.ಉತ್ತಮ ಸೌಂಡ್​:ಟಾಪ್​ ಗನ್​:ಮೆವರಿಕ್​20.ಅತ್ಯುತ್ತಮ ವಿಷ್ಯುವಲ್​ ಎಫೆಕ್ಟ್​:ಅವರಾತ್​: ದಿ ವೇ ಆಫ್​ ವಾಟರ್​21.ಅತ್ಯುತ್ತಮ ವಸ್ತ್ರ ವಿನ್ಯಾಸ:ಬ್ಲ್ಯಾಕ್​ ಪ್ಯಾಂಥರ್​: ವಾಕಂಡ ಫಾರೆವರ್​22.ಅತ್ಯುತ್ತಮ ಕೇಶವಿನ್ಯಾಶ ಮತ್ತು ಮೇಕಪ್​:ದಿ ವ್ಹೇಲ್​23.ಅತ್ಯುತ್ತಮ ಫಿಲ್ಮ್​ ಎಡಿಟಿಂಗ್​​:ಎವೆರಿಥಿಂಗ್ ಎವೆರಿವೇರ್ ಆಲ್ ಅಟ್ ಒನ್ಸ್‌
ಇದನ್ನೂ ಓದಿ:ಸರ್ಕಾರಿ ನೌಕರರಿಗೆ ಸಾಲ ಸಂಕಷ್ಟ: ಆನ್​ಲೈನ್​ನಲ್ಲಿ ಕೆಜಿಐಡಿ ಸಾಲದ ಅರ್ಜಿ ಸಲ್ಲಿಕೆಗೆ ತೊಂದರೆ
ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಜಿಮ್ಮಿ ಕಿಮ್ಮೆಲ್ (ಮೂರನೇ ಬಾರಿಗೆ) ಆಸ್ಕರ್‌ ಅನ್ನು ಆಯೋಜಿಸಿದ್ದಾರೆ.(ಏಜೆನ್ಸೀಸ್​)
ಇಬ್ಬರು ನೆಲದ ಮೇಲೆ ಅಸಯ್ಯವಾಗಿ ಮಲಗಿದ್ದರು: IPS​ ಅಧಿಕಾರಿ-ASI ಪತ್ನಿ ವಿರುದ್ಧ ಹೆಡ್​ ಕಾನ್​ಸ್ಟೆಬಲ್​​​ ದೂರು

ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

ಹೊಯ್ಸಳ ಅಲ್ಲ, ಗುರುದೇವ್ ಹೊಯ್ಸಳ; ಬದಲಾಯಿತು ಡಾಲಿ ಧನಂಜಯ 25ನೇ ಚಿತ್ರದ ಶೀರ್ಷಿಕೆ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 1 =
Remember me
