ಮುಂಬೈ:ಕಳೆದ ಎರಡು ತಿಂಗಳ ಹಿಂದೆ ಹಸೆಮಣೆಯೇರಿದ್ದ ಬಾಲಿವುಡ್​ ತಾರಾ ಜೋಡಿ, ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​​ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಸದ್ಯದಲ್ಲೇ ನಾವು ತಂದೆ-ತಾಯಿ ಆಗುತ್ತಿದ್ದೇವೆ, ಇನ್ನು ಕೆಲವೇ ತಿಂಗಳಲ್ಲಿ ನಮ್ಮ ಮನೆಗೆ ಮಗು ಬರಲಿದೆ ಎಂದು ಆಲಿಯಾ ಭಟ್​ ಹೇಳಿಕೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡಿರುವ ನಟಿ ಆಲಿಯಾ, ಸದ್ಯದಲ್ಲೇ ನಮ್ಮ ಮಗು ಬರಲಿದೆ ಎಂದು ಬರೆದುಕೊಂಡಿದ್ದಾರೆ.
ಆಸ್ಪತ್ರೆಯಲ್ಲಿನ ಸ್ಕ್ಯಾನ್​ ಸೆಂಟರ್​​ನಲ್ಲೇ ಆಲಿಯಾ ಮಲಗಿರುವ ಚಿತ್ರವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಗಂಗೂಬಾಯಿ ಕಾಥಿಯಾವಾಡಾ ಬಳಿಕ ಆರ್​​ಆರ್​​ಆರ್​​ ಆಲಿಯಾಭಟ್​​ಗೆ ಭಾರೀ ಖ್ಯಾತಿ ತಂದುಕೊಟ್ಟಿತ್ತು. ಸದ್ಯ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.(ಏಜೆನ್ಸೀಸ್​)
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ತೀವ್ರ ಕುತೂಹಲ ಮೂಡಿಸಿದ ಶಿಂಧೆ-ಠಾಕ್ರೆ ಮಾತುಕತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
