ಲಾಸ್​ ಏಜೆಂಲಿಸ್:ಆಸ್ಕರ್ ಪ್ರಶಸ್ತಿ 2024ರ ಸಮಾರಂಭವು ಇದೀಗ ಎಲ್ಲರ ಗಮನಸೆಳೆಯುತ್ತಿದ್ದು, ಯಾರ ಮುಡಿಗೆ ಪ್ರತಿಷ್ಟಿತ ಪ್ರಶಸ್ತಿಗಳು ಸೇರಲಿವೆ ಎಂಬ ನಿರೀಕ್ಷೆಗಳು ಸಿನಿಪ್ರೇಕ್ಷಕರಲ್ಲಿ ಹೆಚ್ಚಿದೆ. ಈ ಮಧ್ಯೆ ವೇದಿಕೆಗೆ ಬೆತ್ತಲಾಗಿ ಬಂದ ಜನಪ್ರಿಯ ಡಬ್ಲ್ಯೂಡಬ್ಲ್ಯೂಇ ಸೂಪರ್​​ಸ್ಟಾರ್​, ಹಾಲಿವುಡ್​ ನಟ ಜಾನ್ ಸೀನಾ ನೋಡುಗರ ಹುಬ್ಬೇರುವಂತೆ ಮಾಡಿದ್ದಾರೆ. ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗುತ್ತಿದೆ.
ಇದನ್ನೂ ಓದಿ:ಅಭಿವೃದ್ಧಿಗೆ ದುಡ್ಡೇ ಇಲ್ಲ ಎನ್ನುತ್ತಿರುವ ಬಿಜೆಪಿಯವರಿಗೆ ಸುಳ್ಳೇ ಮನೆದೇವರು: ಸಿಎಂ ಸಿದ್ದರಾಮಯ್ಯ
ಹೆಚ್ಚು ನಿರೀಕ್ಷಿತ ಪ್ರಶಸ್ತಿಗಳಲ್ಲಿ ಒಂದಾದ ಬೆಸ್ಟ್​ ಕಾಸ್ಟ್ಯೂಮ್​ ಡಿಸೈನ್ ಅವಾರ್ಡ್​ ಕೊಡಲು ವೇದಿಕೆಗೆ ವಿಭಿನ್ನ ರೀತಿ ಮೋಡಿ ಮಾಡಲು ಆಗಮಿಸಿದ ಜಾನ್​ ಸೀನಾ, ಪ್ರಶಸ್ತಿ ಘೋಷಿಸಲು ನಗ್ನವಾಗಿ ಮೈಕ್ ಮುಂದೆ ನಿಂತು ಮಾತಾಡಿರುವುದು ಸದ್ಯ ನೆಟ್ಟಿಗರನ್ನು ತಬ್ಬಿಬ್ಬಾಗುವಂತೆ ಮಾಡಿದೆ. ಧೈರ್ಯದಿಂದ ಬಟ್ಟೆಯಿಲ್ಲದೆ ವೇದಿಕೆಯ ಮೇಲೆ ಹೋದ ಜಾನ್​ ಸೀನ್​ ಅವರ ಫೋಟೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಆತಿಥೇಯ ಜಿಮ್ಮಿ ಕಿಮ್ಮೆಲ್ ಹಾಗೂ ಜಾನ್​ ಸೀನಾ ಅವರ ತಮಾಷೆಯು ನೋಡುಗರನ್ನು ಮೋಡಿ ಮಾಡಿದ್ದು, ಜಾನ್​ ವೇಷಭೂಷಣದ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಗಣ್ಯರ ಮುಂದೆ ಮಾತುಕತೆ ನಡೆಸಿದ್ದಾರೆ. ಆಸ್ಕರ್​ ಪ್ರಶಸ್ತಿ 2024ರ ಸಾಲಿನಲ್ಲಿ ಈ ಬಾರಿ ಹೆಚ್ಚುವರಿ ಅವಾರ್ಡ್​ಗಳು ಓಪನ್​ಹೈಮರ್​ ಚಿತ್ರಕ್ಕೆ ಒಲಿದುಬಂದಿರುವುದು ಮತ್ತಷ್ಟು ವಿಶೇಷ,(ಏಜೆನ್ಸೀಸ್).
‘ನಿಮ್ಮ ಸೆರಗು ಎತ್ಕೊಳ್ಳಿ’​ ಅಂದ್ರೆ…..ಈ ಮಹಿಳೆ ಹಿಂಗಾ ಅನ್ನೋದು! ಇಲ್ಲಿದೆ ನೋಡಿ ವೈರಲ್ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 2 =
Remember me
