ನವದೆಹಲಿ:ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿರುವ ಆಸ್ಕರ್​ಗೆ 2023ರ ನಾಮಿನೇಷನ್ ಪಟ್ಟಿ ಬಿಡುಗಡೆ ಆಗಿದ್ದು, ‘ಆರ್​ಆರ್​ಆರ್’​ ಆರ್ಭಟ ಇಲ್ಲೂ ಮುಂದುವರಿದಿದೆ. ಅಂದರೆ, ‘ಆರ್​ಆರ್​ಆರ್’​ ಸಿನಿಮಾ ಕೂಡ ಸೇರಿದಂತೆ ಮೂರು ಭಾರತೀಯ ಸಿನಿಮಾಗಳು 2023ರ ಆಸ್ಕರ್​ ನಾಮಿನೇಷನ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
ಅಮೆರಿಕದ ಕ್ಯಾಲಿಫೋರ್ನಿಯಾ ಬೇವರ್ಲಿ ಹಿಲ್ಸ್‌ನ ಸ್ಯಾಮುಯೆಲ್‌ ಗೋಲ್ಡ್‌ವಿನ್‌ ಚಿತ್ರಮಂದಿರದಲ್ಲಿ ಇಂದು ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಈ ನಾಮಿನೇಷನ್‌ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಭಾರತೀಯ ಸಿನಿಮಾಗಳಾದ ‘ಆರ್​ಆರ್​ಆರ್’​, ‘ಆಲ್​ ದ್ಯಾಟ್ ಬ್ರೀಥ್ಸ್​’ ಮತ್ತು ‘ದ ಎಲಿಫೆಂಟ್ ವಿಷ್ಪರ್ಸ್’​ ಸ್ಥಾನ ಪಡೆದಿದ್ದು, ಭಾರತಕ್ಕೆ ಆಸ್ಕರ್ ಪ್ರಶಸ್ತಿಯ ನಿರೀಕ್ಷೆ ಹುಟ್ಟಿಸಿವೆ.
‘ಆರ್​ಆರ್​ಆರ್’​ನ ‘ನಾಟು ನಾಟು’ ಗೀತೆಗೆ ಈ ಸಲದ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದ ಬೆನ್ನಿಗೇ ಅದು ಬೆಸ್ಟ್​ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆಸ್ಕರ್​ಗೆ ನಾಮಿನೇಟ್ ಆಗಿದೆ. ಹಾಗೆಯೇ ಬೆಸ್ಟ್ ಡಾಕ್ಯುಮೆಂಟರಿ ಫೀಚರ್ ಫಿಲ್ಮ್​ ಕೆಟಗರಿಯಲ್ಲಿ ‘ಆಲ್​ ದ್ಯಾಟ್ ಬ್ರೀಥ್ಸ್’ ಮತ್ತು ಬೆಸ್ಟ್ ಡಾಕ್ಯುಮೆಂಟರಿ ಶಾರ್ಟ್​ ಫಿಲ್ಮ್ ವಿಭಾಗದಲ್ಲಿ ‘ದ ಎಲಿಫೆಂಟ್ ವಿಷ್ಪರ್ಸ್​’ ನಾಮಿನೇಟ್ ಆಗಿದೆ. ಆಸ್ಕರ್​ಗೆ ನಾಮಿನೇಟ್ ಆಗಬಹುದಾದ ಅಂತಿಮ 300 ಸಿನಿಮಾಗಳ ಪಟ್ಟಿಯಲ್ಲಿದ್ದ ‘ಕಾಂತಾರ’, ‘ವಿಕ್ರಾಂತ್ ರೋಣ’ ನಾಮಿನೇಷನ್​ಗೆ ತಲುಪದ್ದರಿಂದ ಕನ್ನಡದ ಯಾವ ಚಿತ್ರವೂ ನಾಮಿನೇಷನ್​ನಲ್ಲಿ ಇಲ್ಲದಂತಾಗಿದೆ.
Congratulations@MMKeeravaaniGaru and@boselyricistGaru on achieving another well-deserved and monumental feat…
This song will forever hold a special place in my heart.@ssrajamouli@alwaysramcharan#RRRMovie#NaatuNaatu#Oscars95pic.twitter.com/YYmtD0kVou
— Jr NTR (@tarak9999)January 24, 2023

8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

ಪಾನಮತ್ತ ಯುವತಿ ಮುಂಬೈನಲ್ಲಿ ಕುಳಿತು ಜೊಮ್ಯಾಟೊದಲ್ಲಿ ಬೆಂಗಳೂರಿನ 2,500 ರೂ. ಮೌಲ್ಯದ ಬಿರಿಯಾನಿ ಆರ್ಡರ್​ ಮಾಡಿದ್ಲು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 2 =
Remember me
